ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾದ ಮಮ್ಮುಟ್ಟಿ: 14 ವರ್ಷಗಳ ಕಾಯುವಿಕೆ ಅಂತ್ಯ – ಕರುನಾಡ ನ್ಯೂಸ್


ಕೇರಳ (Kerala) ಸರ್ಕಾರ ಸಿನಿಮಾ ಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದು, ಬರೋಬ್ಬರಿ 14 ವರ್ಷಗಳ ಬಳಿಕ ಮಮ್ಮುಟ್ಟಿ ಅತ್ಯುತ್ತಮ ನಟನಾಗಿ ಹೊರ ಹೊಮ್ಮಿದ್ದಾರೆ. ‘ನನ್ಪಕಲ್ ನೆರತ್ತು ಮಯಕ್ಕಂ’ ಸಿನಿಮಾದ ನಟನೆಗಾಗಿ ಈ ಪ್ರಶಸ್ತಿ ಸಂದಿದೆ. ಅತ್ಯುತ್ತಮ ನಟ (Best Actor) ಪ್ರಶಸ್ತಿ ಪಡೆದ ಗೆಳೆಯ ಮಮ್ಮುಟ್ಟಿಗೆ ಮತ್ತೋರ್ವ ಖ್ಯಾತ ನಟ ಮೋಹನ್ ಲಾಲ್ (Mohanlal) ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂಭ್ರಮವನ್ನು ಅವರು ಹಂಚಿಕೊಂಡಿದ್ದಾರೆ ಮಮ್ಮುಟ್ಟಿಗೆ ಪ್ರಶಸ್ತಿ (Award) ಹೊಸದೇನೂ ಅಲ್ಲ. ಈಗಾಗಲೇ ಆರು ಬಾರಿ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಅನೇಕ ಬಾರಿ ಫಿಲ್ಮ್ ಫೇರ್ ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ.

ಆದರೆ, ಕಳೆದ ಹದಿನಾಲ್ಕು ವರ್ಷದಿಂದ ಸರ್ಕಾರದ ಅತ್ಯುತ್ತಮ ನಟ ಪ್ರಶಸ್ತಿಯನ್ನು ಅವರು ಪಡೆದುಕೊಂಡಿರಲಿಲ್ಲ. ಈ ಬಾರಿ ರೇಸ್ ನಲ್ಲಿ ಮೋಹನ್ ಲಾಲ್ ಕೂಡ ಇದ್ದರು ಸಿನಿಮಾಗಳ ವಿಶೇಷಯದಲ್ಲಿ ಮೋಹನ್ ಲಾಲ್ ಮತ್ತು ಮಮ್ಮುಟ್ಟಿ (Mammootty) ಪಕ್ಕಾ ಸ್ಪರ್ಧಾಳುಗಳು. ಅನೇಕ ಬಾರಿ ಇವರ ಸಿನಿಮಾಗಳು ಪೈಪೋಟಿಗೆ ಇಳಿದಿವೆ. ಆದರೆ, ವೈಯಕ್ತಿಕ ಜೀವನದಲ್ಲಿ ಇಬ್ಬರೂ ಒಳ್ಳೆಯ ಸ್ನೇಹಿತರು. ಈ ಕಾರಣದಿಂದಾಗಿಯೇ ಮಮ್ಮುಟ್ಟಿಗೆ ಮೋಹನ್ ಲಾಲ್ ಅಭಿನಂದಿಸಿದ್ದಾರೆ.

Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ