ಸ್ನ್ಯಾಪ್‌ಚಾಟ್‌ ಮೂಲಕ ಯುವಕನೊಂದಿಗೆ ಪ್ರೀತಿ – ದೇಶ ಬಿಟ್ಟು ಪಾಕಿಸ್ತಾನಕ್ಕೆ ಬಂದ ಚೀನಾ ಯುವತಿ – ಕರುನಾಡ ನ್ಯೂಸ್


ಬೀಜಿಂಗ್: ಪಾಕಿಸ್ತಾನ (Pakistan), ಭಾರತ (India) ಆಯ್ತು.. ಈಗ ಚೀನಾ ದೇಶ ಗಡಿಯಾಚೆಯ ಪ್ರೇಮಕಥೆ ವಿಷಯಕ್ಕೆ ಸುದ್ದಿಯಾಗಿದೆ. ಚೀನಾದ (China) ಯುವತಿಯೊಬ್ಬಳು ತನ್ನ ದೇಶ ತೊರೆದು ಪಾಕಿಸ್ತಾನಿ ವ್ಯಕ್ತಿಯನ್ನು ಸೇರಲು ಖೈಬರ್‌ ಪಖ್ತುಂಖ್ವಾ ಪ್ರಾಂತ್ಯಕ್ಕೆ ಎಂಟ್ರಿ ಕೊಟ್ಟಿದ್ದಾಳೆ. ಗಾವೊ ಫೆಂಗ್ ಹೆಸರಿನ ಯುವತಿ ಮೂರು ತಿಂಗಳ ಭೇಟಿ ವೀಸಾದಲ್ಲಿ ಚೀನಾದಿಂದ ಗಿಲ್ಗಿಟ್ ಮೂಲಕ ರಸ್ತೆ ಮಾರ್ಗವಾಗಿ ಇಸ್ಲಾಮಾಬಾದ್‌ಗೆ ಬಂದಿದ್ದಾರೆ. 21 ವರ್ಷದ ಯುವತಿಯನ್ನು ಅಫ್ಘಾನಿಸ್ತಾನದ ಗಡಿಯಲ್ಲಿರುವ ಜಾವೇದ್ (18) ಕರೆದೊಯ್ದಿದ್ದಾನೆ. ಅಫ್ಘಾನಿಸ್ತಾನದ ಗಡಿಗೆ ಹೊಂದಿಕೊಂಡಿರುವ ಬಜೌರ್ ಜಿಲ್ಲೆಯಲ್ಲಿ ಭದ್ರತಾ ಪರಿಸ್ಥಿತಿಯಿಂದಾಗಿ ಜಾವೇದ್ ತನ್ನ ಊರಿನ ಬದಲು ಲೋವರ್ ದಿರ್ ಜಿಲ್ಲೆಯ ಸಮರ್‌ಬಾಗ್ ತೆಹಸಿಲ್‌ನಲ್ಲಿರುವ ಚಿಕ್ಕಪ್ಪನ ಮನೆಗೆ ಆಕೆಯನ್ನು ಕರೆದೊಯ್ದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರೂ ಕಳೆದ ಮೂರು ವರ್ಷಗಳಿಂದ ಸ್ನ್ಯಾಪ್‌ಚಾಟ್ (Snapchat) ಮೂಲಕ ಸಂಪರ್ಕದಲ್ಲಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದರು. ನಂತರದ ದಿನಗಳಲ್ಲಿ ಸ್ನೇಹ ಪ್ರೀತಿಗೆ ತಿರುಗಿದೆ. ಕೊನೆಗೆ ತನ್ನ ಪ್ರಿಯಕರನನ್ನ ಸೇರಲು ಯುವತಿ ದೇಶವನ್ನು ತೊರೆದು ಬಂದಿದ್ದಾಳೆ. ಯುವತಿ ಪ್ರಯಾಣದ ದಾಖಲೆಗಳು ಸರಿಯಾಗಿವೆ. ಆಕೆ ಜಾವೇದ್ ಅವರೊಂದಿಗೆ ಇನ್ನೂ ಮದುವೆಯಾಗಿಲ್ಲ. ಯುವತಿಗೆ ಸೂಕ್ತ ಭದ್ರತೆಯನ್ನು ಒದಗಿಸಲಾಗಿದೆ. ಭದ್ರತಾ ಕಾಳಜಿಯಿಂದಾಗಿ ಆಕೆ ಮುಕ್ತವಾಗಿ ಓಡಾಡಿಕೊಂಡಿರಲು ಅವಕಾಶ ಕೊಟ್ಟಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.





Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ