ಅಂದು ಕಾಲೇಜು ಶುಲ್ಕ ಕಟ್ಟಲು ಚಹಾ ಮಾರುತ್ತಿದ್ದವ, ಇಂದು ಕೋಟಿಗಟ್ಟಲೆ ಮೌಲ್ಯವಿರುವ ರಾಯಲ್ ಓಕ್ ಒಡೆಯ – ಕರುನಾಡ ನ್ಯೂಸ್


ಅಂದು ಕಾಲೇಜು ಫೀಸ್ ಕಟ್ಟಲು ಹಣ ಇಲ್ಲದೇ ಚಹಾಪುಡಿ ಮಾರುತ್ತಿದ್ದ ವಿಜಯ್ ಸುಬ್ರಮಣಿಯಮ್ ಅವರು ಇದೀಗ ರಾಯಲ್ ಓಕ್ ಎಂಬ ದೈತ್ಯ ಕಂಪನಿಯ ಮಾಲೀಕ. ಒಂದು ಬ್ಯುಸಿನೆಸ್ ನಡೆಸುವುದು ಅಷ್ಟು ಸುಲಭವಲ್ಲ. ಸತತ ಪರಿಶ್ರಮ, ಮಾರುಕಟ್ಟೆ ಅರಿವು, ಸಂಪನ್ಮೂಲ, ಸಂಪರ್ಕ ಇವೆಲ್ಲವೂ ಮೇಳೈಸಿದರೆ ಉದ್ದಿಮೆ ಯಶಸ್ವಿಯಾಗಲು ಸಾಧ್ಯ. ಭಾರತದಲ್ಲಿ ಸ್ವಂತವಾಗಿ ವ್ಯವಹಾರ ಶುರು ಮಾಡಿ ಯಶಸ್ವಿಯಾದವರು ಹಲವರಿದ್ದಾರೆ. ಅವರಲ್ಲಿ ಗಮನ ಸೆಳೆಯುವ ಕೆಲವರ ಪೈಕಿ ವಿಜಯ್ ಸುಬ್ರಮಣಿಯಮ್ (Vijai Subramaniam) ಕೂಡಾ ಒಬ್ಬರು. ಬೆಂಗಳೂರಿನ ರಾಯಲ್ ಓಕ್ (Royal Oak) ಎಂಬ ಹೆಸರು ನೀವು ನೋಡಿರಲುಬಹುದು, ಕೇಳಿರಬಹುದು. ಇದು ಪೀಠೋಪಕರಣಗಳ ಕಂಪನಿ. ಇದರ ಮಾಲೀಕನೇ ವಿಜಯ್ ಸುಬ್ರಮಣಿಯಮ್. ಇವರ ಜೀವನದ ಕಥೆ ಎಲ್ಲಾ ಕಾಲದ ಯುವಕರಿಗೂ ಸ್ಫೂರ್ತಿ ನೀಡುವಂಥದ್ದು. ತಮಿಳುನಾಡು ಸಂಜಾತರಾದ ವಿಜಯ್ ಸುಬ್ರಮಣಿಯಮ್ ಅವರು ಕಾಲೇಜು ದಿನಗಳಲ್ಲಿ ಹಣ ಇಲ್ಲದೇ ಚಹಾ ಮಾರಿ ಫೀಸ್ ಕಟ್ಟುತ್ತಿದ್ದರು. ಬಡ ಕುಟುಂಬದಲ್ಲಿ ಜನಿಸಿದ ವಿಜೈ ಸುಬ್ರಮಣಿಯಮ್ 1992ರಲ್ಲಿ ಅವರು ತಮಿಳು ಮೀಡಿಯಂನಲ್ಲಿ 12ನೇ ತರಗತಿಯವರೆಗೂ ಓದಿದರು. ಇವರ ತಾಯಿ ಸಣ್ಣ ಅಂಗಡಿಯೊಂದನ್ನು ಇಟ್ಟುಕೊಂಡಿದ್ದರು. ಅದೇ ಇವರ ಕುಟುಂಬಕ್ಕೆ ಹಣಕಾಸು ಆಧಾರ. ಬಿಕಾಂ ಓದುವಾಗ ಫೀಸ್ ಕಟ್ಟಲು ಹಣ ಇಲ್ಲದೇ ಅಂಗಡಿಗಳಿಗೆ ಚಹಾಪುಡಿ ಮಾರುತ್ತಾ ಅದರಿಂದ ಬಂದ ಹಣದಲ್ಲಿ ಫೀಸ್ ಕಟ್ಟುತ್ತಿದ್ದರಂತೆ. ಬಿಕಾಂ ಓದಿದ ಬಳಿಕ ಎಂಕಾಂಗೆ ಸೇರಿದರಾದರೂ ಮುಂದೆ ಓದಲು ಆಗಲಿಲ್ಲ. ಮನೆಯ ಹಣಕಾಸು ಪರಿಸ್ಥಿತಿ ತೀರಾ ಕೆಳಗಿದ್ದರಿಂದ ಅವರು ಅನಿವಾರ್ಯವಾಗಿ ಸಂಪಾದನೆಗೆ ಇಳಿಯಬೇಕಾಯಿತು. ಎಂಕಾಂನಿಂದ ನಿರ್ಗಮಿಸಿದ ಬಳಿಕ ಇವರು ಕೊಯಮತ್ತೂರಿನಲ್ಲಿ ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್​ನಲ್ಲಿ ಕ್ರೆಡಿಟ್ ಕಾರ್ಡ್ ಮಾರುವ ಕೆಲಸಕ್ಕೆ ಸೇರಿದರು. ಕೊಯಮತ್ತೂರಿನಲ್ಲಿ ಎಕ್ಸಿಬಿಶನ್​ವೊಂದರಲ್ಲಿ ಸ್ಟಾಲ್ ಹಾಕುವ ಅವಕಾಶ ಇವರಿಗೆ ಸಿಕ್ಕಿತ್ತು. ತನ್ನ ಬಳಿ ಇದ್ದ ಸ್ಕೂಟರ್ ಮಾರಿ ಹಣ ಒಟ್ಟುಗೂಡಿಸಿದರು. ಸ್ನೇಹಿತರಿಬ್ಬರಿಂದಲೂ ಒಂದಷ್ಟು ಹಣ ಕಲೆಹಾಕಿದರು. ಬಟ್ಟೆ, ಅಡುಗೆ ಮನೆ ವಸ್ತು, ಕ್ಯಾಂಡಲ್ ಸ್ಟ್ಯಾಂಡ್ ಇತ್ಯಾದಿ ವಸ್ತುಗಳನ್ನು ಮಾರಲು ತೊಡಗಿದರು. ಇದೆಲ್ಲವೂ ತಕ್ಕಮಟ್ಟಿಗೆ ಅವರಿಗೆ ಕೈಹಿಡಿಯಿತು.ಬೆಂಗಳೂರಿನಲ್ಲಿ ರಾಯಲ್ ಓಕ್ ಎಂಬ ಫರ್ನಿಚರ್ (ಪೀಠೋಪಕರಣ) ಕಂಪನಿ ಆರಂಭಿಸಿದರು. ಇದೂ ಕೂಡ ದೊಡ್ಡಮಟ್ಟದಲ್ಲಿ ಯಶಸ್ವಿಯಾಯಿತು. ಬೇರೆ ಬೇರೆ ನಗರಗಳಲ್ಲಿ ಸುಮಾರು 150 ರೀಟೇಲ್ ಮಳಿಗೆಗಳನ್ನು ಹೊಂದಿರುವ ರಾಯಲ್ ಓಕ್​ನಲ್ಲಿ ಒಟ್ಟು 2,000ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಾರೆ. ಇವರ ಕಂಪನಿಯ ಮೌಲ್ಯ 1,000 ಕೋಟಿ ರೂಗೂ ಹೆಚ್ಚು ಎನ್ನಲಾಗಿದೆ.

Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ