ರೂಪಾಯಿ, ದಿರ್ಹಾಮ್‌ ವ್ಯವಹಾರಕ್ಕೆ ಭಾರತ, ಯುಎಇ ಒಪ್ಪಿಗೆ – ಕರುನಾಡ ನ್ಯೂಸ್


ಅಬುಧಾಬಿ: ಭಾರತ (India) ಮತ್ತು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (UAE) ಇನ್ನು ಮುಂದೆ ರೂಪಾಯಿ – ದಿರ್ಹಾಮ್‌ನಲ್ಲಿ (Rupee-Dirham) ವ್ಯವಹಾರ ನಡೆಸಲು ಪರಸ್ಪರ ಸಹಿ ಹಾಕಿವೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ (Sheikh Mohamed Bin Zayed Al Nahyan) ಅವರ ಸಮ್ಮುಖದಲ್ಲಿ ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ (RBI Governor Shaktikanta Das) ಮತ್ತು ಯುಎಇಯ ಸೆಂಟ್ರಲ್ ಬ್ಯಾಂಕ್ ಗವರ್ನರ್ ಹೆಚ್ ಇ ಖಲೀದ್ ಮೊಹಮದ್ ತಿಳುವಳಿಕಾ ಒಪ್ಪಂದಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು. ಈ ಒಪ್ಪಂದದಿಂದ ಭಾರತ ಮತ್ತು ಯುಎಇ ಇನ್ನು ಮುಂದೆ ರಫ್ತು ಮತ್ತು ಆಮದನ್ನು ದೇಶಿಯ ಕರೆನ್ಸಿಯಲ್ಲಿ ಮಾಡಬಹುದಾಗಿದೆ. ಇಷ್ಟೇ ಅಲ್ಲದೆ ಭಾರತದಲ್ಲಿ ಅತ್ಯಂತ ಯಶಸ್ವಿಯಾಗಿರುವ ಪಾವತಿ ವ್ಯವಸ್ಥೆ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಮತ್ತು ಯುಎಇಯ ಸುರಕ್ಷಿತ ಆನ್‌ಲೈನ್ ಪಾವತಿ ವ್ಯವಸ್ಥೆಯಾದ ಐಪಿಪಿ (IPP) ಇನ್ನು ಮುಂದೆ ಲಿಂಕ್‌ ಆಗಲಿದೆ.

UPI-IPP ಸಂಪರ್ಕವು ಎರಡೂ ದೇಶದ ಬಳಕೆದಾರರಿಗೆ ವೇಗವಾಗಿ, ಅನುಕೂಲಕರ, ಸುರಕ್ಷಿತವಾಗಿ ಪರಿಣಾಮಕಾರಿ ಎರಡು ದೇಶಗಳ ಮಧ್ಯೆ ಹಣ ವರ್ಗಾವಣೆ ಮಾಡಲು ಅನುವು ಮಾಡಿಕೊಡುತ್ತದೆ.

ಇದರೊಂದಿಗೆ ಅಬುಧಾಬಿಯಲ್ಲಿ ಡೆಲ್ಲಿ ಐಐಟಿ ಕ್ಯಾಂಪಸ್‌ ತೆರೆಯಲು ಸಹ ಒಪ್ಪಂದ ಮಾಡಲಾಗಿದೆ.  ಎರಡು ದೇಶಗಳ ನಡುವಿನ ಚಿಲ್ಲರೆ ಪಾವತಿಗಳು ಸಾಮಾನ್ಯವಾಗಿ ಕಡಿಮೆ ಪಾರದರ್ಶಕವಾಗಿರುತ್ತವೆ ಮತ್ತು ಇದು ದೇಶೀಯ ವಹಿವಾಟುಗಳಿಗಿಂತ ಹೆಚ್ಚು ದುಬಾರಿ. UPI-IPP ಲಿಂಕ್‌ ಆದರೆ ಭಾರತ ಮತ್ತು ಫ್ರಾನ್ಸ್‌ ನಡುವಿನ ಗಡಿಯಾಚೆಗಿನ ಹಣ ವ್ಯವಹಾರ ಪಾರದರ್ಶಕವಾಗಿರುತ್ತದೆ. ಅಷ್ಟೇ ಅಲ್ಲದೇ ಅಗ್ಗ ಮತ್ತು ವೇಗವಾಗಿ ಹಣವನ್ನು ಕಳುಹಿಸಬಹುದಾಗಿದೆ. ಯುಎಇಯಲ್ಲಿರುವ ಭಾರತೀಯ ವಲಸಿಗರಿಗೆ, ವಿಶೇಷವಾಗಿ ವಲಸೆ ಕಾರ್ಮಿಕರು ಮತ್ತು ವಿದ್ಯಾರ್ಥಿಗಳಿಗೆ, ಪ್ರವಾಸಿಗರಿಗೆ ಲಾಭವಾಗಲಿದೆ. ಯುಪಿಐ ಮೂಲಕ ಚಿಲ್ಲರೆ ಪಾವತಿಗಳನ್ನು ಭಾರತೀಯ ರೂಪಾಯಿಗಳಲ್ಲಿ ಮಾಡಲಾಗುವುದರಿಂದ ಇದು ವಿದೇಶೀ ವಿನಿಮಯ ಮೀಸಲುಗಳನ್ನು ಉಳಿಸಲು ಸಹಾಯ ಮಾಡುತ್ತದೆ.

Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ