ಸುಳ್ಯದಲ್ಲಿ ಕಾರ್ಮೋಡದ ನಡುವೆಯೂ ಸಂಭ್ರಮಿಸಿದ ಬಕ್ರೀದ್ ಹಬ್ಬ
ಪವಿತ್ರಹಜ್ ಕರ್ಮದ ಹಿನ್ನಲೆಯಲ್ಲಿ ಪ್ರವಾದಿ ಇಬ್ರಾಹಿಂ (ಸ. ಅ.) ರವರು ದೈವಾಜ್ಞೆ ಯಂತೆ ತನ್ನ ವಾತ್ಸಲ್ಯ ದ ಏಕೈಕ ಪುತ್ರ ನನ್ನು ಬಲಿಯರ್ಪಿಸಲು ಮುಂದಾದಾಗ ಅಲ್ಲಾಹುವಿನ ಪರೀಕ್ಷೆ ಯನ್ನು ಜಯಿಸಿ ದೇವರ ಸಂಪ್ರೀತಿಗೆ ಪಾತ್ರರಾಗಿ ವಿಶ್ವ ಮಾನ್ಯರೆನಿಸಿದ ದಿನವನ್ನು ಬಕ್ರೀದ್ ಹಬ್ಬವನ್ನಾಗಿ ಮುಸ್ಲಿಮರು ಆಚರಿಸುತ್ತಿದ್ದಾರೆ
ಸಮರ್ಪಣೆ, ತ್ಯಾಗ, ಸಹನೆ ಶಾಂತಿಯ ದ್ಯೋತಕವಾದ
ಬಕ್ರೀದ್ ಹಬ್ಬ ವನ್ನು ಸುಳ್ಯ ತಾಲೂಕಿನಾದ್ಯoತ ಸಂಭ್ರಮೋಲ್ಲಾಸದಿಂದ ಆಚರಿಸಲಾಯಿತು
ಸುಳ್ಯಗಾಂಧಿನಗರ ಕೇಂದ್ರ ಜುಮಾ ಮಸೀದಿಯಲ್ಲಿ ಖತೀಬರಾದ ಅಲ್ ಹಾಜ್ ಅಶ್ರಫ್ ಖಾಮಿಲ್ ಸಖಾಫಿ
ಪ್ರಾರ್ಥನೆಗೆ ನೇತೃತ್ವ ನೀಡಿದರು
ಅಧ್ಯಕ್ಷ ಹಾಜಿ ಕೆ. ಎಂ. ಮುಸ್ತಫಾ, ಪದಾಧಿಕಾರಿಗಳಾದ ಹಾಜಿ ಮಹಮ್ಮದ್ ಕೆಎಂಸ್, ಕೆ. ಬಿ. ಅಬ್ದುಲ್ ಮಜೀದ್, ಮುಹಿಯದ್ದೀನ್ ಫ್ಯಾನ್ಸಿ, ಹಮೀದ್ ಬೀಜಕೊಚ್ಚಿ, ಜಿ. ಎಂ. ಇಬ್ರಾಹಿಂ, ಎಸ್. ಎಂ. ಹಮೀದ್, ಹಾಜಿ ಎಸ. ಎ. ಹಮೀದ್, ಖಾದರ್ ಅಜಾದ್, ಇಸ್ಮಾಯಿಲ್ ಹಾಜಿ, ಅನ್ಸಾರಿಯಾ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಜನತಾ,ಕಾರ್ಯದರ್ಶಿ ಲತೀಫ್ ಹರ್ಲಡ್ಕ, ನಗರಪಂಚಾಯತ್ ಮಾಜಿ ಅಧ್ಯಕ್ಷ ಸಂಶುದ್ದೀನ್, ಸದಸ್ಯರುಗಳಾದ ಕೆ. ಎಸ್. ಉಮ್ಮರ್, ಶರೀಫ್ ಕಂಠಿ, ರಿಯಾಜ್ ಕಟ್ಟೆಕ್ಕಾರ್ಸ್,ಅನ್ಸಾರಿಯ ಸೆಂಟರ್ ನಿರ್ದೇಶಕ ಕೆ. ಬಿ. ಇಬ್ರಾಹಿಂ ಮೊದಲಾವರು ಉಪಸ್ಥಿತರಿದ್ದರು ನಂತರ ರೋಗಿಗಳ, ವಯೋವೃದ್ದರ ಸಂದರ್ಶನ, ಪರಸ್ಪರ ಆಲಿಂಗನ, ಮನೆ, ಮನೆ ಭೇಟಿ ನಡೆಯಿತು
