ಕೇರಳದಲ್ಲಿ ವಿವಾದ ಹುಟ್ಟಿಸಿದ ನೇರ್ಚಪೆಟ್ಟಿ ಸಿನಿಮಾ! ಅಷ್ಟಕ್ಕೂ ಇದರಲ್ಲೇನಿದೆ? – ಕರುನಾಡ ನ್ಯೂಸ್


ಕೇರಳದಲ್ಲಿ ಇತ್ತೀಚೆಗೆ ದಿ ಕೇರಳ ಸ್ಟೋರಿ ಸಿನಿಮಾಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೀಗ ಇನ್ನೊಂದು ಸಿನಿಮಾ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ. ಕೇರಳದ ಜನರು ಸಿನಿಮಾದ ಪೋಸ್ಟರ್ ನೋಡಿ ಹರಿದು ಹಾಕುತ್ತಿದ್ದಾರೆ. ಈ ಸಿನಿಮಾ ಈಗ ವಿವಾದದಿಂದಲೇ ಸುದ್ದಿಯಾಗಿದೆ. ಮಾಲಿವುಡ್​ನಲ್ಲಿ ನೇರ್ಚಪೆಟ್ಟಿ ಎನ್ನುವ ಸಿನಿಮಾ ಸಿದ್ಧವಾಗಿದ್ದು ಇದು ಜುಲೈ 2ನೇ ವಾರದಲ್ಲಿ ರಿಲೀ ಆಗುತ್ತಿದೆ. ಕ್ರಿಶ್ಚಿಯನ್ ಸನ್ಯಾಸಿ ಸ್ತ್ರೀಯೊಬ್ಬರ ಪ್ರಣಯ ಕಥೆಯನ್ನು ಹೇಳುವ ಸಿನಿಮಾ ಈಗ ವಿರೋಧ ಎದುರಿಸುತ್ತಿದೆ. ವಿಶೇಷವಾಗಿ ಈ ಸಿನಿಮಾ ಬಗ್ಗೆ ಕಣ್ಣೂರಿನ ಜನತೆ ವಿರೋಧ ವ್ಯಕ್ತಪಡಿಸಿದ್ದಾರೆ. ಸಿನಿಮಾವನ್ನು ಕಣ್ಣೂರಿನ ಆಸುಪಾಸಿನಲ್ಲಿಯೇ ಶೂಟಿಂಗ್​ ಮಾಡಲಾಗಿದೆ. ಇದರಲ್ಲಿ ಕ್ರಿಶ್ಚಿಯನ್ ಸನ್ಯಾಸಿ ಸ್ತ್ರೀಯನ್ನೇ ಹೀರೋಯಿನ್ ಆಗಿ ತೋರಿಸಲಾಗಿದೆ. ಸಿನಿಮಾವನ್ನು ಬಾಬು ಜಾನ್ ಕೊಕವಾಯಲ್ ನಿರ್ದೇಶಿಸಿದ್ದಾರೆ. ನೈರಾ ನಿಹಾರ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಶೂಟಿಂಗ್ ವೇಳೆಯೂ ಭಾರೀ ವಿರೋಧ ವ್ಯಕ್ತವಾಗಿತ್ತು. ಜನರು ಸಿನಿಮಾದ ಶೂಟಿಂಗ್ ಲೊಕೇಷನ್​ಗೆ ಬಂದು ಚಿತ್ರೀಕರಣವನ್ನು ತಡೆದಿದ್ದಾರೆ. ನಂತರ ಚಿತ್ರತಂಡ ಕಂಪ್ಲೇಂಟ್ ಕೊಟ್ಟ ಕಾರಣ ಇದು ಇತ್ಯರ್ಥವಾಗಿತ್ತು. ಈಗ ಸಿನಿಮಾ ರಿಲೀಸ್​ಗೆ ರೆಡಿಯಾಗಿರುವಾಗ ಮತ್ತೆ ಇಂಥದ್ದೇ ವಿರೋಧ ವ್ಯಕ್ತವಾಗಿದೆ. ಸಿನಿಮಾದ ಪೋಸ್ಟರ್ ನಾಶ ಪಡಿಸಲಾಗಿದೆ. ಸಿನಿಮಾದ ಹೆಸರೇ ಈ ವಿವಾದಕ್ಕೆ ಕಾರಣ ಎಂದು ನಿರ್ದೇಶಕ ಹೇಳಿದ್ದಾರೆ. ಇದೇ ಮೊದಲಬಾರಿಗೆ ಮಲಾಯಳಂ ಸಿನಿಮಾದಲ್ಲಿ ಕ್ರಿಶ್ಚಿಯನ್ ಸನ್ಯಾಸಿ ಸ್ತ್ರೀಯ ಲವ್ ಲೈಫ್ ಬಗ್ಗೆ ಸಿನಿಮಾ ಮಾಡಲಾಗಿದೆ. ಸಿನಿಮಾವನ್ನು ಸ್ಕೈಗೇಟ್ ಫಿಲ್ಮ್ಸ್​ ಹಾಗೂ ಉಜ್ಜೈನಿ ಪ್ರೊಡಕ್ಷನ್ಸ್ ನಿರ್ಮಿಸಿದೆ. ಸಿನಿಮಾಗೆ ಸುನಿಲ್ ಪುಲ್ಲೋಡೆ ಸ್ಕ್ರಿಪ್ಟ್ ಬರೆದಿದ್ದಾರೆ. ರಫೀಕ್ ರಶೀದ್ ಸಿನಿಮಾಟೋಗ್ರಫಿ ಮಾಡಿದ್ದಾರೆ. ಸಿಂಟೋ ಡೇವಿಡ್ ಎಡಿಟಿಂಗ್ ಮಾಡಿದ್ದಾರೆ. ಸಿಬು ಸುಕುಮಾರನ್ ಹಾಗೂ ಸಿಬಿಚನ್ ಇರಿಟ್ಟಿ ಸಿನಿಮಾಗೆ ಸಂಗೀತ ಒದಗಿಸಿದ್ದಾರೆ.

The post ಕೇರಳದಲ್ಲಿ ವಿವಾದ ಹುಟ್ಟಿಸಿದ ನೇರ್ಚಪೆಟ್ಟಿ ಸಿನಿಮಾ! ಅಷ್ಟಕ್ಕೂ ಇದರಲ್ಲೇನಿದೆ? appeared first on ಕರುನಾಡ ನ್ಯೂಸ್.



Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ