ವಾಷಿಂಗ್ಟನ್: 16 ಬಾರಿ WWE ವಿಶ್ವ ಚಾಂಪಿಯನ್ ಆಗಿ ವಿಶ್ವದೆಲ್ಲೆಡೆ ಜನಪ್ರಿಯತೆ ಗಳಿಸಿರುವ ಜಾನ್ ಸೀನಾ (John Cena) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಫೋಟೋವನ್ನ ಹಂಚಿಕೊಂಡಿದ್ದಾರೆ. ಅಧ್ಯಕ್ಷ ಜೋ ಬೈಡನ್ (Joe Biden) ಅವರ ಆಹ್ವಾನದ ಮೇರೆಗೆ ಅಮೆರಿಕ ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮೋದಿ, ಜೋ ಬೈಡನ್ ಹಾಗೂ ಜಿಲ್ ಬೈಡನ್ ಅವರೊಂದಿಗೆ ಮಾತನಾಡುತ್ತಿದ್ದ ವೇಳೆ ಜಾನ್ ಸೀನಾ ಸ್ಟೈಲ್‌ನಲ್ಲಿ ಆಕ್ಷನ್ ಮಾಡಿರುವುದು ಕಂಡುಬಂದಿದೆ. ಮೋದಿಯ ಈ ಫೋಟೋವನ್ನ ಜಾನ್ಸಿನ ಸ್ವತಃ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ಫೋಟೋ ಭಾರೀ ಸದ್ದು ಮಾಡುತ್ತಿದ್ದು, 4 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.
