ಮಗಳನ್ನು ರಕ್ಷಿಸಲು ಹೋದ ತಂದೆ- ಅಜ್ಜನ ಕೈಯಿಂದ ಜಾರಿ ಚರಂಡಿಗೆ ಬಿದ್ದ ಕಂದಮ್ಮ – ಕರುನಾಡ ನ್ಯೂಸ್


ಮುಂಬೈ: ಮಹಾರಾಷ್ಟ್ರದಲ್ಲಿ (Maharastra) ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಈ ಮಧ್ಯೆ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. 28 ವರ್ಷದ ರುಷಿಕಾ ಪೊಗುಲ್ (Rushika Pogul) ಎಂಬ ಮಹಿಳೆ ತನ್ನ ತಂದೆ ಮತ್ತು ಹೆಣ್ಣು ಮಗುವಿನೊಂದಿಗೆ ಸ್ಥಳೀಯ ರೈಲಿನಲ್ಲಿ (Local Train) ಪ್ರಯಾಣಿಸುತ್ತಿದ್ದರು. ಆದರೆ ರೈಲು ಅಂಬರನಾಥ್ ನಿಲ್ದಾಣದ ಬಳಿ ಸುಮಾರು 2 ಗಂಟೆಗಳ ಕಾಲ ನಿಂತಿತ್ತು. ಈ ಸಂದರ್ಭದಲ್ಲಿ ಕೆಲ ಪ್ರಯಾಣಿಕರು ಕಲ್ಯಾಣದ ಕಡೆಗೆ ನಡೆಯತೊಡಗಿದರು. ರುಷಿಕಾ ಕೂಡ ಅವರೊಂದಿಗೆ ಹೋಗಲು ನಿರ್ಧರಿಸಿ, ರೈಲಿನಿಂದ ಇಳಿಯಲು ಯತ್ನಿಸಿದ್ದಾರೆ. ಇಳಿಯಲು ಮುಂದಾದಾಗ ರುಷಿಕಾ ತನ್ನ ಮಡಿಲಿನಲ್ಲಿದ್ದ ಮಗುವನ್ನು ತಂದೆ ಕೈಯಲ್ಲಿ ಕೊಟ್ಟಿದ್ದಾಳೆ. ಇತ್ತ ರೈಲಿನಿಂದ ಇಳಿಯಲು ಹೋಗಿ ಕಾಲು ಜಾರಿ ಚರಂಡಿಯ ದಡಕ್ಕೆ ಬಿದ್ದಿದ್ದಾರೆ. ಆಗ ಮಗಳನ್ನು ಕೈ ಹಿಡಿದು ಎಳೆಯಲು ತಂದೆ ಮುಂದಾಗಿದ್ದು, ಈ ವೇಳೆ ತಂದೆಯ ಕೈಯಿಂದ ಜಾರಿ ಪುಟ್ಟ ಕಂದಮ್ಮ ಚರಂಡಿಗೆ ಬಿದ್ದಿದೆ. ಮಗು ಬಿದ್ದಿದ್ದನ್ನು ನೋಡಿದ ರುಷಿಕಾ ಜೋರಾಗಿ ಕಿರುಚಿಕೊಂಡಿದ್ದಾರೆ.ಮಹಿಳೆ ಕಿರುಚಿಕೊಳ್ಳುತ್ತಿದ್ದಂತೆಯೇ ರೈಲಿನಲ್ಲಿದ್ದ ಉಳಿದವರೂ ಅಲ್ಲಿಗೆ ಇಳಿದು ಬಂದರು. ಏನಾಯ್ತು ಅಂತ ಕೇಳಿದಾಗ ಮಗು ಚರಂಡಿಗೆ ಬಿದ್ದಿರುವುದು ತಿಳಿದು ಬಂದಿದೆ. ನಂತರ ಅಲ್ಲಿನ ಗ್ರಾಮ ಪಂಚಾಯತ್‍ಗೆ ವಿಷಯ ತಿಳಿಸಲಾಯಿತು. ಡೊಂಬಿವಿಲಿ ಪೊಲೀಸರು ಕೂಡ ಸ್ಥಳಕ್ಕೆ ದೌಡಾಯಿಸಿ ಜಿಆರ್ ಪಿಯೊಂದಿಗೆ ಹುಡುಕಾಟ ಆರಂಭಿಸಿದ್ದಾರೆ. ಇದಾದ ನಂತರ ಎನ್‌ಡಿಆರ್‌ಎಫ್‌ ನಿಂದ ಸಹಾಯವನ್ನು ಕೇಳಲಾಯಿತು. ಕತ್ತಲೆಯಾದ ಕಾರಣ ರಾತ್ರಿ 8 ಗಂಟೆಯವರೆಗೆ ಶೋಧ ಕಾರ್ಯ ಸ್ಥಗಿತಗೊಂಡಿತ್ತು. ಶುಕ್ರವಾರ ಮತ್ತೆ ಶೋಧ ಕಾರ್ಯ ಆರಂಭಿಸಿದರೂ ಮಗುವಿನ ಪತ್ತೆಯಾಗಿಲ್ಲ. ಸದ್ಯಕ್ಕೆ ಶೋಧ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ ಎಂದು ಎನ್‍ಡಿಆರ್ ಎಫ್ ತಿಳಿಸಿದೆ.

Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ