ಮಾನಸಿಕ ಅಸ್ವಸ್ಥ ಮಹಿಳೆಯನ್ನು ಗ್ರಾ.ಪಂ ಸಹಕಾರದೊಂದಿಗೆ ಕರವೇ ತಾಲ್ಲೂಕು ಅಧ್ಯಕ್ಷರು ಬೆಂಗಳೂರಿನ ಆಟೋರಾಜ ಅನಾಥಾಶ್ರಮಕ್ಕೆ ಸೇರ್ಪಡೆ – ಕರುನಾಡ ನ್ಯೂಸ್


ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಯ ಬಸ್ ನಿಲ್ದಾಣದಲ್ಲಿ ಮಾನಸಿಕ ಅಸ್ವಸ್ಥ ಮಹಿಳೆ ಒಬ್ಬರು ಕಳೆದ ಒಂದು ವರ್ಷದಿಂದ ಈ ಬಸ್
ನಿಲ್ದಾಣದಲ್ಲಿ ಮಲಗುತ್ತಿದ್ದರು ಈ ಮಾನಸಿಕ ಅಸ್ವಸ್ಥ ಮಹಿಳೆಯಿಂದ ಜನರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದರು ಹಾಗೂ ಜನರಿಗೆ ಕೆಟ್ಟ ಶಬ್ದಗಳಿಂದ ಬೈಯುತ್ತಿದ್ದರು ಹಾಗೂ ದೊಣ್ಣೆ ಮತ್ತು ಕಲ್ಲುಗಳಿಂದ ಹೊಡೆಯಲು ಹೋಗುತ್ತಿದ್ದರು ಇದನ್ನರಿತ ಕೊಡ್ಲಿಪೇಟೆ ಜನರಿಂದ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಮನವಿ ಸಲ್ಲಿಸಿದರು ಇದರಿಂದ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು ಕರವೇ ತಾಲ್ಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ರವರನ್ನು ಫೋನ್ ಮುಖಾಂತರ ಸಂಪರ್ಕಿಸಿ ಈ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಗೂ ಅನಾಥಾಶ್ರಮಕ್ಕೆ ಸೇರಿಸಿ ಕೊಡಬೇಕೆಂದು ಕೇಳಿಕೊಂಡ ಮೇರೆಗೆ ಈ ಬಸ್ ನಿಲ್ದಾಣದಲ್ಲಿದ್ದ ಮಹಿಳೆಯನ್ನು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರ ಸಮ್ಮುಖದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕರವೇ ಫ್ರಾನ್ಸಿಸ್ ಡಿಸೋಜಾ ರವರು ಖುದ್ದಾಗಿ ಹೋಗಿ ಆ ಮಾನಸಿಕ ಅಸ್ವಸ್ಥ ಮಹಿಳೆಯರನ್ನು ಬೆಂಗಳೂರಿನ ಆಟೋ ರಾಜ ಅನಾಥಾಶ್ರಮಕ್ಕೆ ಸೇರಿಸಲಾಯಿತ್ತು.. ಈ ಮಹಿಳೆಗೆ ಕರೆದುಕೊಂಡು ಹೋಗುವಾಗ ತುಂಬಾ ಹರ ಸಹಸದಿಂದ ಕರೆದುಕೊಂಡು ಹೋಗಿದ್ದೇವೆ. ಈ ಮಹಿಳೆಯನ್ನು ಬಸ್ ನಿಲ್ದಾಣದಿಂದ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಕರವೇ ಫ್ರಾನ್ಸಿಸ್ ಡಿಸೋಜರವರ ಮೇಲೆ ಸಹ ಹೊಡೆಯಲು ಬಂದಿದ್ದರು ಆದರೆ ಇವರು ಮಾನಸಿಕ ಅಸ್ವಸ್ಥ ಮಹಿಳೆ ಆಗಿರುವ ಕಾರಣ ಇವರಿಗೆ ಏನು ಮಾಡುತ್ತಿದ್ದಾರೆಂದು ಅವರ ವಿಮೋಚನೆಗೆ ಬಾರದ ಕಾರಣ ಹೀಗೆ ಮಾಡುತ್ತಿದ್ದರು ಹಾಗಾಗಿ ಜನರಿಗೆ ತೊಂದರೆ ಉಂಟು ಮಾಡುತ್ತಿದ್ದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಬೆಂಗಳೂರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಹಾಗೂ ಅನಾಥಾಶ್ರಮಕ್ಕೆ ಕರವೇ ಫ್ರಾನ್ಸಿಸ್ ಡಿಸೋಜ ಅವರು ಖುದ್ದಾಗಿ ಹೋಗಿ ಹಾಗೂ ಇದೇ ಸಂದರ್ಭದಲ್ಲಿ ಗ್ರಾಮ ಗ್ರಾಮ ಪಂಚಾಯಿತಿಯಿಂದ ಬೆಂಗಳೂರಿಗೆ ಹೋಗಲು ಪೌರಕಾರ್ಮಿಕರಾದ ಕಾಂತರಾಜ್ ರವರು ಸಹ ನಮ್ಮ ಜೊತೆ ಬಂದಿದ್ದರು. ಈ ಅಸ್ವಸ್ಥ ಮಹಿಳೆಯನ್ನು ಬೆಂಗಳೂರಿನ ಅನಾಥಾಶ್ರಮಕ್ಕೆ ಸೇರಿಸಲು ಕಾರಿನ ವ್ಯವಸ್ಥೆ ಸಹ ಗ್ರಾಮ ಪಂಚಾಯಿತಿಯಿಂದ ಮಾಡಿಸಿಕೊಟ್ಟಿದ್ದರು ಸಂದರ್ಭದಲ್ಲಿ ಕರವೇ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಹರೀಶ್ ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ಶೇಖರ್ ಹಾಗೂ ನಂದೀಶ್ ಹಾಗೂ ಪ್ರಸನ್ನ ಹಾಗೂ ಲಾವಣ್ಯ ಧಮಪ್ರಕಾಶ್ ಹಾಗೂ ಬ್ಯಾಡ್ ಗೊಟ್ಟ ಗ್ರಾಮ ಪಂಚಾಯಿತಿ ಸದಸ್ಯರಾದ ಹನೀಪ್ ಮತ್ತು ಬ್ಯಾಡ್ ಗೊಟ್ಟ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಭವನ ಹಾಗೂ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ದೀಪಕ್ ಮತ್ತು ಆಶಾ ಕಾರ್ಯಕರ್ತರಾದ ತ್ರಿವೇಣಿ ಹಾಗೂ ಕೊಡ್ಲಿಪೇಟೆ ಪೌರಕಾರ್ಮಿಕರಾದ ಕಾಂತರಾಜ್ ಹಾಗೂ ಕಾರು ಚಾಲಕ ರಾಮರವರು ಭಾಗವಹಿಸಿದ್ದರು.





Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ