ಥಿಯೇಟರ್​​ನಲ್ಲಿ ಬ್ಲೂಫಿಲಂ ತೋರಿಸಿ ನಾವು ಅಧಿಕಾರಕ್ಕೆ ಬಂದಿರಲಿಲ್ಲ; ಎಚ್​​ಡಿಕೆ ಕೆಂಡಾಮಂಡಲ! – ಕರುನಾಡ ನ್ಯೂಸ್


ಬೆಂಗಳೂರು: ಥಿಯೇಟರ್​​ನಲ್ಲಿ (Theaters) ಬ್ಲೂಫಿಲಂ ತೋರಿಸಿ ನಾವು ಅಧಿಕಾರಕ್ಕೆ ಬಂದಿರಲಿಲ್ಲ. ರೌಡಿಗಳಿಗೆ ಎಣ್ಣೆ ಸಪ್ಲೈ ಮಾಡಿಕೊಂಡು ನಾನೇನು ಅಧಿಕಾರಕ್ಕೆ ಬಂದಿದ್ನಾ? ಸರಿಯಾಗಿ ರಾಜಕಾರಣ ಮಾಡಿ ನಾವು ಅಧಿಕಾರಕ್ಕೆ ಬಂದಿದ್ವಿ ಅಂತಾ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ಕಾಂಗ್ರೆಸ್‌ನವರು (Congress) ನನ್ನ ಬಗ್ಗೆ ಚರ್ಚೆ ಮಾಡ್ತಾರಾ? ತಾಜ್​ ವೆಸ್ಟ್​ಎಂಡ್​ ಹೋಟೆಲ್ (Taj West End ) ಬಗ್ಗೆ ಮಾತಾಡ್ತಾರೆ. ನಾನು ವೆಸ್ಟ್​ಎಂಡ್​​​ಗೆ ಹೋಗಬೇಕಂದರೆ ಕಾಂಗ್ರೆಸ್‌ನವರನ್ನ ಕೇಳಬೇಕಾ ಅಂತ ಕಾಂಗ್ರೆಸ್​ ಟ್ವೀಟ್​​ಗೆ (Tweet) ಎಚ್​​ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.


ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಎಚ್​​ಡಿಕೆ ಪೆನ್​ಡ್ರೈವ್ ಬಾಂಬ್ ಸಿಡಿಸಿದ್ದಾರೆ. ಶರ್ಟ್ ಜೇಬಿನಿಂದ ಪೆನ್‌ಡ್ರೈವ್ ತೆಗೆದು ತೋರಿಸಿದ ಹೆಚ್‌ಡಿಕೆ, ಸರ್ಕಾರದ ವರ್ಗಾವರಣೆ ದಂಧೆ ಬಗ್ಗೆ ಆಡಿಯೋ ಇದೆ. ದಾಖಲೆ ಕೇಳಿದ್ರಲ್ಲ ಅದಕ್ಕೆ ತಂದಿದೀನಿ ನೋಡಿ ಎಂದು ತೋರಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ವಿರುದ್ಧ ಲೂಟಿ ಆರೋಪ ಮಾಡಿದ್ರು. ನಿನ್ನೆಯೂ ಇಂಧನ ಇಲಾಖೆಯಲ್ಲಿ ಟ್ರಾನ್ಸ್​ಫರ್ ಆಗಿದೆ. 10 ಕೋಟಿ ರೂಪಾಯಿ ಲಂಚ ಪಡೆದು ನಿನ್ನೆ ಇಬ್ಬರನ್ನ ಟ್ರಾನ್ಸ್‌ಫರ್ ಮಾಡಿದ್ದಾರೆ. ಟ್ರಾನ್ಸ್ ಫರ್ ಆದವರು ಒಂದು ದಿನದ ಆದಾಯವೇ 50 ಲಕ್ಷ ರೂಪಾಯಿ ಆದಾಯವಿದೆ. ಲೂಟಿ ಮಾಡಿ, ಮಜಾ ಮಾಡುವ ಒಂದು ವರ್ಗ ಈ ಸರ್ಕಾರದಲ್ಲಿದೆ ಎಂದು ಆರೋಪ ಮಾಡಿದ್ದಾರೆ.

ಕುಮಾರಸ್ವಾಮಿ ಪೆನ್‌ಡ್ರೈವ್ ವಿಚಾರಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್ ತಿರುಗೇಟು ಕೊಟ್ಟಿದ್ದಾರೆ. ಸಾಕ್ಷ್ಯ ಇದ್ದರೆ ಸ್ಪೀಕರ್ ಕೈಗೆ ಕೊಡಲಿ, ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಲಿ ಎಂದಿದ್ದಾರೆ. ದಾಖಲೆ ವಿಡಿಯೋ ಬಿಡುಗಡೆ ಮಾಡಿದ ಬಳಿಕ ಮಾತನಾಡುತ್ತೇನೆ ಎಂದು ಜಾರ್ಜ್ ಹೇಳಿದ್ದಾರೆ.





Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ