18ರಿಂದ 21ರವರೆಗೆ ಹೊರನಾಡು, ಗಡಿನಾಡು ಕನ್ನಡಿಗ ವಿದ್ಯಾರ್ಥಿಗಳ ಸಿಇಟಿ ದಾಖಲಾತಿಗಳ ಪರಿಶೀಲನೆ: ಕೆಇಎ – ಕರುನಾಡ ನ್ಯೂಸ್


ಬೆಂಗಳೂರು : ಎಂಜಿನಿಯರಿಂಗ್ ಪ್ರವೇಶಾತಿ ಬಯಸಿ, ‘ಬಿ, ಸಿ, ಡಿ, ಇ, ಎಫ್, ಜಿ, ಎಚ್, ಐ, ಜೆ, ಕೆ, ಎಲ್, ಎಂ, ಎನ್ ಮತ್ತು ಓ’ ಅರ್ಹತಾ ಕಂಡಿಕೆಗಳನ್ನು (ಎಲಿಜಿಬಿಲಿಟಿ ಕ್ಲಾಸಸ್- ಉದಾಹರಣೆಗೆ ಹೊರನಾಡು ಕನ್ನಡಿಗರು, ರಾಜ್ಯದ ಸೈನಿಕರು, ರಕ್ಷಣಾ ಸಿಬ್ಬಂದಿ ಮಕ್ಕಳು ಇತ್ಯಾದಿ) ಕ್ಲೇಮ್ ಮಾಡಿರುವ ಅಭ್ಯರ್ಥಿಗಳ ದಾಖಲಾತಿಗಳ ಪರಿಶೀಲನೆಯು ಜುಲೈ 18ರಿಂದ 21ರವರೆಗೆ ಬೆಂಗಳೂರಿನ (Bengaluru) ಮಲ್ಲೇಶ್ವರದಲ್ಲಿರುವ (Malleshwaram) ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕೇಂದ್ರ ಕಚೇರಿಯಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ.


ಬೆಂಗಳೂರು : ಎಂಜಿನಿಯರಿಂಗ್ ಪ್ರವೇಶಾತಿ ಬಯಸಿ, ‘ಬಿ, ಸಿ, ಡಿ, ಇ, ಎಫ್, ಜಿ, ಎಚ್, ಐ, ಜೆ, ಕೆ, ಎಲ್, ಎಂ, ಎನ್ ಮತ್ತು ಓ’ ಅರ್ಹತಾ ಕಂಡಿಕೆಗಳನ್ನು (ಎಲಿಜಿಬಿಲಿಟಿ ಕ್ಲಾಸಸ್- ಉದಾಹರಣೆಗೆ ಹೊರನಾಡು ಕನ್ನಡಿಗರು, ರಾಜ್ಯದ ಸೈನಿಕರು, ರಕ್ಷಣಾ ಸಿಬ್ಬಂದಿ ಮಕ್ಕಳು ಇತ್ಯಾದಿ) ಕ್ಲೇಮ್ ಮಾಡಿರುವ ಅಭ್ಯರ್ಥಿಗಳ ದಾಖಲಾತಿಗಳ ಪರಿಶೀಲನೆಯು ಜುಲೈ 18ರಿಂದ 21ರವರೆಗೆ ಬೆಂಗಳೂರಿನ (Bengaluru) ಮಲ್ಲೇಶ್ವರದಲ್ಲಿರುವ (Malleshwaram) ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕೇಂದ್ರ ಕಚೇರಿಯಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ

ಈ ಬಗ್ಗೆ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಮೇಲ್ಕಂಡ ನಾಲ್ಕೂ ದಿನ ಬೆಳಿಗ್ಗೆ 9:30ರಿಂದ ದಾಖಲಾತಿಗಳ ಪರಿಶೀಲನೆ ಆರಂಭವಾಗಲಿದೆ. ಯಾವ್ಯಾವ ರ‍್ಯಾಂಕ್ ಪಡೆದಿರುವ ಅಭ್ಯರ್ಥಿಗಳು ಯಾವ ದಿನದಂದು ಈ ಪ್ರಕ್ರಿಯೆಗೆ ಮೂಲದಾಖಲಾತಿಗಳು ಮತ್ತು ಒಂದು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಹಾಜರಾಗಬೇಕು ಎನ್ನುವುದನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಇದರಂತೆ ಅಭ್ಯರ್ಥಿಗಳು ಆಗಮಿಸಬೇಕು ಎಂದು ಮಾಹಿತಿ ನೀಡಿದ್ದಾರೆ. ಇನ್ನು ಆರ್ಕಿಟೆಕ್ಚರ್ ಕೋರ್ಸಿಗೆ ಪ್ರವೇಶಾತಿ ಬಯಸಿ, ತಮ್ಮ ಅರ್ಜಿಯಲ್ಲಿ ಇದುವರೆಗೂ ನಾಟಾ- 1 ಅಥವಾ ನಾಟಾ-2 ಪರೀಕ್ಷೆಗಳಲ್ಲಿ ಗಳಿಸಿರುವ ಅಂಕಗಳನ್ನು ನಮೂದಿಸದೆ ಇರುವ ಅಭ್ಯರ್ಥಿಗಳು ನಿಯಮಾನುಸಾರ ರ‍್ಯಾಂಕಿಂಗ್ ಪಡೆಯಲು ಅನುಕೂಲವಾಗಲೆಂಬ ಹಿನ್ನೆಲೆಯಲ್ಲಿ, ಜುಲೈ 5ರ ಬೆಳಿಗ್ಗೆ 11 ಗಂಟೆಯವರೆಗೂ ಪ್ರಾಧಿಕಾರವು ಮತ್ತೊಂದು ಅವಕಾಶ ಕಲ್ಪಿಸಿದೆ ಎಂದು ಕೆಇಎ ತಿಳಿಸಿದೆ.

Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ