ಭೋಪಾಲ್: ಹೆಂಡತಿಯನ್ನು (Wife) ಕೇಳದೆ ಅಡುಗೆಯಲ್ಲಿ ಟೊಮೆಟೊ (Tomato) ಬಳಸಿದ್ದಕ್ಕೆ, ಮಗಳನ್ನು ಕರೆದುಕೊಂಡು ಪತ್ನಿ ಮನೆ ಬಿಟ್ಟು ಹೋದ ಘಟನೆ ಮಧ್ಯಪ್ರದೇಶದ (Madhya Pradesh) ಶಹದೋಲ್‌ನಲ್ಲಿ (Shahdol) ನಡೆದಿದೆ. ಸಂಜೀವ್ ಬರ್ಮನ್ ಎಂಬವರು ಟಿಫಿನ್ ಸರ್ವಿಸ್ ನಡೆಸುತ್ತಿದ್ದು, ಅಡುಗೆ (Cook) ಮಾಡುವ ಸಂದರ್ಭದಲ್ಲಿ ಹೆಂಡತಿಯ ಪರ್ಮಿಷನ್ ಇಲ್ಲದೇ 2 ಟೊಮೆಟೊವನ್ನು ಅಡುಗೆಯಲ್ಲಿ ಬಳಸಿದ್ದಾರೆ. ಇದರಿಂದ ಕೋಪಗೊಂಡ ಹೆಂಡತಿ ಪತಿಯೊಂದಿಗೆ ಜಗಳಕ್ಕೆ ಇಳಿದಿದ್ದಾಳೆ ಇವರಿಬ್ಬರ ಜಗಳ ಅತಿರೇಕಕ್ಕೆ ಹೋಗಿದ್ದು, ಹೆಂಡತಿ ತನ್ನ ಮಗಳನ್ನು ಕರೆದುಕೊಂಡು ಮನೆಬಿಟ್ಟು ಹೋಗಿದ್ದಾಳೆ. ಬಳಿಕ ಸಂಜೀವ್ ತನ್ನ ಹೆಂಡತಿ ಮತ್ತು ಮಗಳನ್ನು ಹುಡುಕಲು ಹೋಗಿದ್ದಾರೆ. ಆದರೆ ಎಲ್ಲಿಯೂ ಪತ್ತೆಯಾಗದ ಹಿನ್ನೆಲೆ ಸಂಜೀವ್ ಹತ್ತಿರದ ಪೊಲೀಸ್ ಠಾಣೆಯಲ್ಲಿ ಹೆಂಡತಿ ಮನೆ ಬಿಟ್ಟು ಹೋಗಿರುವ ಬಗ್ಗೆ ದೂರು ನೀಡಿದ್ದಾರೆ. ಅಲ್ಲದೇ ಆಕೆಯನ್ನು ಹುಡುಕಿಕೊಡುವಂತೆ ಪೊಲೀಸರ ಬಳಿ ಮನವಿ ಮಾಡಿದ್ದಾರೆ.ಹೆಂಡತಿಯನ್ನು ಕೇಳದೆ 2 ಟೊಮೆಟೊ ತೆಗೆದುಕೊಂಡು ಅಡುಗೆಯಲ್ಲಿ ಬಳಸಿದೆ. ಪತ್ನಿ ಜೊತೆ ಮಾತನಾಡದೆ 3 ದಿನಗಳಾಗಿದ್ದು, ಅವರು ಎಲ್ಲಿದ್ದಾರೆ ಎಂಬ ಬಗ್ಗೆಯೂ ತಿಳಿದಿಲ್ಲ ಎಂದು ಸಂಜೀವ್ ಬೇಸರ ವ್ಯಕ್ತಪಡಿಸಿದ್ದಾರೆ. ಪೊಲೀಸರು ಇವರ ಹೆಂಡತಿಯನ್ನು ಸಂಪರ್ಕಿಸಿ ಆದಷ್ಟು ಬೇಗ ಮನೆಗೆ ಬರುವಂತೆ ಮಾಡುತ್ತೇವೆ ಎಂದು ಸಂಜೀವ್ ಅವರಿಗೆ ಭರವಸೆ ನೀಡಿದ್ದಾರೆ.