ಈ ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕ, ಈತನ ಆಸ್ತಿ ಕೇಳಿದರೆ ಶಾಕ್ ಆಗ್ತೀರ.! – ಕರುನಾಡ ನ್ಯೂಸ್


ಮುಂಬೈ : ಐ ಆಮ್‌ ಎ ಬೆಗ್ಗರ್‌ ಬಾಯ್‌.. ಐ ಆಮ್‌ ಎ ಬೆಗ್ಗರ್‌ ಬಾಯ್‌.. ಎಂದು ಸಾಧುಕೋಕಿಲ ಹೇಳುವ ದೃಶ್ಯವನ್ನೊಮ್ಮೆ ನೆನಪಿಸಿಕೊಳ್ಳಿ ಇಲ್ಲದೇ ಹೋದಲ್ಲಿ ‘ಮಿಲನ’ ಚಿತ್ರದಲ್ಲಿ ಭಿಕ್ಷುಕ ಪಾತ್ರ ನಿರ್ವಹಿಸಿದ ರಂಗಾಯಣ ರಘು ಪಾತ್ರವನ್ನು ನೆನಪಿಸಿಕೊಳ್ಳಿ. ಬೆಗ್ಗರ್‌ ಅಥವಾ ಭಿಕ್ಷುಕ ಎಂದ ತಕ್ಷಣ ನಿಮ್ಮ ಮನಸ್ಸಿನಲ್ಲಿ ಬರುವ ಚಿತ್ರಗಳೇ ಬೇರೆ. ಆರ್ಥಿಕವಾಗಿ ಅವರು ಸದೃಢರಾಗಿರೋದಿಲ್ಲ. ಶುಭ್ರವಾದ ಬಟ್ಟೆಗಳಿರೋದಿಲ್ಲ. ಕೂದಲಿಗೆ ಎಣ್ಣೆ ತಾಕಿಸಿದೆ, ಬಾಚಿಕೊಳ್ಳದೇ ಎಷ್ಟು ದಿನಗಳಾದವು ಅನ್ನೋ ಲೆಕ್ಕವಿರೋದಿಲ್ಲ. ಇವರನ್ನು ಕಂಡ ತಕ್ಷಣವೇ ನಮ್ಮ ತಲೆಯಲ್ಲಿ ಇವರು ಬಹಳ ಬಡವರು ಅನ್ನೋ ಭಾವ ಮೂಡುತ್ತದೆ. ಹೆಚ್ಚಿನವರು ಹಾಗೆಯೇ ಇರುತ್ತಾರೆ ಕೂಡ. ಇದರ ಪರಿಣಾಮವಾಗಿ ಹೆಚ್ಚಿನ ಭಿಕ್ಷಕರು ಕೆಟ್ಟ ಕಾಯಿಲೆಗಳಿಗೆ ತುತ್ತಾಗಿ ಸಾವು ಕಾಣುತ್ತಾರೆ.

ಹೀಗಿರುವಾಗ ಭಿಕ್ಷುಕರನ್ನೂ ಶ್ರೀಮಂತರು ಇರುತ್ತಾರೆ ಎನ್ನುವ ಕಲ್ಪನೆಯೂ ನಮಗೆ ಇರಲಿಕ್ಕಿಲ್ಲ. ಆದರೆ, ಭಿಕ್ಷುಕರಲ್ಲೂ ಶ್ರೀಮಂತರಿದ್ದಾರೆ. ಈಗ ನಾವು ಹೇಳುತ್ತಿರುವ ಸುದ್ದಿಯಲ್ಲಿರುವ ವ್ಯಕ್ತಿ ವಿಶ್ವದ ಶ್ರೀಮಂತ ಭಿಕ್ಷುಕ. ಈತ ಆಸ್ತಿ ಕೇಳಿದ್ರೆ ನೀವು ಅಚ್ಚರಿಯಾಗೋದು ಖಂಡಿತ. ಈತನಿಗೆ ಭಿಕ್ಷೆ ಬೇಡುವುದೇ ವೃತ್ತಿ. ಇದರಿಂದಾಗಿ ಈತ ಮಾತ್ರವೇ ಅಲ್ಲ ಇನ್ನೂ ಹಲವರು ಕೋಟ್ಯಧಿಪತಿಗಳಾಗಿದ್ದಾರೆ. ಕೇವಲ ಭಿಕ್ಷೆ ಬೇಡುವ ಮೂಲಕ ಕೋಟ್ಯಧಿಪತಿಯಾದ, ವಿಶ್ವದ ಶ್ರೀಮಂತ ಭಿಕ್ಷುಕನ ಬಗ್ಗೆ ಮಾಹಿತಿ ಇಲ್ಲಿದೆ.

ಭರತ್‌ ಜೈನ್‌, ವಿಶ್ವದ ಶ್ರೀಮಂತ ಭಿಕ್ಷುಕ: ಹೌದು.. ಮುಂಬೈನ ಬೀದಿ ಬೀದಿಗಳಲ್ಲಿ ಭಿಕ್ಷೆ ಬೇಡುವ ಭರತ್‌ ಜೈನ್‌ ವಿಶ್ವದ ಶ್ರೀಮಂತ ಭಿಕ್ಷುಕ ಎನ್ನಲಾಗುತ್ತದೆ.  ಬಡತನದ ಕಾರಣದಿಂದಾಗಿ ಸ್ವಲ್ಪವೂ ವಿದ್ಯಾಭ್ಯಾಸ ಕಲಿಯಲು ಈತನಿಗೆ ಸಾಧ್ಯವಾಗಿರಲಿಲ್ಲ. ಆದರೆ, ವಿಶ್ವದ ಶ್ರೀಮಂತ ಭಿಕ್ಷುಕನಾಗಿರುವ ಭರತ್‌ ಜೈನ್‌, ಇಂದು ಮದುವೆಯಾಗಿದ್ದು, ಪತ್ನಿ, ಇಬ್ಬರು ಮಕ್ಕಳು, ಸಹೋದರ ಹಾಗೂ ತಂದೆಯನ್ನು ಭಿಕ್ಷೆಯ ಹಣದಲ್ಲಿಯೇ ಸಾಕುತ್ತಿದ್ದಾನೆ. ಆತನ ಇಬ್ಬರು ಮಕ್ಕಳು ಪ್ರತಿಷ್ಠಿತ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮುಂಬೈ ಮೂಲದ ಭರತ್‌ ಜೈನ್‌ನ ಆಸ್ತಿ ಬರೋಬ್ಬರಿ 7.5 ಕೋಟಿ ರೂಪಾಯಿ.  ಭಿಕ್ಷೆ ಬೇಡುವ ಮೂಲಕವೇ ಒಂದು ತಿಂಗಳಿಗೆ 60 ರಿಂದ 75 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಾರೆ. ಅದದೊಂದಿಗೆ ಮುಂಬೈನಲ್ಲಿ ಎರಡು ಬೆಡ್‌ರೂಮ್‌ನ ಸ್ವಂತ ಫ್ಲ್ಯಾಟ್‌ ಹೊಂದಿದ್ದು ಇದರ ಮೌಲ್ಯವೇ 1.2 ಕೋಟಿ ರೂಪಾಯಿ ಎನ್ನಲಾಗಿದೆ. ಅದರೊಂದಿಗೆ ಥಾಣೆಯಲ್ಲಿ ಎರಡು ಅಂಗಡಿಯನ್ನು ಹೊಂದಿದ್ದು ಅದರಿಂದ  ಪ್ರತಿ ತಿಂಗಳು 30 ಸಾವಿರ ರೂಪಾಯಿ ಬಾಡಿಗೆ ಬರುತ್ತಿದೆ. ಹೀಗಿರುವ ಭರತ್‌ ಜೈನ್‌ ಪ್ರತಿದಿನ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್‌ ಹಾಗೂ ಆಜಾದ್‌ ಮೈದಾನದಲ್ಲಿ ಭಿಕ್ಷೆ ಬೇಡುತ್ತಿರುತ್ತಾರೆ.

ಇಷ್ಟೆಲ್ಲಾ ಆಸ್ತಿ ಮಾಡಿದ್ದರೂ ಭರತ್‌ ಜೈನ್‌ ಇಂದಿಗೂ ಶಿವಾಜಿ ಟರ್ಮಿನಸ್‌ ಹಾಗೂ ಆಜಾದ್‌ ಮೈದಾನದಲ್ಲಿ ಭಿಕ್ಷೆ ಬೇಡುವುದನ್ನು ಕಾಣಬಹುದು. ಇಂದು ಒಬ್ಬ ವ್ಯಕ್ತಿ ದಿನಕ್ಕೆ 12 ರಿಂಧ 14 ಗಂಟೆ ದುಡಿದರೂ, ಸಾವಿರ ರೂಪಾಯಿ ಸಂಪಾದನೆ ಮಾಡಲು ಕಷ್ಟಪಡುತ್ತಾರೆ. ಆದರೆ, ಭರತ್‌ ಜೈನ್‌ ಜನರ ಉದಾರ ಮನಸ್ಸಿನ ಕಾರಣದಿಂದಾಗಿ ದಿನದ 10 ರಿಂದ 12 ಗಂಟೆಯಲ್ಲಿ 2 ರಿಂದ 2500 ರೂಪಾಯಿ ಸಂಪಾದನೆ ಮಾಡುತ್ತಾರೆ

Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ