ಬಟ್ಟೆ ಒಣಗದೇ ವಾಸನೆ ಬರ್ತಿದ್ಯಾ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ – ಕರುನಾಡ ನ್ಯೂಸ್


ಮಳೆಗಾಲ ಆರಂಭವಾದ್ರೆ ಸಾಕು ಎಲ್ಲೆಂದರಲ್ಲಿ ನೀರು ತುಂಬಿಕೊಳ್ಳುತ್ತೆ. ವಾತಾವರಣವೂ ಹೆಚ್ಚು ತಂಪಾಗಿರುವುದರಿಂದ ಬಟ್ಟೆಯಂತೂ ಒಣಗೋದೇ ಇಲ್ಲ. ಶಾಲೆ, ಕಚೇರಿಗಳಿಗೆ ಹೋಗುವವರ ಬಟ್ಟೆಯನ್ನು ಒಣಗಿಸೋದೇ ಒಂದು ದೊಡ್ಡ ಸಮಸ್ಯೆ. ಮಳೆಯಲ್ಲಿ ನೆನೆಯುವ ಬಟ್ಟೆಗಳನ್ನು ಹಾಗೇ ಇಟ್ಟುಕೊಳ್ಳಲೂ ಆಗದೇ ಒಣಗಿಸಲೂ ಆಗದೇ ಮಹಿಳೆಯರು ಪಡಬಾರದ ಕಷ್ಟ ಪಡುತ್ತಾರೆ. ಮಳೆಗಾಲದಲ್ಲಿ ತೊಳೆದ ಬಟ್ಟೆಗಳು ಮನೆಯ ತುಂಬ ತುಂಬಿಹೋಗುತ್ತದೆ. ಒಂದು ವಾರ ಕಳೆದರೂ ಬಟ್ಟೆ (Clothes) ಒಣಗೋದೇ ಇಲ್ಲ. ಒದ್ದೆ ಬಟ್ಟೆಯನ್ನು ಹಾಗೇ ಹಾಕಿಕೊಂಡರೆ ಚರ್ಮದ ತುರಿಕೆ, ಗಾಯ ಹಾಗೂ ಅಲರ್ಜಿ (Allergy) ಗಳು ಕೂಡ ಉಂಟಾಗಬಹುದು. ಕೆಲವೊಮ್ಮೆ ಬಟ್ಟೆ ಒಣಗದೇ ಅದರಿಂದ ವಾಸನೆ (Smell) ಬರಲು ಶುರುವಾಗುತ್ತೆ. ಅಂತಹ ವಾಸನೆಯನ್ನು ಹೋಗಲಾಡಿಸೋದು ಇನ್ನೂ ಕಷ್ಟ. ಹಳ್ಳಿಯ ಕಡೆ ಕೆಲವರು ಕಟ್ಟಿಗೆ ಒಲೆಯಲ್ಲಿ ಅಥವಾ ಡ್ರೈಯರ್ ನಲ್ಲಿ ಬಟ್ಟೆಯನ್ನು ಒಣಗಿಸಿಕೊಳ್ಳುತ್ತಾರೆ. ಡ್ರೈಯರ್ ಅಥವಾ ಕಟ್ಟಿಗೆ ಒಲೆಯ ವ್ಯವಸ್ಥೆ ಅನೇಕ ಕಡೆ ಇರೋದಿಲ್ಲ. ಅಂತವರು ಕೆಲವು ಸಿಂಪಲ್ ಟ್ರಿಕ್ ಗಳನ್ನು ಉಪಯೋಗಿಸಿ ಬಟ್ಟೆಯನ್ನು ಸುಲಭವಾಗಿ ಒಣಗಿಸಬಹುದು ಮತ್ತು ಬಟ್ಟೆಯಿಂದ ವಾಸನೆ ಬರದಂತೆ ತಡೆಗಟ್ಟಬಹುದು. 

ಮಳೆಗಾಲದಲ್ಲಿ ಬಟ್ಟೆ ಬೇಗ ಒಣಗಲು ಹೀಗೆ ಮಾಡಿ : 
• ನಮಗೆಲ್ಲ ತಿಳಿದಿರೋ ಹಾಗೆ ಉಪ್ಪು ತೇವಾಂಶವನ್ನು ಹೀರಿಕೊಳ್ಳುತ್ತೆ. ಮಳೆಗಾಲದಲ್ಲಿ ನೀವು ಬಟ್ಟೆಯನ್ನು ಒಣಗಿಸುವ ಕೋಣೆಯಲ್ಲಿ ಸಮುದ್ರದ ಉಪ್ಪು ಅಥವಾ ಕಲ್ಲುಪ್ಪಿನ ಚೀಲವನ್ನು ಇಡಿ. ಉಪ್ಪು ಆ ಕೋಣೆಯ ತೇವಾಂಶವನ್ನು ಹೀರಿ ಕೋಣೆಯ ತಾಪಮಾನ ಹೆಚ್ಚುವಂತೆ ಮಾಡುತ್ತದೆ. ಇದರಿಂದ ಬಟ್ಟೆಗಳು ಬಹಳ ಬೇಗ ಒಣಗುತ್ತದೆ.

• ಬಟ್ಟೆಯನ್ನು ಇಡಲು ನಾವು ಸಾಮಾನ್ಯವಾಗಿ ಹ್ಯಾಂಗರ್ ಅನ್ನು ಬಳಸುತ್ತೇವೆ. ಈ ಹ್ಯಾಂಗರ್ ಗಳು ಮಳೆಗಾಲದ ಬಟ್ಟೆಯನ್ನು ಒಣಗಿಸಲು ಬಹಳ ಉಪಯೋಗವಾಗುತ್ತದೆ. ವಾತಾವರಣ ತಂಪಾಗಿದ್ದರೂ ಕೂಡ ಕೇವಲ ಗಾಳಿಯಿಂದಲೇ ಬಟ್ಟೆಗಳು ಒಣಗುತ್ತವೆ. ಹಾಗಾಗಿ ಮಳೆಗಾಲದಲ್ಲಿ ಹ್ಯಾಂಗರ್ ಅನ್ನು ಬಳಸುವುದು ಉತ್ತಮ.
• ಬಟ್ಟೆ ಒಣಗಿಸುವ ಕೋಣೆಯಲ್ಲಿ ದೂಪವನ್ನು ಹಚ್ಚಿ ಇಡೋದ್ರಿಂದ ಬಟ್ಟೆ ಬೇಗ ಒಣಗುತ್ತೆ.
• ಮಳೆಗಾಲದಲ್ಲಿ ಬಟ್ಟೆಯನ್ನು ವಾಶಿಂಗ್ ಮಷಿನ್ ನಲ್ಲಿ ಡ್ರೈ ಮಾಡಿ ಬಟ್ಟೆಯನ್ನು ಗಾಳಿಯಾಡುವ ಸ್ಥಳದಲ್ಲಿ ಒಣಗಿಸಿದರೆ ಬೇಗ ಒಣಗುತ್ತದೆ.
• ಸ್ವಲ್ಪ ಹಸಿಯಾಗಿರುವ ಬಟ್ಟೆಗಳನ್ನು ಫ್ಯಾನ್ ಗಾಳಿಗೆ ಇಟ್ಟು ಕೂಡ ಒಣಗಿಸಬಹುದು.

ಮಳೆಗಾಲದಲ್ಲಿ ಬಟ್ಟೆಗಳು ಒಣಗದೇ ಇದ್ದಾಗ ಅದರಿಂದ ಕೆಟ್ಟ ವಾಸನೆ ಬರಲು ಆರಂಭವಾಗುತ್ತದೆ. ಬಟ್ಟೆಗಳಿಂದ ಬರುವ ಇಂತಹ ವಾಸನೆಯಿಂದ ನಾವು ಮುಜುಗರಕ್ಕೆ ಒಳಗಾಗುವ ಪರಿಸ್ಥಿತಿಯೂ ಎದುರಾಗುತ್ತದೆ. ಮಳೆಗಾಲದ ಬಟ್ಟೆಗಳು ಸುವಾಸನೆಯಿಂದ ಕೂಡಿರಲು ಮಾರುಕಟ್ಟೆಯಲ್ಲಿ ಅನೇಕ ರೀತಿಯ ಲಿಕ್ವಿಡ್ ಗಳು ಕೂಡ ಸಿಗ್ತವೆ. ಆದರೆ ಅಂತಹ ಲಿಕ್ವಿಡ್ ನ ವಾಸನೆ ಕೆಲವರಿಗೆ ಇಷ್ಟವಾಗೊಲ್ಲ. ಅಂತವರು ಬಟ್ಟೆಯ ದುರ್ವಾಸನೆಯನ್ನು ಹೋಗಲಾಡಿಸಲು ಈ ಕೆಲವು ಟ್ರಿಕ್ ಗಳನ್ನು ಬಳಸಬಹುದು.

ವಿನೆಗರ್ ಮತ್ತು ಅಡುಗೆ ಸೋಡಾ ಬಳಸಿ : ಅಡುಗೆಯಲ್ಲಿ ಬಳಸುವ ಅಡುಗೆ ಸೋಡಾ ಬಟ್ಟೆಯ ವಾಸನೆಯನ್ನು ಹೋಗಲಾಡಿಸುತ್ತೆ. ನಿಮ್ಮ ಡಿಟರ್ಜೆಂಟ್ ನೊಂದಿಗೆ ಅಡುಗೆ ಸೋಡಾ ಮತ್ತು ವಿನೆಗರ್ ಮಿಶ್ರಣವನ್ನು ಸೇರಿಸಿ ಬಟ್ಟೆಯನ್ನು ತೊಳೆದರೆ ಬಟ್ಟೆಗಳು ತಾಜಾ ಆಗಿರುತ್ತವೆ.

ನಿಂಬೆಹಣ್ಣು:  ಡಿಟರ್ಜೆಂಟ್ ನೊಂದಿಗೆ ನಿಂಬೆ ರಸವನ್ನು ಸೇರಿಸಿದರೆ ಬಟ್ಟೆಯಿಂದ ದುರ್ವಾಸನೆ ಬರೋದನ್ನ ತಡೆಯಬಹುದು. ನಿಂಬೆ ರಸವು ದುರ್ವಾಸನೆ ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ.

ಕರ್ಪೂರ : ಮಳೆಗಾಲದಲ್ಲಿ ಬಟ್ಟೆಗಳ ನಡುವೆ ಕರ್ಪೂರವನ್ನು ಇಡುವುದರಿಂದ ಬಟ್ಟೆಯ ವಾಸನೆ ದೂರವಾಗುತ್ತದೆ. ಸಾಂಬ್ರಾಣಿಯ ಹೊಗೆಯನ್ನು ಬಟ್ಟೆಯ ಸಮೀಪದಲ್ಲಿ ಇಡುವುದರಿಂದಲೂ ಬಟ್ಟೆ ಸುವಾಸನೆಯಿಂದ ಕೂಡಿರುತ್ತದೆ.

Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ