ಬೆಂಗಳೂರು: ರಾಜ್ಯಮಟ್ಟದ ಮುಕ್ತ ಯೋಗಾಸನ ಚಾಂಪಿಯನ್ ಶಿಪ್ -2023ರಲ್ಲಿ ಹಲವು ಪ್ರಶಸ್ತಿ ಪಡೆದ ಅಮರ ಯೋಗ ಕೇಂದ್ರ ಗುತ್ತಿಗಾರು ವಿದ್ಯಾರ್ಥಿಗಳು. ಆಚಾರ್ಯ ಯೋಗ ಯೂತ್ ಕ್ಲಬ್ (ರಿ ) ಬೆಂಗಳೂರು, ಇದರ ಆಶ್ರಯದಲ್ಲಿ ಜೂಲೈ ೩೦ ನೇ ಆದಿತ್ಯವಾರ ದಂದು ಬೆಂಗಳೂರಿನ ಶ್ರೀರಾಜೇಶ್ವರಿ ವಿದ್ಯಾ ಶಾಲಾ ಕೆಂಚೇನಹಳ್ಳಿ ಯಲ್ಲಿ ನಡೆದ ರಾಜ್ಯ ಮಟ್ಟದ ಮುಕ್ತ ಯೋಗಾಸನ ಚಾಂಪಿಯನ್ ಶಿಪ್ ನಲ್ಲಿ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಗುತ್ತಿಗಾರು, ಅಮರ ಯೋಗ ಕೇಂದ್ರ ದ ವಿದ್ಯಾರ್ಥಿಗಳು ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

8 ವರ್ಷದ ವಯೋಮಿತಿಯ ಬಾಲಕರ ವಿಭಾಗದಲ್ಲಿ ಹವ್ಯಾಸ್ ಕೆ. ಟಿ ಕೊರತ್ಯಡ್ಕ ಮನೆ 9ನೇ ಸ್ಥಾನ,
8 ವರ್ಷದ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಗೌರಿತ. ಕೆ. ಜೆ 8ನೇ ಸ್ಥಾನ,
8 ರಿಂದ 10 ವರ್ಷದ ವಯೋಮಿತಿಯ ಬಾಲಕರ ವಿಭಾಗದಲ್ಲಿ ಕೆ. ಸಿ. ಮಣಿಪ್ರಕಾಶ್ ಕಡೋಡಿ 9ನೇ ಸ್ಥಾನ ಪಡೆದಿರುತ್ತಾರೆ. “ಎ”ಗ್ರೇಡ್ ವಿಭಾಗದಲ್ಲಿ ಗೌರಿತ ಕೆ. ಜೆ. ಜಿಶಾ. ಕೊರಂಬಡ್ಕ, ಹವ್ಯಾಸ್ ಕೊರೆತ್ಯಡ್ಕ, ಹರ್ಷಿಣಿ ಕೊರ್ತೆಡ್ಕ, ಮನ್ವಿಶ್ ಕೋಡೊಂಬು, ರಮಿಕ್ಷಾ ಮೀನಾಜೆ, ರೇಷ್ಮಾ ಮಾಡಬಾಕಿಲು, ನಿಹಾನಿ ವಾಲ್ತಾಜೆ, ಮಣಿಪ್ರಕಾಶ್ ಕಡೋಡಿ, ಹವೀಕ್ಷ ಯಸ್. ಆರ್. ಹನಿಕ್ಷ.ಕುಲಶೆಟ್ಟಿ ಭಾಗವಹಿಸಿದ್ದು ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ. ವಿದ್ಯಾರ್ಥಿಗಳಿಗೆ ಯೋಗ ಶಿಕ್ಷಣ ಶಿಕ್ಷಕ ಶರತ್ ಮರ್ಗಿಲಡ್ಕ ತರಬೇತಿ ನೀಡಿರುತ್ತಾರೆ.
