ಚಿಕ್ಕಮಗಳೂರು: ಗ್ರಾಮ.ಪಂಚಾಯತ್ ಅಧ್ಯಕ್ಷ ಸ್ಥಾನ ಒಲಿಯಬಹುದೇ ? – ಕರುನಾಡ ನ್ಯೂಸ್


ಪ್ರಸ್ತುತ‌ ಬ್ಯಾರಿ ಒಕ್ಕೂಟದ ತಾಲೂಕು ಅಧ್ಯಕ್ಷ, ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕ ಚಿಕ್ಕಮಗಳೂರು ಜಿಲ್ಲಾ ಕಾರ್ಯದರ್ಶಿ, ಬಿ.ಕಣಬೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ, ಮಲೆನಾಡು ಗಲ್ಫ್ ಟ್ರಸ್ಟ್ ಬಾಳೆಹೊನ್ನೂರು ಇದರ ಸಹ ಕಾರ್ಯದರ್ಶಿ, ಜೆಸಿಐ ಬಾಳೆಹೊನ್ನೂರು ಇದರ ನಿರ್ದೇಶಕ,ಟೀಮ್ ಜಾಗೃತ್ ಇದರ ಸಂಘಟನಾ ಕಾರ್ಯದರ್ಶಿಯಾಗಿ ಇಷ್ಟೇ ಅಲ್ಲದೇ ಇನ್ನೂ ಹತ್ತಲವಾರು ಸಂಘಟನೆಗಳಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಕಿರಿಯ ಜನನಾಯಕ. ಹೌದು ಇಬ್ರಾಹಿಂ ಶಫಿ(ಶಾಫಿ)ಎಂಬ ಹೆಸರಿನಿಂದ ಬಾಳೆಹೊನ್ನೂರಿನ ಸುತ್ತಮುತ್ತಲಿನ ಜನರಿಗೆ ಚಿರಪರಿಚಿತವಾದ ಹೆಸರು. ಬಾಳೆಹೊನ್ನೂರಿನ ಬಿ ಕಣಬೂರು ಗ್ರಾಮ ಪಂಚಾಯತ್ ನಲ್ಲಿ ಅತೀ ಕಿರಿಯ ವಯಸ್ಸಿನಲ್ಲಿ ಪಂಚಾಯತ್ ಸದಸ್ಯರಾಗಿ, ಸತತವಾಗಿ 3 ಬಾರಿ ಗೆಲುವು ಸಾಧಿಸಿದ್ದಾರೆ…ಸದಾ ಜನರೊಂದಿಗೆ ಬೆರೆಯುವ ಗುಣವನ್ನು ಹೊಂದಿದ್ದು ಮೂಲಭೂತ ಸೌಕರ್ಯಕ್ಕೆ ಮೊದಲ ಆದ್ಯತೆಯನ್ನು ನೀಡುವಲ್ಲಿ ಯಶಸ್ವಿ ರಾಜಕಾರಣಿಯಾಗಿ ಜನ ಮನಸ್ಸಿನಲ್ಲಿ ಉಳಿದಿದ್ದಾರೆ‌‌. ವಿದ್ಯಾರ್ಥಿಗಳಿಗಂತೂ ಇವರೆಂದರೆ ಅಚ್ಚುಮೆಚ್ಚು. ಕಾರಣವೇನು ಗೊತ್ತಾ? ದೂರದೂರಿಗೆ ವಿದ್ಯಾಭಾಸಕ್ಕಾಗಿ ಪ್ರತಿದಿನ ಬಸ್ಸಿನಲ್ಲಿ ಓಡಾಡುವವರಂತೂ ದೂರ ಧೃಡೀಕರಣ ಪತ್ರಕ್ಕೆ ಬೇಕಾಗಿ ಅಲೆದಾಡುವುದನ್ನು ಗಮನಿಸಿ ತಕ್ಷಣವೇ ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿದರು…ವಯೋ ವೃದ್ಧರ ಮಾಸಿಕ ವೃದ್ಧಾಪ್ಯ ವೇತನವನ್ನು ಮನೆ ಮನೆಗೆ ತಲುಪಿ ವಿಚಾರಿಸಿ ಅದರ ವ್ಯವಸ್ಥೆಯನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ…ಅದಿರಲಿ ಬಿಪಿಎಲ್ ಕಾರ್ಡುದಾರರಿಗೆ ಸರ್ಕಾರವು ಹಲವು ಮಾನದಂಡಗಳನ್ನು ವಿಧಿಸಿದಾಗ ತಳಮಟ್ಟದಲ್ಲಿರುವ ಒಬ್ಬ ಗ್ರಾ.ಪ ಸದಸ್ಯ ವಿರೋಧಿಸುವುದು ಅವರ ನಾಯಕತ್ವ ಗುಣವಲ್ಲವೇ?ಸರ್ಕಾರ ಯಾವುದೇ ಇರಲಿ ಜನ ಮನಸ್ಸನ್ನು ಅರ್ಥೈಸಿ ಅವರಿಗೆ ಬೇಕಾದ ಪ್ರತೀ ವಿಷಯದಲ್ಲೂ ತಮ್ಮ ಇರುವಿಕೆ ಮಾತ್ರವಲ್ಲದೇ ಆ ಕಾರ್ಯ ಪೂರ್ಣಗೊಳಿಸಿ ಕೊಡುವುದರಲ್ಲಿ ಎತ್ತಿದ ಕೈ…ಒಂದನ್ನು ಮಾತ್ರ ಮರೆಯದಿರೋಣ…ಕೊರೋನಾದ ಸಮಯದಲ್ಲಿ ಜನ ತತ್ತರಿಸಿ ಹೋದಾಗ ಕೊರೋನಾವನ್ನು ಲೆಕ್ಕಿಸದೆ ಬೀದಿಗಿಳಿದು ತಮ್ಮ ವಾರ್ಡ್‌ನಲ್ಲಿ ಕಾರ್ಯಾಚರಿಸುವಾಗ ಯಾರೊಬ್ಬರೂ ಕೂಡಾ ಅವರನ್ನು ಹೊಗಳಿಲ್ಲ…ಕಾರಣ ನಿಸ್ವಾರ್ಥ ಸೇವೆಯ ನಾಯಕರಾಗಿದ್ದರು…ಹೊಗಳಿಕೆಯನ್ನೂ ಭಯಸದೆ ತೆಗಳುವವರ ಮುಂದೆ ತನ್ನ ಕೆಲಸದ ಮೂಲಕ ಉತ್ತರಿಸಿದ ಒಬ್ಬ ಜನ ನಾಯಕರು ಕೂಡಾ…ಗೆಳೆಯರ ಬಳಗದೊಂದಿಗೆ ಸೂಚಿಸಿ ವಾಟ್ಸಾಪ್ ಗ್ರೂಪಿನ ಮೂಲಕ ಅವಶ್ಯಕತೆ ಇರುವವರಿಗೆ ಚಿಕಿತ್ಸೆಗೆ ಬೇಕಾದ ಹಣ, ಊಟಕ್ಕೆ ಪರದಾಡುವವರಿಗೆ ಬೇಕಾದ ರೇಷನ್ ಕಿಟ್ ಇನ್ನಿತರ ಕಾರ್ಯಚಟುವಟಿಕೆಗಳನ್ನು ನಡೆಸಿಕೊಡುವುದರೊಂದಿಗೆ ಇತರರಿಗೂ ಮಾದರಿಯಾಗಿದ್ದಾರೆ…ರಕ್ತದ ಅವಶ್ಯಕತೆಯನ್ನು ಮನಗಂಡು ಇತರ ಸಂಘ ಸಂಸ್ಥೆಗಳೊಂದಿಗೆ ಚರ್ಚಿಸಿ ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡುತ್ತಾ, ಜನ ಮನಗಳಲ್ಲಿ ಅಚ್ಚುಳಿದ ನಾಯಕ…ಮಲೆನಾಡು ಎಂದು ಕೇಳುವಾಗಲೇ ಮಳೆಯನ್ನು ನೆನಪಾಗುತ್ತದೆ…ಪ್ರತೀ‌ ವರ್ಷವೂ ಮಳೆಯಿಂದ ತತ್ತತಿಸಿ ಹೋದ ಜನರಿಗೆ ಸರ್ಕಾರ ಸೌಲಭ್ಯಗಳನ್ನು ಒದಗಿಸಿಕೊಟ್ಟಂತಹ‌ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ…ನಿಮ್ಮ ಈ ಕಾರ್ಯವೈಖರಿಯನ್ನು ಬಣ್ಣಿಸಲಸಾಧ್ಯ ಎಂಬುವುದಂತೂ ಸತ್ಯ. ತಮ್ಮ ಈ ಸೇವೆಗಳು ಹೀಗೆಯೇ ಮುಂದುವರೆಯಲಿ ಎಂದು ಬಯಸುತ್ತಾ.

✍ ರಮೀಝ್ ಬಾಳೆಹೊನ್ನೂರು(Rameez Bhr)

Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ