ಬಿಜೆಪಿ ಹಗರಣದ ದುಡ್ಡಲ್ಲೇ ನಾನು ತೀರ್ಥಹಳ್ಳಿಯಲ್ಲಿ ಸೋತಿದ್ದೇನೆ: ಕಿಮ್ಮನೆ ರತ್ನಾಕರ್

ಶಿವಮೊಗ್ಗ: ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ(Congress Party) ಕೊಟ್ಟ 5 ಗ್ಯಾರಂಟಿ ಭರವಸೆಗಳನ್ನು ಹಂತ ಹಂತವಾಗಿ ಅನುಷ್ಟಾನ ಮಾಡುತ್ತಿದೆ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ್(Kimmane Rathnakar) ಹೇಳಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ‘ಗ್ಯಾರಂಟಿಗಳ ಬಗ್ಗೆ ಬಿಜೆಪಿಯವರು ಸಾಕಷ್ಟು ಟೀಕೆ ಮಾಡುತ್ತಿದ್ದಾರೆ. ಇವರ ತಲೆಯೊಳಗೆ ಏನು ಸಗಣಿ ಇದೆಯಾ? ನನಗೆ ಅರ್ಥ ಅಗುತ್ತಿಲ್ಲ. ಈ ಕುರಿತು ಸಾಮಾನ್ಯ ಕಾರ್ಯಕರ್ತ ಹೇಳಿದ್ದರೇ ತಲೆ ಕೆಡಿಸಿಕೊಳ್ಳಲ್ಲ. ಸಂಸತ್ ಸದಸ್ಯರು, ಸಚಿವರು, ರಾಜ್ಯವನ್ನು ಆಳಿದವರು ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಬಿಜೆಪಿ ಟೀಕೆಗಳಿಗೆ ಕಿಡಿಕಾರಿದ್ದಾರೆ. ಬಿಜೆಪಿಯವರು ಗಾಂಧಿ ಪ್ರತಿಮೆ ಎದುರು ಜುಲೈ 3ರಂದು ಪ್ರತಿಭಟನೆ ವಿಚಾರ ಕುರಿತು ‘ಯಡಿಯೂರಪ್ಪನವರ ಬಗ್ಗೆ ಗೌರವ ಇದೆ. ಅವರಿಗೆ ಪ್ರಶ್ನೆ ಮಾಡುತ್ತೆನೆ. ನೀವು ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ಸಾಲ ಮನ್ನಾ ಮಾಡುತ್ತೇವೆ ಎಂದಿದ್ದರು, ಮಾಡಿದ್ರಾ?. 605 ಅಂಶಗಳ ಪ್ರಣಾಳಿಕೆ ನೀಡಿದ್ರು, ಅದರಲ್ಲಿ 50 ಅಂಶನಾದ್ರೂ ಅನುಷ್ಟಾನ ಮಾಡಿದ್ರಾ‌‌?, ಬಿಜೆಪಿ 2 ಕೋಟಿ ಉದ್ಯೋಗ ಕೋಡ್ತೇವೆ ಎಂದು ಹೇಳಿದ್ರು, ಕೇಂದ್ರದ ಬಿಜೆಪಿ 9 ವರ್ಷಕ್ಕೆ 18 ಕೋಟಿ ಉದ್ಯೋಗವನ್ನು ಕೊಡ್ತೇವೆ ಎಂದವರು ಕೊಟ್ರಾ?, ಇದಕ್ಕೆಲ್ಲ ಯಡಿಯೂರಪ್ಪ, ಈಶ್ವರಪ್ಪ, ಪ್ರತಾಪ್ ಸಿಂಹ ಉತ್ತರ ಕೋಡ್ತಾರಾ? ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಯವರಿಗೆ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಮಾತನಾಡುವ ನೈತಿಕತೆ, ಅರ್ಹತೆ ಇಲ್ಲ

ಕಾಂಗ್ರೆಸ್​ ಗ್ಯಾರೆಂಟಿ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗರಿಗಿಲ್ಲ, ಇವೆಲ್ಲವನ್ನೂ ಒಂದೇ ಸರಿ ಮಾಡುವುದು ಅಷ್ಟು ಸುಲಭ ಅಲ್ಲ. ಬಸ್ ವ್ಯವಸ್ಥೆ ಕೊಟ್ಟಷ್ಟು ಉಳಿದ ಗ್ಯಾರಂಟಿ ಅಲ್ಲ, ಕೆಲವೊಂದು ವ್ಯವಸ್ಥೆ ಅಗಬೇಕು. ಒಂದೆರಡು ದಿನದಲ್ಲಿ ಮನೆಯ ಸಮಸ್ಯೆಯೇ ಬಗೆಹರಿಯಲ್ಲ. ಜನವರಿಯವರೆಗೆ ಬಿಜೆಪಿಯವರು ಗ್ಯಾರಂಟಿ ಬಗ್ಗೆ ಮಾತನಾಡಬಾರದೆಂದು ಹೇಳಿದ ಅವರು, ಜುಲೈ 3 ರಂದು ನಾನು ಕೂಡ ಶಿವಮೊಗ್ಗದ ಗಾಂಧಿ ಪಾರ್ಕ್​ನ ಗಾಂಧಿ ಪ್ರತಿಮೆ ಎದುರು ಉಪವಾಸ ಹೋರಾಟ ಮಾಡ್ತೇನೆ. ಕೇಂದ್ರ ಸರ್ಕಾರ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ಅವರು 15 ಲಕ್ಷ ಕೊಟ್ಟರೇ ನಾವೆಲ್ಲರೂ ರಾಜ್ಯ ಸರ್ಕಾರಕ್ಕೆ ಜಮಾ ಮಾಡ್ತೇವೆ. ಕಾಂಗ್ರೆಸ್​ನ ಎಲ್ಲರೂ ಕೂಡ ಉಚಿತ ಗ್ಯಾರಂಟಿ ಕೊಡಲಿಕ್ಕೆ ರಾಜ್ಯಕ್ಕೆ ಕೊಡ್ತೇವೆ ಎಂದರು.

ಕಾಂಗ್ರೆಸ್ ಸರ್ಕಾರ ಹಗರಣ ತನಿಖೆ ಮಾಡಲಿ ಎಂಬ ಆರಗ ಹೇಳಿಕೆ ವಿಚಾರ ‘ನಾನು ಕೂಡ ಹಗರಣಗಳ ತನಿಖೆಗೆ ಒತ್ತಾಯ ಮಾಡಿದ್ದೇನೆ. ಪಿಎಸ್ಐ ಹಗರಣವನ್ನು ತನಿಖೆ ಮಾಡಲು ಒತ್ತಾಯಿಸುತ್ತೇನೆ. ಆ ಹಗರಣದ ದುಡ್ಡಲ್ಲೇ ನಾನು ತೀರ್ಥಹಳ್ಳಿಯಲ್ಲಿ ಸೋತಿದ್ದೇನೆ. ಆರತಿ ಮಾಡಿದ್ರಲ್ಲ ಆ ದಿವ್ಯಾ ಹಾಗರಗಿ, ಸ್ಯಾಂಟ್ರೋ ರವಿ, ಆರ್ ಜೆ. ಪಾಟೀಲ್ ಹಣದಿಂದಲೇ ಸೋತಿದ್ದೇನೆ. ತೀರ್ಥಹಳ್ಳಿಯಲ್ಲಿ 70 ಕೋಟಿ ಖರ್ಚು ಮಾಡಿದ್ದಾರೆ. ಈ ಹಿಂದೆ ನಂದಿತಾ ಪ್ರಕರಣ ಹೇಳಿದ್ರಲ್ಲ ಇವರದ್ದೇ ಸರ್ಕಾರ ಇತ್ತಲ್ಲ ಏನು ಮಾಡಿದ್ರು. ಸಿಬಿಐ ತನಿಖೆ ಮಾಡಿದ್ರೆ, ಇವರೇ ಒಳಗೆ ಹೋಗ್ತಾರೆ. ಇನ್ನು ಇದೇ ವೇಳೆ ಅಕ್ಕಿ ವಿಚಾರ ‘ಒಕ್ಕೂಟ ವ್ಯವಸ್ಥೆಯಲ್ಲಿ ಇವೆಲ್ಲ ದೇಶದ ಏಕತೆಗೆ ಧಕ್ಕೆ ಉಂಟು ಮಾಡುತ್ತವೆ. ಪ್ರತ್ಯೇಕ ಕೇಳಿದ್ರೇ, ದೇಶದ ಏಕತೆ ಸ್ಥಿತಿ ಏನಾಗುತ್ತದೆ ಎಂದು ಯೋಚನೆ ಮಾಡಲಿ ಎಂದ ಕಿಮ್ಮನೆ ರತ್ನಾಕರ್ ಹೇಳಿದರು.

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ