48 ವರ್ಷಗಳಲ್ಲಿ ಇದೇ ಮೊದಲು! ವಿಶ್ವಕಪ್​​​ನಿಂದ ಹೊರಬಿದ್ದ ವೆಸ್ಟ್​ ಇಂಡೀಸ್​​


ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​​​ನ ಅರ್ಹತಾ ಸುತ್ತಿನ ಅಂಗವಾಗಿ ನಡೆಯುತ್ತಿರುವ ಸೂಪರ್ ಸಿಕ್ಸ್​​ನಲ್ಲಿ ಇಂದು ಸ್ಕಾಟ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್​ ತಂಡ ಸೋಲುಂಡಿದೆ. ಇದರೊಂದಿಗೆ ವಿಶ್ವಕಪ್​ನಿಂದ ಹೊರ ಬಿದ್ದಿದೆ. ಎರಡು ಬಾರಿ ಐಸಿಸಿ ಏಕದಿನ ವಿಶ್ವಕಪ್ ಚಾಂಪಿಯನ್​ ಆಗಿರುವ ವೆಸ್ಟ್​ ಇಂಡೀಸ್ ತಂಡದ ಸೋಲು ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ನೀಡಿದೆ. ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಕೇವಲ 181 ರನ್ ಗಳಿಗೆ ಆಲೌಟ್ ಆಗಿತ್ತು. ಬಳಿಕ ಬ್ಯಾಟಿಂಗ್​​ಗೆ ಇಳಿದ ಸ್ಕಾಟ್ಲೆಂಡ್ ತಂಡ ಕೇವಲ ಮೂರು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಸ್ಕಾಟ್ಲೆಂಡ್ ಪರ ಆಲ್‌ರೌಂಡರ್ ಬ್ರ್ಯಾಂಡನ್ ಮೆಕ್‌ಮುಲ್ಲೆನ್ ಬೌಲಿಂಗ್‌ನಲ್ಲಿ ಮೂರು ವಿಕೆಟ್ ಪಡೆದರೆ ಬ್ಯಾಟಿಂಗ್‌ನಲ್ಲಿ 69 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು. ಈ ಸೋಲಿನೊಂದಿಗೆ ವೆಸ್ಟ್​ ಇಂಡೀಸ್ ತಂಡ ವಿಶ್ವಕಪ್​ಗೆ ಅರ್ಹತೆ ಪಡೆದುಕೊಳ್ಳಲು ವಿಫಲವಾಗಿದ್ದು, ಸೂಪರ್ ಸಿಕ್ಸ್ ಹಂತದಲ್ಲೇ ಹೊರ ಬಿದ್ದಿದೆ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ 2017ರ ಚಾಂಪಿಯನ್ಸ್ ಟ್ರೋಫಿ ಮತ್ತು 2022ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು. ವೆಸ್ಟ್ ಇಂಡೀಸ್ ತಂಡ ಮೊದಲ ಎರಡು ಐಸಿಸಿ ವಿಶ್ವಕಪ್​ ಟೂರ್ನಿಗಳು ಅಂದರೇ, 1975 ಮತ್ತು 1979ರಲ್ಲಿ ಚಾಂಪಿಯನ್​​ ಆಗಿತ್ತು. ಅಲ್ಲದೇ 1983ರಲ್ಲಿ ರನ್ನರ್​​ಅಪ್​ ಆಗಿತ್ತು. ಐಸಿಸಿ ಏಕದಿನ ವಿಶ್ವಕಪ್​​ನ 13ನೇ ಆವೃತ್ತಿಯಲ್ಲಿ ಅಂದರೇ, 48 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ವೆಸ್ಟ್ ಇಂಡೀಸ್ ತಂಡವಿಲ್ಲದೇ ವಿಶ್ವಕಪ್​ ಟೂರ್ನಿ ನಡೆಯಲಿದೆ. ವೆಸ್ಟ್ ಇಂಡೀಸ್ ಕ್ವಾಲಿಫೈಯರ್ ಪಂದ್ಯಗಳಲ್ಲಿ ಯುಎಸ್​ಎ ಮತ್ತು ನೇಪಾಳ ತಂಡಗಳ ವಿರುದ್ಧ ಜಯಗಳಿಸಿತ್ತು. ಆದರೆ ಆ ಬಳಿಕ ಜಿಂಬಾಬ್ವೆ ಮತ್ತು ನೆದರ್ಲ್ಯಾಂಡ್ಸ್ ವಿರುದ್ಧ ಸೋತು ಸಂಕಷ್ಟಕ್ಕೆ ಸಿಲುಕಿತ್ತು. ಇನ್ನು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಲವು ಕ್ರಿಕೆಟ್ ಅಭಿಮಾನಿಗಳು ವೆಸ್ಟ್ ಇಂಡೀಸ್ ಇಲ್ಲ ವಿಶ್ವಕಪ್​ ನೋಡೋದು ಹೇಗೆ ಅಂತ ಟ್ವೀಟ್ ಮಾಡಿ ಬೇಸರ ಹೊರ ಹಾಕಿದ್ದಾರೆ. 2018 ರಲ್ಲಿ ಸ್ಕಾಟ್ಲೆಂಡ್ ವೆಸ್ಟ್​​ ಇಂಡೀಸ್ ವಿರುದ್ಧ ಸೋತು 2019ರ ವಿಶ್ವಕಪ್‌ ಆಡುವ ಅವಕಾಶವನ್ನು ಕಳೆದುಕೊಂಡಿತು. ಆದರೆ ಇಂದು ಅದೇ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಗೆದ್ದು ಬೀಗಿದೆ. ಸ್ಕಾಟ್ಲೆಂಡ್ ಆಟಗಾರರಿಗೆ ಶುಭ ಕೋರುತ್ತೇನೆ ಅಂತ ಮತ್ತೋರ್ವ ಅಭಿಮಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

The post  48 ವರ್ಷಗಳಲ್ಲಿ ಇದೇ ಮೊದಲು! ವಿಶ್ವಕಪ್​​​ನಿಂದ ಹೊರಬಿದ್ದ ವೆಸ್ಟ್​ ಇಂಡೀಸ್​​ appeared first on ಕರುನಾಡ ನ್ಯೂಸ್.

Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ