ತೂಕದಿಂದಲೇ ಗಮನ ಸೆಳೆದ ಕಾರ್ನ್‍ವಾಲ್ ವಿಂಡೀಸ್‌ ತಂಡಕ್ಕೆ ಆಯ್ಕೆಯಾಗಿದ್ದು ಹೇಗೆ? – ಕರುನಾಡ ನ್ಯೂಸ್


ಡೊಮಿನಿಕಾ: ಟೀಂ ಇಂಡಿಯಾ (Team India) ಹಾಗೂ ವೆಸ್ಟ್ ಇಂಡೀಸ್ (West Indies) ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಕಿತ್ತ ರಕೀಮ್ ಕಾರ್ನ್‍ವಾಲ್ (Rahkeem Cornwall) ತಮ್ಮ ದೇಹದ ತೂಕದಿಂದ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಮೊದಲನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ 19 ರನ್ ಗಳಿಸಿದ್ದ ರಕೀಮ್ ಕಾರ್ನ್‍ವಾಲ್, ದ್ವಿತೀಯ ಇನಿಂಗ್ಸ್‌ನಲ್ಲಿ ಕೇವಲ 4 ರನ್ ಗಳಿಸಿದ್ದರು. ಇವರು ಬೌಲಿಂಗ್‍ನಲ್ಲಿ ಟೀಮ್ ಇಂಡಿಯಾ ಸ್ಟಾರ್ ಬ್ಯಾಟ್ಸ್‌ಮನ್‌ ಕೊಹ್ಲಿ ಅವರನ್ನು ಔಟ್ ಮಾಡಿದ್ದರು. ಹೀಗಿದ್ದರೂ ಇವರನ್ನು ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಆಯ್ಕೆ ಮಾಡಿರುವ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಸಂಶಯವನ್ನು ವ್ಯಕ್ತಪಡಿಸಿದ್ದರು. ಇಷ್ಟು ತೂಕದ ವ್ಯಕ್ತಿ ಹೇಗೆ ಕ್ರಿಕೆಟ್‍ಗೆ ಆಯ್ಕೆಯಾಗಿದ್ದು ಹೇಗೆ ಎಂದು ಪ್ರಶ್ನೆ ಮಾಡಿದ್ದರು.

ಈ ಬಗ್ಗೆ ಬಹಳ ಹಿಂದೆಯೇ ರಕೀಮ್ ಕಾರ್ನ್‍ವಾಲ್ ಮಾತಾಡಿದ್ದರು. ನನ್ನ ದೇಹದ ರಚನೆಯನ್ನು ನನ್ನಿಂದ ಬದಲಿಸಲು ಸಾಧ್ಯವಿಲ್ಲ. ನಾನು ತುಂಬಾ ದಪ್ಪಗಿದ್ದೇನೆ ಹಾಗೂ ತುಂಬಾ ಎತ್ತರವಾಗಿದ್ದೇನೆಂದು ನಾನು ಹೇಳಲು ಹೋಗುವುದಿಲ್ಲ. ನಾನು ಇದೆಲ್ಲ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಕೌಶಲ್ಯದ ಮೇಲೆ ನಾನು ಅಪಾರವಾದ ನಂಬಿಕೆಯನ್ನು ಇಟ್ಟಿದ್ದೇನೆ ಎಂದಿದ್ದರು.

2019ರಲ್ಲಿ ಭಾರತ ತಂಡದ ವಿರುದ್ಧ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‍ನಲ್ಲಿ ರಕೀಮ್ ಕಾರ್ನ್‍ವಾಲ್ ಪಾದಾರ್ಪಣೆ ಮಾಡಿದ್ದರು. ಆ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿಯೇ ಅತಿ ಹೆಚ್ಚು ದೇಹದ ತೂಕದ ಆಟಗಾರ ಎಂದು ಕರೆಸಿಕೊಂಡಿದ್ದರು. ರಕೀಮ್ ಕಾರ್ನ್ ಆಫ್ ಸ್ಪಿನ್ನರ್ ಜೊತೆ ಉತ್ತಮ ಬ್ಯಾಟ್ಸ್‍ಮನ್ ಕೂಡ ಆಗಿದ್ದಾರೆ. ವೆಸ್ಟ್ ಇಂಡೀಸ್ ದೈತ್ಯ ಆಲ್‍ರೌಂಡರ್ ರಕೀಮ್ ಕಾರ್ನ್‍ವಾಲ್ ಅವರು ಪ್ರಸ್ತುತ 143 ಕೆ.ಜಿ ತೂಕ, 6.8 ಅಡಿ ಎತ್ತರ ಹೊಂದಿದ್ದಾರೆ. ಇಲ್ಲಿಯವರೆಗೂ ಇವರು ವೆಸ್ಟ್ ಇಂಡೀಸ್ ಪರ 10 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 261 ರನ್‍ಗಳು ಹಾಗೂ 35 ವಿಕೆಟ್‍ಗಳನ್ನು ಪಡೆದುಕೊಂಡಿದ್ದಾರೆ. 2021ರ ಬಳಿಕ ಫಾರ್ಮ್ ಕಳೆದುಕೊಂಡಿದ್ದ ಕಾರಣ ತಂಡದಿಂದ ಹೊರ ಬಿದ್ದಿದ್ದರು. ಭಾರತ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ರಕೀಮ್ ಕಾರ್ನ್‍ವಾಲ್ ಅವರನ್ನು ಆಡಿಸುವ ಯೋಚನೆ ಇರಲಿಲ್ಲ. ಆದರೆ ಸ್ಪಿನ್ನರ್ ಗುಡಕೇಶ್ ಮಾಟಿ ಗಾಯಕ್ಕೆ ತುತ್ತಾದ ಬಳಿಕ ಅವರ ಸ್ಥಾನಕ್ಕೆ ರಕೀಮ್ ಅವರನ್ನು ಮೊದಲನೇ ಟೆಸ್ಟ್‍ಗೆ ಆಯ್ಕೆ ಮಾಡಲಾಗಿತ್ತು. ಅದರಂತೆ ಮೊದಲನೇ ಟೆಸ್ಟ್‌ನಲ್ಲಿ ಬೌಲ್ ಮಾಡಿದ 15 ಓವರ್‌ಗಳಲ್ಲಿ 5 ಮೇಡನ್‍ನೊಂದಿಗೆ 32 ರನ್ ನೀಡಿ ವಿರಾಟ್ ಕೊಹ್ಲಿ ವಿಕೆಟ್ ಉರುಳಿಸಿದ್ದರು. 





Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ