ಬಿಜೆಪಿ ಮುಖಂಡ ಪ್ರವೀಣ್ ಕೊಲೆ ಪ್ರಕರಣ; ಆರೋಪಿಗಳಿಗೆ ಶರಣಾಗಲು ಜೂನ್ 30 ಡೆಡ್ ಲೈನ್, ತಪ್ಪಿದ್ದಲ್ಲಿ ಆರೋಪಿಗಳ ಮನೆ ಜಪ್ತಿ- ಸುಳ್ಯ ಪೇಟೆಯಲ್ಲಿ ಅನೌನ್ಸ್

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಐ.ಎ ಮತ್ತೊಂದು‌ ಪ್ರಯೋಗ ನಡೆಸಿದೆ. ಕೊಲೆ ಆರೋಪಿಗಳು ಇದೇ ಬರುವ ಜೂ. 30 ರೊಳಗೆ ಶರಣಾಗದೇ ಇದ್ದಲ್ಲಿ, ಆರೋಪಿಗಳ ಮನೆಯನ್ನು ಜಪ್ತಿ ಮಾಡಲಾಗುವುದೆಂದು ಸುಳ್ಯ ನಗರದ ಪ್ರಮುಖ ಬೀದಿಗಳಲ್ಲಿ ಧ್ವನಿವರ್ಧಕದ ಮೂಲಕ ಅನೌನ್ಸಿಂಗ್ ನಡೆಸಿದೆ. ಅದೇ ರೀತಿ ಆರೋಪಿಗಳ ಸುಳಿವು, ಯಾರಾದರೂ ನೀಡಿದ್ದಲ್ಲಿ, ನಗದು ಬಹುಮಾನವನ್ನು ನೀಡಲಾಗುವುದು ಎಂದು ಸಾರ್ವಜನಿಕರಲ್ಲಿ ವಿನಂತಿಸಲಾಗುತ್ತಿದೆ.


ಸುಳ್ಯದ ಕಲ್ಲು ಮುಟ್ಲುವಿನಲ್ಲಿ ವಾಸವಿರುವ ಆರೋಪಿ ಉಮ್ಮರ್ ಫಾರೂಕ್ ಅವರ ಮನೆಗೂ ಹೋಗಿ
ನ್ಯಾಯಾಲಯದ ಆದೇಶ ಪ್ರತಿಯನ್ನು ಅಂಟಿಸಿ ಬಂದಿದ್ದಾರೆ. ನಿನ್ನೆ ಬೆಳ್ಳಾರೆಯಲ್ಲಿಯು‌ ಕೂಡಾ ಧ್ವನಿವರ್ಧಕದ
ಮೂಲಕ ಎನ್‌ಐಎ ನ್ಯಾಯಾಲಯದ ಆದೇಶವನ್ನು ಉದ್ಘೋಷಣೆ ಮಾಡಿ ಆರೋಪಿ ಮುಸ್ತವರವರ
ಮನೆಗೂ ಹೋಗಿ ಆದೇಶ ಪ್ರತಿಯನ್ನು ಅಂಟಿಸಿ ಬಂದಿದ್ದಾರೆಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ