ಬೆಂಗಳೂರು: ರಾಜಧಾನಿ ಬೆಂಗಳೂರಿನ (Bengaluru) ಸಿಸಿಬಿ ಪೊಲೀಸರು (CCB Police) ಮೂವರು ಅಂತಾರಾಜ್ಯ ಗಾಂಜಾ ಪೆಡ್ಲರ್‌ಗಳನ್ನು (Ganja Peddlers) ಬಂಧಿಸಿದ್ದಾರೆ. 12 ಕೋಟಿ ರೂಪಾಯಿ ಮೌಲ್ಯದ 1,500 ಕೆಜಿ ಗಾಂಜಾ ಸೀಜ್ ಆಗಿದೆ. ಪುಷ್ಪಾ ಸಿನಿಮಾ (Pushpa Cinema) ಶೈಲಿಯಲ್ಲಿ ಗಾಂಜಾ ಸಪ್ಲೈ ಮಾಡುತ್ತಿದ್ದವರನ್ನು ಅರೆಸ್ಟ್ ಮಾಡಿದ್ದಾರೆ. ಗೂಡ್ಸ್ ಟೆಂಪೋದಲ್ಲಿ (Tempo Vehicle) ಸೀಕ್ರೆಟ್ ಜಾಗ ಮಾಡಿಕೊಂಡು ಡೆಲಿವರಿ ಬಾಕ್ಸ್ಗಳಲ್ಲಿ (Delivery Box) ಗಾಂಜಾ ಪ್ಯಾಕಿಂಗ್ ಮಾಡಿ ಮಾರಾಟ ಮಾಡುತ್ತಿದ್ದರು. ವಿಶಾಖಪಟ್ಟಣಂನಿಂದ (Visakhapatnam) ಸಪ್ಲೈ ಆಗುತ್ತಿದ್ದ ಗಾಂಜಾವನ್ನು ಮಾರುವೇಷದಲ್ಲಿ ಹೀಗಿ ಸೀಜ್ ಮಾಡಿದ್ದಾರೆ. ಆರೋಪಿಗಳು ಎಂಬಿಎ ಹಾಗೂ ಬಿಎ ಪದವೀಧರರು ಎಂಬ ಮಾಹಿತಿ ಸಿಕ್ಕಿದೆ. ಗೂಡ್ಸ್ ಟೆಂಪೋದಲ್ಲಿ ಸೀಕ್ರೆಟ್ ಕಂಪಾರ್ಟ್ಮೆಂಟ್ ಮಾಡಿಕೊಂಡು ಆರೋಪಿಗಳು ಅಂತರಾಜ್ಯ ಗಾಂಜಾ ಸಪ್ಲೇ ಮಾಡುತ್ತಿದ್ದರು. ಪ್ಲಿಪ್ ಕಾರ್ಟ್ ಬಾಕ್ಸ್ ಗಳಲ್ಲಿ ಗಾಂಜಾ ಪ್ಯಾಕಿಂಗ್ ಮಾಡಿದ್ದ ಗಾಂಜಾ ಫೆಡ್ಲರ್ಸ್, ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರ ಕಣ್ತತಪ್ಪಿಸಿ ಬೆಂಗಳೂರಿಗೆ ಸಾಗಾಟ ಮಾಡಿ ಮಾರಾಟ ಮಾಡುತ್ತಿದ್ದರು. ವಿಶಾಖಪಟ್ನಂನಿಂದ ಗಾಂಜಾ ಸಪ್ಲೈ ಆಗುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರ ಮಾರು ವೇಷದಲ್ಲಿ ಸುಮಾರು ಮೂರು ವಾರಗಳ ಕಾಲ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಎಂಬಿಎ, ಬಿಎ ಪದವೀಧರರು
ಆರೋಪಿಗಳು ಗೂಡ್ಸ್ ಟೆಂಪೋ ವಾಹನಕ್ಕೆ ವಿವಿಧ ನಂಬರ್ ಪ್ಲೇಟ್ ಗಳನ್ನ ಅಳವಡಿಸಲು ವ್ಯವಸ್ಥೆ ಮಾಡಿದ್ದರಂತೆ. ಆ ಮೂಲಕ ಪೊಲೀಸರನ್ನು ಯಾಮಾರಿಸುವ ಕೆಲಸ ಮಾಡುತ್ತಿದ್ದರಂತೆ. ಬಂಧಿತ ಆರೋಪಿಗಳು ಎಂಬಿಎ ಹಾಗೂ ಬಿಎ ಪದವೀಧರರಾಗಿದ್ದು, ಹಣಕ್ಕಾಗಿ ಮಾರಾಟ ಮಾಡುತ್ತಿದ್ದರಂತೆ. ಆರೋಪಿಗಳಿಬ್ಬರು ರಾಜಸ್ಥಾನ ಮತ್ತು ಆಂಧ್ರ ಪ್ರದೇಶದವನಾಗಿದ್ದು ಮಹಾರಾಷ್ಟ್ರ, ತಮಿಳುನಾಡು, ಬೆಂಗಳೂರಿಗೆ ಸಪ್ಲೈ ಮಾಡುತ್ತಿದ್ದರಂತೆ.