ಬಸ್ ಅಪಘಾತ, ಬೈಕ್‌ಗೆ ಬಸ್ ಡಿಕ್ಕಿ, ಜಾಲಹಳ್ಳಿ ಕ್ರಾಸ್, ವಿದ್ಯಾರ್ಥಿನಿ ಸಾವು, ತಂದೆ ಪಾರು ವಿದ್ಯಾರ್ಥಿನಿ ಸಾವು, ವಿದ್ಯಾರ್ಥಿನಿ ದಿಶಾ, ಬೆಂಗಳೂರು, ಕ್ರೈಮ್ ಸ್ಟೋರಿ, ಬೆಂಗಳೂರು: ಆ ತಂದೆ (father) ಮಗಳ (daughter) ಮೇಲೆ ಬೆಟ್ಟದಷ್ಟು ಕನಸು ಕಟ್ಟಿಕೊಂಡು ಕಾಲೇಜಿಗೆ (college) ಕಳುಹಿಸುತ್ತಿದ್ರು, ನನ್ನ ಮಗಳು ಎಂಜಿನಿಯರ್ (engineer) ಆಗಬೇಕೆಂದು ಆಸೆ ಪಟ್ಟಿದ್ರು. ಬಸ್‌ನಲ್ಲಿ (Bus) ಓಡಾಡೋಕೆ ಲೇಟ್ ಆಗುತ್ತೆ ಅಂತಾ ತಾವೇ ಕಾಲೇಜಿಗೆ ಡ್ರಾಪ್ ಮಾಡುತ್ತಿದ್ರು. ಆದ್ರೆ ವಿಧಿಯಾಟ.. ಇದ್ದೊಬ್ಬ ಮಗಳನ್ನೆ ಬಲಿ ತೆಗೆದುಕೊಂಡು ಬಿಡ್ತು. ಅಪಘಾತದಲ್ಲಿ (Accident) ಮಗಳು ಅಸುನೀಗಿದ್ದು ತಂದೆ ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದ್ದಾರೆ. ಇದೀಗ ಹೆತ್ತವರು ಮಗಳ ಮೃತ ದೇಹದ ಮುಂದೆ ಗೋಳಾಟ ನಡೆಸಿದ್ದು, ಆಕ್ರಂದನ ಮುಗಿಲು ಮುಟ್ಟಿತ್ತು.
ಜಾಲಹಳ್ಳಿ ಕ್ರಾಸ್ ಬಳಿ ಅಪಘಾತ
ಬೆಂಗಳೂರಿನ ದಾಸರಹಳ್ಳಿ ಬಳಿ ಇರುವ ಪೀಪಲ್ ಟ್ರೀ ಆಸ್ಪತ್ರೆ ಬಳಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಹೀಗೆ ಗೋಳಾಡುತ್ತಿರುವವರು ಇವರು ತನ್ನ ಮಗಳು 18 ವರ್ಷದ ದಿಶಾಳನ್ನು ಅಪಘಾತದಲ್ಲಿ ಕಳೆದುಕೊಂಡು ದುಖಃದ ಮಡುವಿನಲ್ಲಿದ್ದಾರೆ. ಯಾವಾಗಲೂ ಬ್ಯುಸಿ ಇರುವ ತುಮಕೂರು ರಸ್ತೆಯ ಜಾಲಹಳ್ಳಿ ಜಂಕ್ಷನ್, ಇಂದು ಮುಂಜಾನೆ ಆ ಪ್ರೈವೇಟ್ ಬಸ್ ಚಾಲಕ ಮಾಡಿದ ಒಂದು ಕ್ಷಣದ ಎಡವಟ್ಟು ಇಂದು ಕುಟುಂಬಕ್ಕೆ ಮರೆಯದಂತೆ ಆಘಾತ ನೀಡಿದೆ. ಮೃತ ದಿಶಾಳ ತಂದೆ ತನ್ನ ಮಗಳು ಎಂಜಿನಿಯರಿಂಗ್ ಮಾಡಬೇಕು ಎಂದು ಒಳ್ಳೆ ಖಾಸಗಿ ಕಾಲೇಜಗೆ ಸೇರಿಸಿದ್ದರು, ಪಿಸಿಎಂ ವಿಭಾಗದಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದ ದಿಶಾ ಕಾಲೇಜಿಗೆ ಬಸ್ ನಲ್ಲಿ ಓಡಾಡುವುದು ಲೇಟ್ ಅಗುತ್ತದೆ ಎಂದು ಸ್ವತಃ ತಾವೆ ನಿತ್ಯ ಕಾಲೇಜಿಗೆ ಕರೆದುಕೊಂಡು ಹೋಗುವುದು, ವಾಪಸ್ ಕರೆದುಕೊಂಡು ಬರುವುದು ಮಾಡುತ್ತಿದ್ದರು. ಹೀಗೆ ಇಂದು ಮುಂಜಾನೆ ಪೀಣ್ಯದ ರೆಡ್ಡಿ ಕಟ್ಟೆ ಬಳಿಯಿಂದ ಕಾಲೇಜೆಗೆ ಬೈಕ್‌ನಲ್ಲಿ ಹೋಗುತ್ತಿದ್ರು. ಈ ವೇಳೆ ಜಾಲಹಳ್ಳಿ ಕ್ರಾಸ್ ಸಿಗ್ನಲ್ ಪಾಸ್ ಮಾಡುವಾಗ ಖಾಸಗಿ ಬಸ್ ಚಾಲಕನ ಅಜಾಗರುಕತೆಯಿಂದ ಅಪ್ಪ ಮಗಳು ಇಬ್ಬರು ಅಪಘಾತಕ್ಕೆ ಈಡಾಗಿದ್ದಾರೆ.ಅಪಘಾತದಲ್ಲಿ ತಂದೆ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದರೆ ಮಗಳ ದಿಶಾ ಕಾಲಿಗೆ ತೀವ್ರ ಪೆಟ್ಟಗಾಗಿತ್ತು. ಕೂಡಲೇ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದರು. ಆದರೂ ಪ್ರಯೋಜನವಾಗದೆ ತೀವ್ರ ರಕ್ತಸ್ತರಾವದಿಂದ ಆಸ್ಪತ್ರೆಯಲ್ಲಿ ದಿಶಾ ಕೊನೆಯುಸಿರು ಎಳೆದಿದ್ದಾಳೆ.ಒಟ್ಟಾರೆ ಮನೆಗೆ ಜ್ಯೋತಿಯಾಗಬೇಕಿದ್ದ ಮಗಳು ಸಾವನ್ನಪ್ಪಿದ್ದು ಮಗಳನ್ನ ಎಂಜಿನಿಯರಿಂಗ್ ಮಾಡಿಸಬೇಕು ಎನ್ನುತ್ತಿದ್ದ ಪೊಷಕರ ಕನಸು ನುಚ್ಚು ನೂರಾಗಿದೆ. ಖಾಸಗಿ ಬಸ್ ಚಾಲಕನ ಅಜಾಗರೂಕತೆಗೆ ಒಂದು ಕುಟುಂಬವೇ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಪೀಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಬಸ್ ಹಾಗೂ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
The post ಬಸ್- ಬೈಕ್ ನಡುವೆ ಡಿಕ್ಕಿ; ಬೈಕ್‌ನಲ್ಲಿದ್ದ ವಿದ್ಯಾರ್ಥಿನಿ ಸಾವು, ತಂದೆ ಜೊತೆ ಯಿದ್ದಾಗಲೆ ಕೊನೆಯುಸಿರೆಳೆದ ಪುತ್ರಿ appeared first on ಕರುನಾಡ ನ್ಯೂಸ್.