ಶಿವಮೊಗ್ಗ: ರೈತ ನಾಯಕ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಅವರು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿಯಿಂದ ನೀಡಲಾದ ಗೌರವ ಡಾಕ್ಟರೇಟ್ ಪದವಿ (Doctorate) ಸ್ವೀಕರಿಸಿದ್ದಾರೆ.
ಡಾಕ್ಟರೇಟ್ ಪದವಿ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಕೃಷಿ ವಿವಿಯಿಂದ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ್ದು ಬದುಕಿನ ಅತ್ಯಂತ ಸುದೈವ ಸಂಗತಿ. ನಾನು ಸಹ ಕೃಷಿ ಕುಟುಂಬದಿಂದ ಜನಿಸಿದವನು. ಹೀಗಾಗಿ ರೈತನ ಕಷ್ಟ ಕಾರ್ಪಣ್ಯವನ್ನು ಹತ್ತಿರದಿಂದ ನೋಡಿದ್ದೇನೆ. ಹೀಗಾಗಿಯೇ ಕೃಷಿ ಬಜೆಟ್ ಮಂಡನೆ ಮಾಡಿದ್ದೆ ಎಂದರು. ರಾಜ್ಯದಲ್ಲಿ ರೈತರ ಪರವಾಗಿ ನಡೆಸಿದ ಹಲವು ಹೋರಾಟಗಳನ್ನು, ಆ ಹೋರಾಟಗಳಲ್ಲಿ ಯಶಸ್ಸು ಕಂಡಿದ್ದನ್ನು ಸ್ಮರಿಸಿದರು. ಕೃಷಿ ಕುಟುಂಬ ನೆಮ್ಮದಿಯಿಂದ ಇರಬೇಕು. ರೈತರ ಕಲ್ಯಾಣವಾಗಬೇಕು. ಇದಕ್ಕಾಗಿ ಸದಾ ಹೋರಾಟ ನಡೆಸುತ್ತೇನೆ ಎಂದರು.