PIZZA Outlet ಮಾಡುವ ಆಸೆ; ಕಳೆದುಕೊಂಡದ್ದು‌ ಬರೋಬ್ಬರಿ ₹1 ಕೋಟಿ – ಕರುನಾಡ ನ್ಯೂಸ್


ಡಿಜಿಟಲ್ ಜೀವನ ನಮ್ಮ ಕೆಲಸವನ್ನು ಎಷ್ಟು ಕಡಿಮೆ ಮಾಡಿದೆಯೋ ಅದ್ರ ಡಬಲ್ ಅಪಾಯಕಾರಿ. ಈಗಿನ ಬಹುತೇಕ ಜನರು ಆನ್ಲೈನ್ ನಲ್ಲಿಯೇ ಹೆಚ್ಚು ವ್ಯವಹಾರ ನಡೆಸ್ತಾರೆ. ವಸ್ತುಗಳ ಮಾರಾಟ, ಖರೀದಿಯಿಂದ ಹಿಡಿದು ಉದ್ಯೋಗ ಪಡೆಯುವವರೆಗೆ ಎಲ್ಲವೂ ಆನ್ಲೈನ್ ಮೂಲಕವೇ ನಡೆಯುತ್ತದೆ. ಅನೇಕ ಕಂಪನಿಗಳು ಆನ್ಲೈನ್ ನಲ್ಲಿ ಜಾಹೀರಾತುಗಳನ್ನು ಹಾಕ್ತಿರುತ್ತವೆ. ಎಲ್ಲವನ್ನು ಜನರು ಕಣ್ಮುಚ್ಚಿ ನಂಬುತ್ತಾರೆ. ಆದ್ರೆ ಜನರ ಈ ನಂಬಿಕೆಯನ್ನು ಮೋಸಗಾರರು ಸದ್ಬಳಕೆ ಮಾಡಿಕೊಂಡು ಕೋಟಿ ಕೋಟಿ ಹಣ ಲೂಟಿ ಮಾಡುತ್ತಾರೆ.

ಬ್ಯಾಂಕ್ (Bank) ನಿಂದ ಕರೆ ಮಾಡಿ ಓಟಿಪಿ ಕೇಳಿ ಹಣ ವರ್ಗಾವಣೆ ಮಾಡಿಕೊಂಡ ಎಷ್ಟೋ ಘಟನೆಗಳಿವೆ. ಆನ್ಲೈನ್ ನಲ್ಲಿ ಕೆಲಸ ನೀಡುವುದಾಗಿ ಹಣ ವಸೂಲಿ ಮಾಡಿ ಕೈ ಎತ್ತುವವರಿದ್ದಾರೆ. ವಿದೇಶಿ ಪ್ರವಾಸ ಸೇರಿದಂತೆ ದೊಡ್ಡ ದೊಡ್ಡ ಆಸೆ ತೋರಿಸಿ ಅಮಾಯಕರಿಂದ ಹಣ ವಸೂಲಿ ಮಾಡುವ ಅನೇಕರನ್ನು ನಾವು ನೋಡ್ತೇವೆ. ಇಷ್ಟೆಲ್ಲ ನಮ್ಮ ಕಣ್ಣ ಮುಂದೆಯೇ ನಡೆದ್ರೂ ನಮಗೆ ಬುದ್ದಿ ಬರೋದಿಲ್ಲ. ಆನ್ಲೈನ್ (Online ) ನಲ್ಲಿ ನೀಡುವ ಕೆಲ ಆಫರ್ ಗಳು ನಮಗೆ ಇಷ್ಟವಾಗುವ ಕಾರಣ ನಾವು ಅದನ್ನು ನಂಬಿ ಹಣ ಕಳೆದುಕೊಂಡು ಕಣ್ಣೀರು ಹಾಕ್ತೇವೆ. ಆನ್ಲೈನ್ ಮೋಸಕ್ಕೆ ಬಲಿಯಾಗೋದು ಅತಿ ಬುದ್ಧಿವಂತರು ಅನ್ನೋದು ಮತ್ತೊಂದು ವಿಶೇಷ. ಈಗ ಪುಣೆಯ ಇಂಜಿನಿಯರ್ (Engineer) ಒಬ್ಬರು ಲಕ್ಷವಲ್ಲ ಕೋಟಿ ಹಣ ಕಳೆದುಕೊಂಡಿದ್ದಾರೆ.

ಪುಣೆಯ ಎಂಜಿನಿಯರಿಂಗ್ ಕಂಪನಿಯೊಂದರ 35 ವರ್ಷದ ಡೈರೆಕ್ಟರ್ ಆನ್ಲೈನ್ ಮೋಸಕ್ಕೆ ಬಲಿಯಾದ ವ್ಯಕ್ತಿ. ಮುಂಬರುವ 50 ಓವರ್‌ಗಳ ಪುರುಷರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಬಹುರಾಷ್ಟ್ರೀಯ ಪಿಜ್ಜಾ ರೆಸ್ಟೋರೆಂಟ್ ಸರಪಳಿಯ ಫ್ರಾಂಚೈಸಿಯನ್ನು ನೀಡುವುದಾಗಿ ಆನ್ಲೈನ್ ನಲ್ಲಿ ಅವರನ್ನು ನಂಬಿಸಲಾಗಿದೆ. ಇದನ್ನು ನಂಬಿದ ಅವರು ಬರೋಬ್ಬರಿ 1 ಕೋಟಿ ರೂಪಾಯಿಯನ್ನು ಕೈಚೆಲ್ಲಿ ಕುಳಿತಿದ್ದಾರೆ. 

ಭೋಸಾರಿ ಎಂಐಡಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೂನ್ 9 ಮತ್ತು ಜುಲೈ 7 ರ ನಡುವೆ ಈ ವಂಚನೆ ನಡೆದಿದೆ. ವಿಶ್ವಕಪ್ ಸಮಯದಲ್ಲಿ ಮುಂಬೈ ಮತ್ತು ಪುಣೆಯಲ್ಲಿ ಪಿಜ್ಜಾ ರೆಸ್ಟೋರೆಂಟ್ ಸರಪಳಿಯ ಫ್ರಾಂಚೈಸಿ ಔಟ್‌ಲೆಟ್‌ ನೀಡುವುದಾಗಿ ಇವನ್ನು ನಂಬಿಸಲಾಗಿದೆ.  ಅದಕ್ಕೆ ಸಂಬಂಧಿಸಿದಂತೆ ವಿವಿಧ ಕಾರಣಗಳನ್ನು ಹೇಳಿ ಅನೇಕ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಪುಣೆಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಪಿಜ್ಜಾ ರೆಸ್ಟೋರೆಂಟ್ ಔಟ್ ಲೆಟ್ ನೀಡುವುದಾಗಿ ಅವರು ನಂಬಿಸಿದ್ದರು ಎನ್ನಲಾಗಿದೆ. ಮೋಸ ಹೋದ ಡೈರೆಕ್ಟರ್, ಆಹಾರ ಕ್ಷೇತ್ರದಲ್ಲಿ ಹಣ ಹೂಡಿಕೆ ಮಾಡುವ ಬಗ್ಗೆ ಮಾರ್ಗಗಳನ್ನು ಹುಡುಕುತ್ತಿದ್ದರು. ಪಿಜ್ಜಾ ಫ್ರ್ಯಾಂಚೈಸಿ ನೀಡುವ ಜಾಹೀರಾತು ನೋಡಿದ್ದಾರೆ. ಜೂನ್ ಮೊದಲ ವಾರದಲ್ಲಿ ಆನ್ಲೈನ್ ಫಾರ್ಮ್ ಭರ್ತಿ ಮಾಡಿದ್ದಾರೆ. ಜೂನ್ 9ರಂದು ವ್ಯಕ್ತಿಯೊಬ್ಬರಿಂದ ಕರೆ ಬಂದಿದೆ. ಅವರು ಫ್ರ್ಯಾಂಚೈಸಿಯಲ್ಲಿ ಕೆಲಸ ಮಾಡ್ತಿರೋದಾಗಿ ಹೇಳಿದ್ದಾರೆ.  ಆರಂಭಿಕ ಪ್ರಕ್ರಿಯೆ ಶುಲ್ಕವಾಗಿ 2.65 ಲಕ್ಷ ರೂಪಾಯಿಗಳನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾರೆ. ನಂತರ ಅವರು ಎನ್‌ಒಸಿ  ಶುಲ್ಕವಾಗಿ ಸುಮಾರು 6 ಲಕ್ಷ ರೂಪಾಯಿ  ಮತ್ತು ಔಟ್‌ಲೆಟ್‌ ಯಂತ್ರೋಪಕರಣಗಳನ್ನು ಖರೀದಿಸಲು 7.5 ಲಕ್ಷ ರೂಪಾಯಿ ಪಾವತಿಸಿದ್ದಾರೆ. ದೂರುದಾರರು ನಾಲ್ಕು ಕಂತುಗಳಲ್ಲಿ ಈ ಹಣವನ್ನ ಪಾವತಿಸಿದ್ದಾರೆ. ಇಷ್ಟೇ ಅಲ್ಲದೆ ಮತ್ತೆ 2.6 ಲಕ್ಷ ರೂಪಾಯಿ ಮತ್ತು ಸುಮಾರು 12 ಲಕ್ಷ ರೂಪಾಯಿಯನ್ನು ಮತ್ತೆ ಪಾವತಿ ಮಾಡಿದ್ದಾರೆ.  20 ಲಕ್ಷ ರೂಪಾಯಿಯನ್ನು ವಿಮಾನ ನಿಲ್ದಾಣ ಔಟ್ ಲೆಟ್ ಗೆ ನೀಡಿದ್ದಾರೆ. ಅದು ಇದು ಕಾರಣಕ್ಕೆ ಅವರು ಒಂದು ತಿಂಗಳಿಗೆ 1 ಕೋಟಿ ರೂಪಾಯಿ ಪಾವತಿಸಿದ್ದಾರೆ. ಈಗ ವಂಚಕರ ವಿಷ್ಯ ಹೊರ ಬೀಳುತ್ತಿದ್ದರೆ ದೂರು ದಾಖಲಿಸಿದ್ದಾರೆ. ಸೈಬರ್ ಕ್ರೈಂ ಪೊಲೀಸರು ಹಣ ವರ್ಗಾವಣೆಯಾದ ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸ್ತಿದ್ದಾರೆ.

Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ