ಬಾಳೆಹೊನ್ನೂರು: ಭಾರೀ ಮಳೆ ಹಿನ್ನೆಲೆ ಬಾಳೆಹೊನ್ನೂರು-ಕಳಸ ರಸ್ತೆಗೆ ಬಿದ್ದ ಮರ – ಕರುನಾಡ ನ್ಯೂಸ್


ಬಾಳೆಹೊನ್ನೂರು: ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಬಾಳೆಹೊನ್ನೂರು-ಕಳಸ ಮಾರ್ಗ‌ ಮಧ್ಯೆ ತೆಪ್ಪದಗಂಡಿ ಎಂಬಲ್ಲಿ ಭಾರಿ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಸಂಚಾರ ಸ್ಥಗಿತಗೊಂಡಿತ್ತು. ಈ ವೇಳೆ ಸ್ಥಳೀಯರು ಹಾಗೂ ಯಾತ್ರಿಕರ ಪರಿಶ್ರಮದಿಂದ, ಕ್ರೇನ್ ಮೂಲಕ ರಸ್ತೆಗೆ ಬಿದ್ದ‌ ಎರಡು ಮರಗಳನ್ನು ತೆರವುಗೊಳಿಸಿದ್ದಾರೆ. ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ಕಂಬಗಳು ನೆಲಕ್ಕುರುಳಿದ್ದು, ಮೆಸ್ಕಾಂ ನ ಸಿಬ್ಬಂದಿಗಳು ಈಗಾಗಲೇ ಧಾವಿಸಿದ್ದಾರೆ.

ವರದಿ:- ರಮೀಝ್ ಬಾಳೆಹೊನ್ನೂರು

Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ