YouTube ಮೂಲಕ ಕೋಟಿ ಕೋಟಿ ಗಳಿಸುತ್ತಿರುವ 12 ವರ್ಷದ ಹುಡುಗಿ!

ಈ ಲೇಖನದ ಶೀರ್ಷಿಕೆ ನೋಡಿ ನಿಮಗೆಲ್ಲಾ ಖಂಡಿತ ಶಾಕ್ ಆಗಿರತ್ತೆ ಅನ್ಸತ್ತೆ. ಇದೇನಪ್ಪಾ, ಕೇವಲ 12 ವಯಸ್ಸಿನ ಹುಡುಗಿ ಬರೀ ಯೂಟ್ಯೂಬ್ ಮೂಲಕವೇ ಕೋಟಿ ದುಡಿಯುತ್ತಿದ್ದಾಳಾ? ಇದು ‘ನಂಬಲಸಾಧ್ಯ’ ಎಂದು ಅನಿಸುತ್ತಲೂ ಇರಬಹುದು. ಆದರೆ, ಇದು ಸಂಪೂರ್ಣ ನಿಜವಾದ ಸಂಗತಿ! ಹೌದು, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮೂಲದ 11 ವರ್ಷದ ಶ್ಫಾ ತನ್ನ ಯೂಟ್ಯೂಬ್ (Youtube) ಚಾನೆಲ್ ಮೂಲಕ ಕೋಟಿ ಕೋಟಿ ಹಣ ಗಳಿಸುತ್ತಿದ್ದಾಳೆ. ತನ್ನ ವಿಡೀಯೋಗಳ ಮೂಲಕ ಜಗತ್ತಿನಾದ್ಯಂತ ಮಕ್ಕಳ ಮನ ಗೆಲ್ಲುತ್ತಿದ್ದಾಳೆ. ಈ ಅಸಾಮಾನ್ಯ ಯುವ ಯೂಟ್ಯೂಬರ್, ತನ್ನ ಚಾನೆಲ್ (Channel) ಮೂಲಕ ಅಪಾರ ಖ್ಯಾತಿ ಮತ್ತು ಹಣ, ಮತ್ತು ಯಶಸ್ಸನ್ನು ಗಳಿಸಿದ್ದಾಳೆ. ಡಿಸೆಂಬರ್ 19, 2011 ರಂದು ಜನಿಸಿದ ಶ್ಫಾ ಗೆ ಈಗ ಕೇವಲ 11 ವರ್ಷ ವಯಸ್ಸು. ಆದರೆ, ತನ್ನ ವಯಸ್ಸಿಗೆ ಮೀರಿದ ಖ್ಯಾತಿ ಗಳಿಸಿದ್ದಾಳೆ. ಯೂಟ್ಯೂಬ್ ಡೇಟಾ ವಿಶ್ಲೇಷಣೆ ಮತ್ತು ABPlive ವರದಿಯ ಪ್ರಕಾರ, ಶ್ಫಾ ಳ ಪ್ರತಿ 1000 ವೀಕ್ಷಣೆಗಳಿಗೆ ಯೂಟ್ಯೂಬ್ ಸುಮಾರು $1.21 ಹಣ ನೀಡುತ್ತದೆ. ಅಂದರೆ, ಪ್ರತಿ ಸಾವಿರ ವೀವ್ಸ್ ಗಳಿಗೆ ಅಂದಾಜು 100 ರೂಗಳು. ಮೇ 2023 ರಲ್ಲಿ ಶ್ಫಾ ತನ್ನ YouTube ಚಾನಲ್‌ನಿಂದ $200,000 ಕ್ಕೂ ಹೆಚ್ಚು ಹಣ ಗಳಿಸಿದ್ದು, ಕೆಲವೊಮ್ಮೆ ಆಕೆಯ ತಿಂಗಳ ಗಳಿಕೆ $300,00 ನ್ನೂ ಮೀರಿರುತ್ತದೆಯಂತೆ. ಇನ್ನು ಕಳೆದ ವಾರದ, ಶ್ಫಾ ತನ್ನ ಯೂಟ್ಯೂಬ್ ಚಾನೆಲ್ ಮೂಲಕ $77,400 ಕ್ಕೂ ಹೆಚ್ಚು ಹಣ ಗಳಿಸಿದ್ದಾಳೆ. ಕಳೆದ 30 ದಿನಗಳಲ್ಲಿ, ಆಕೆಯ ಗಳಿಕೆಯು $1.27 ಮಿಲಿಯನ್ ತಲುಪಿದ್ದು, ಕಳೆದ ಮೂರು ತಿಂಗಳಲ್ಲಿ $6.76 ಮಿಲಿಯನ್ ದುಡಿದಿದ್ದಾಳೆ.

ಅಂದಹಾಗೆ, ಈ ಯೂಟ್ಯೂಬ್ ಚಾನೆಲ್ ನಡೆಸಲು ಶ್ಫಾ ಗೆ ಸಾಥ್ ನೀಡಿರುವುದು ಆಕೆಯ ತಾಯಿ. ಅವರೇ ಈ ಚಾನೆಲ್ ಅನ್ನು ನಿರ್ವಹಿಸುತ್ತಿದ್ದಾರೆ. ಮಾರ್ಚ್ 29, 2015 ರಂaದು ಶುರುವಾದ ಚಾನೆಲ್ ಕಳೆದ 8 ವರ್ಷಗಳಲ್ಲಿ ಸುಮಾರು 35 ಮಿಲಿಯನ್ ಕ್ಕೂ ಹೆಚ್ಚು ಸಬ್ರ್ಕೈಬರ್ಸ್ ಅನ್ನು ಗಳಿಸಿದೆ. ಈ ಚಾನೆಲ್ ನಲ್ಲಿ ಇದುವರೆಗೂ ಸುಮಾರು 900 ಕ್ಕೂ ಹೆಚ್ಚು ವಿಡಿಯೋಗಳನ್ನು ಅಪ್ ಲೋಡ್ ಮಾಡಲಾಗಿದ್ದು, ಒಟ್ಟು 22 ಬಿಲಿಯನ್ ವೀಕ್ಷಣೆಗಳನ್ನು ಕಂಡಿದೆ.

ಈಕೆಯ ಅಂದಾಜು ನಿವ್ವಳ ಮೌಲ್ಯ ಪ್ರಸ್ತುತ ಸುಮಾರು $50 ಮಿಲಿಯನ್ ಆಗಿದ್ದು, ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ ಒಟ್ಟು 410 ಕೋಟಿ ರೂ.

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ