ನ್ಯೂಯಾರ್ಕ್: ಅಮೆರಿಕದಲ್ಲಿ (America) ಸಿಡಿಲಿನ ಆಘಾತಕ್ಕೆ ಸಿಲುಕಿದ್ದ ಭಾರತೀಯ ಮೂಲದ ವಿದ್ಯಾರ್ಥಿನಿಯೊಬ್ಬರು (Indian Origin Student) ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.
ಯೂನಿವರ್ಸಿಟಿ ಆಫ್ ಹೂಸ್ಟನ್‌ನಲ್ಲಿ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ಸುಸ್ರೂಣ್ಯ ಕೋಡೂರು ಜೀವನ್ಮರಣ ಹೋರಾಟ ನಡೆಸುತ್ತಿರುವ ವಿದ್ಯಾರ್ಥಿನಿ. ಈಕೆ ಸ್ಯಾನ್ ಜಸಿಂಟೋ ಸ್ಮಾರಕ ಉದ್ಯಾನದಲ್ಲಿ ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಸಿಡಿಲು ಬಡಿದಿತ್ತು ಸಿಡಿಲ ಬಡಿತದ ಪರಿಣಾಮ ಆಕೆ ಪಕ್ಕದಲ್ಲಿದ್ದ ಕೊಳಕ್ಕೆ ಬಿದ್ದಿದ್ದಳು. ಈ ವೇಳೆ ಹೃದಯ ಸ್ತಂಭನ ಕೂಡ ಆಗಿದೆ. ಮೆದುಳಿಗೂ ಹಾನಿಯಾಗಿದೆ. ಕೋಮಾ ಸ್ಥಿತಿಯಲ್ಲಿರುವ ಆಕೆಗೆ ಸ್ವಂತವಾಗಿ ಉಸಿರಾಡಲು ಸಾಧ್ಯವಾಗುತ್ತಿಲ್ಲ. ಟ್ರಾಕಿಯೊಸ್ಟೊಮಿಯೊಂದಿಗೆ ವೆಂಟಿಲೇಟರ್ ಬೆಂಬಲದ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆ ಸೇರಿರುವ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದೆ. ಕುಟುಂಬವು ವೈದ್ಯಕೀಯ ವೆಚ್ಚಕ್ಕಾಗಿ GoFundMe ಮೂಲಕ ಸಹಾಯ ಯಾಚಿಸಿದೆ.ಆಕೆಯನ್ನು ಭಾರತಕ್ಕೆ ಏರ್‌ಲಿಫ್ಟ್ ಮಾಡಲು ಕುಟುಂಬವು ಮನವಿ ಮಾಡಿದೆ. ಸದ್ಯ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿಗೆ ಹೆಚ್ಚಿನ ಆರೈಕೆ ಬೇಕಿದೆ. ಆಕೆಯನ್ನು ಭಾರತಕ್ಕೆ ವಾಪಸ್ ಕರೆತರಲು ಕುಟುಂಬದವರು ಮುಂದಾಗಿದ್ದಾರೆ