ಶಿವನ ಮೂಲಕ ಲೈಂಗಿಕ ಶಿಕ್ಷಣ?: ಅಕ್ಷಯ್ ಕುಮಾರ್ ಚಿತ್ರಕ್ಕೆ ಪ್ರಮಾಣಪತ್ರ ನಿರಾಕರಣೆ – ಕರುನಾಡ ನ್ಯೂಸ್


ಇದೇ ಆಗಸ್ಟ್ 11 ರಂದು ‘ಓ ಮೈಗಾಡ್ 2’ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿತ್ತು. ಆದರೆ, ಚಿತ್ರತಂಡಕ್ಕೀಗ ಸಂಕಷ್ಟ ಎದುರಾಗಿದೆ. ಈ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕೃತ ಮಂಡಳಿ (ಸಿ.ಬಿ.ಎಫ್.ಸಿ) ಸೆನ್ಸಾರ್ ಪತ್ರವನ್ನು (Censor) ಕೊಡಲು ನಿರಾಕರಿಸಿದೆ (Denial). ಈ ಸಿನಿಮಾವನ್ನು ಪರಿಶೀಲನಾ ಸಮಿತಿಗೆ ಕಳುಹಿಸಿ ಕೊಡಲಾಗಿದೆ. ಹಾಗಾಗಿ ಚಿತ್ರ ಬಹುಶಃ ತಡವಾಗಬಹುದು ಎನ್ನುವುದು ಬಿಟೌನ್ ಮಾತು. ಅಕ್ಷಯ್ ಕುಮಾರ್ ಈ ಸಿನಿಮಾದಲ್ಲಿ ಶಿವನ ಪಾತ್ರ ಮಾಡಿದ್ದಾರೆ. ಈ ಪಾತ್ರದ ಮೂಲಕ ಲೈಂಗಿಕ ಶಿಕ್ಷಣವನ್ನು ಹೇಳಲು ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಸೆನ್ಸಾರ್ ಪತ್ರವನ್ನು ನೀಡಲು ನಿರಾಕರಿಸಲಾಗಿದೆಯಂತೆ. ಲೈಂಗಿಕ ಶಿಕ್ಷಣದ ಕುರಿತಾಗಿ ಕಥಾ ಹಂದರ ಹೊಂದಿರುವ ಈ ಸಿನಿಮಾದಲ್ಲಿ ಇಂತಹ ವಿಷಯವನ್ನು ಶಿವನ ಮೂಲಕ ಹೇಳಲು ಹೊರಟಿರುವುದು ಸೆನ್ಸಾರ್ ಮಂಡಳಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಆದರೆ, ಈ ಹಿಂದೆ ರಿಲೀಸ್ ಆಗಿರುವ ಟೀಸರ್ ಗೆ ಸೆನ್ಸಾರ್ ಪತ್ರ ಸಿಕ್ಕಿದೆ. ‘ಓ ಮೈ ಗಾಡ್ 2’ (Oh My God 2) ಸಿನಿಮಾದ ಟೀಸರ್ ಮೊನ್ನೆಯಷ್ಟೇ ರಿಲೀಸ್ ಆಗಿದೆ. ಸಿನಿಮಾದಲ್ಲಿನ ಅಕ್ಷಯ್ (Akshay Kumar) ಅವತಾರಕ್ಕೆ ಅಭಿಮಾನಿಗಳು ಜೈ ಹೋ ಎಂದಿದ್ದಾರೆ. 2012ರಲ್ಲಿ ಈ ಸಿನಿಮಾದ ಮೊದಲ ಭಾಗ ಬಿಡುಗಡೆಯಾಗಿತ್ತು. ಇದೀಗ ಪಾರ್ಟ್ 2 ಸಿದ್ಧವಾಗಿದ್ದು ಅಕ್ಷಯ್ ಪಾತ್ರ ಕೂಡ ಬದಲಾಗಿದೆ. ಹತ್ತು ವರ್ಷಗಳ ಹಿಂದೆ ರಿಲೀಸ್ ಆಗಿದ್ದ ಓ ಮೈ ಗಾಡ್ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅವರು ಕೃಷ್ಣನಾಗಿ (Krishna) ಕಾಣಿಸಿಕೊಂಡಿದ್ದರು. ಈ ಬಾರಿ ಅವರು ಶಿವನ (Shiva) ಅವತಾರವೆತ್ತಿದ್ದಾರೆ. ಮೊನ್ನೆಯಷ್ಟೇ ಈ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿತ್ತು. ಅದನ್ನು ಅಕ್ಷಯ್ ಅಭಿಮಾನಿಗಳು ಅಪಾರವಾಗಿ ಮೆಚ್ಚಿದ್ದರು. ಈಗಿನ ಟೀಸರ್ ಅನ್ನು ಅಷ್ಟೇ ಮೆಚ್ಚಿಕೊಂಡಿದ್ದಾರೆ.  ಹೇಳಿ ಕೇಳಿ ಇದೊಂದು ಕಾಮಿಡಿ ಸಿನಿಮಾ. ಶಿವನ ರೂಪದಲ್ಲಿ ಬಂದಿರುವ ಅಕ್ಷಯ್, ಯಾವೆಲ್ಲ ಲೀಲೆಗಳನ್ನು ಪರದೆಯ ಮೇಲೆ ಆಡುತ್ತಾರೋ ಕಾದು ನೋಡಬೇಕು. ಟೀಸರ್ ನಲ್ಲಿಯೂ ಹಲವು ಕಾಮಿಡಿ ಅಂಶಗಳು ಇದ್ದು, ಇಡೀ ಸಿನಿಮಾ ಹಾಸ್ಯದ ರಸದೌತಣವನ್ನು ನೀಡುವುದು ಪಕ್ಕಾ ಅನ್ನುವಂತಿದೆ ರಿಲೀಸ್ ಆದ ಟೀಸರ್. ಟೀಸರ್ ನೋಡಿ ಕೆಲವರು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಆಗದಂತೆ ಎಚ್ಚವಹಿಸಿ ಎಂದು ಸಲಹೆ ನೀಡಿದರೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಂದರೆ ಬೈಕಾಟ್ ಮಾಡುವುದಾಗಿಯೂ ಕೆಲವರು ಕಾಮೆಂಟ್ ಮಾಡಿದ್ದಾರೆ. ಅಂದಹಾಗೆ ಅಕ್ಷಯ್ ಕುಮಾರ್ ಜೊತೆ ಈ ಸಿನಿಮಾದಲ್ಲಿ ಯಾಮಿ ಗೌತಮ್, ಪಂಕಜ್ ತ್ರಿಪಾಠಿ ಸೇರಿದಂತೆ ಹಲವರು ತಾರಾಗಣದಲ್ಲಿ ಇದ್ದಾರೆ.

Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ