ITR 1 ಬಳಸಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದು ಹೇಗೆ? ಇಲ್ಲಿದೆ ನೋಡಿ ಕಂಪ್ಲೀಟ್​ ಡೀಟೇಲ್ಸ್​ – ಕರುನಾಡ ನ್ಯೂಸ್


ಈಗಂತೂ ಅನೇಕರು ಉದ್ಯೋಗಿಗಳು ತಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಲು ಸಮಯ ಬಂದಾಗಿದೆ. ಬಹುತೇಕ ಉದ್ಯೋಗಿಗಳಿಗೆ ತಮ್ಮ ಆದಾಯ ತೆರಿಗೆಯ ರಿಟರ್ನ್ ಅನ್ನು ಹೇಗೆ ಸಲ್ಲಿಸುವುದು ಅಂತ ಆನ್ಲೈನ್ (Online) ಟುಟೋರಿಯಲ್ಸ್ ಗಳನ್ನು ನೋಡುತ್ತಿದ್ದಾರೆ ಅಂತ ಹೇಳಬಹುದು. ಎಷ್ಟೋ ಜನರಿಗೆ ಇದು ಬೇಗನೆ ಅರ್ಥವಾಗುವುದಿಲ್ಲ, ಅಂತಹವರಿಗೆ ಈ ಲೇಖನ ತುಂಬಾನೇ ಉಪಯುಕ್ತವಾಗುತ್ತದೆ. ಆದಾಯ ತೆರಿಗೆ ರಿಟರ್ನ್  (Income Tax Return) ಸಲ್ಲಿಸುವಾಗ, ವ್ಯಕ್ತಿಯು ಹಲವಾರು ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ನಿಮ್ಮ ಆದಾಯ ತೆರಿಗೆ ರಿಟರ್ನ್ (Return) ಸಲ್ಲಿಸುವಾಗ ಅನೇಕ ಫಾರ್ಮ್ ಗಳನ್ನು ತುಂಬಬೇಕಾಗುತ್ತದೆ.


ನೀವು ಯಾವ ಫಾರ್ಮ್ ಅನ್ನು ಆಯ್ಕೆ ಮಾಡಬೇಕು itrಎಂಬುದಕ್ಕೆ ಇದು ಸಂಬಂಧಿಸಿದೆ. ನೀವು ತಪ್ಪು ನಮೂನೆಯನ್ನು ಆರಿಸಿದರೆ, ನಿಮ್ಮ ಫೈಲಿಂಗ್ ತಿರಸ್ಕೃತವಾಗಬಹುದು. ಆದ್ದರಿಂದ, ನಿಮ್ಮ ಆದಾಯ ತೆರಿಗೆಯನ್ನು ಸಲ್ಲಿಸುವಾಗ ಸರಿಯಾದ ಫಾರ್ಮ್ ಅನ್ನು ಆಯ್ಕೆ ಮಾಡುವುದು ಬಹಳ ಮುಖ್ಯ.

ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ‘ಸಹಜ್’ (ಐಟಿಆರ್-1) ಫಾರ್ಮ್ ಬಳಸಿ


ಇಂದು, ತಮ್ಮ ಆದಾಯ ತೆರಿಗೆಯನ್ನು ಸಲ್ಲಿಸಲು ಯಾರು ಐಟಿಆರ್-1 ಫಾರ್ಮ್ ಅನ್ನು ಬಳಸಬೇಕು ಎಂಬುದರ ಬಗ್ಗೆ ನಾವು ಇಲ್ಲಿ ತಿಳಿಯೋಣ ಬನ್ನಿ.


ಸಹಜ್ ಎಂದೂ ಕರೆಯಲ್ಪಡುವ ಐಟಿಆರ್-1 ಫಾರ್ಮ್, ಸಂಬಳ ಪಡೆಯುವ ವ್ಯಕ್ತಿಗಳಿಗೆ ತಮ್ಮ ಐಟಿಆರ್ ಅನ್ನು ಅನುಕೂಲಕರವಾಗಿ ಸಲ್ಲಿಸಲು ಅನುವು ಮಾಡಿಕೊಡುತ್ತದೆ. ಏಕೆಂದರೆ ಇತರ ಫಾರ್ಮ್ ಗಳಿಗೆ ಹೋಲಿಸಿದರೆ ನೀವು ಐಟಿಆರ್ 1 ನಲ್ಲಿ ಹೆಚ್ಚಿನ ಮಾಹಿತಿಯನ್ನು ಒದಗಿಸಬೇಕಾಗಿಲ್ಲ.


ಆದಾಗ್ಯೂ, ಎಲ್ಲಾ ಸಂಬಳ ಪಡೆಯುವ ವ್ಯಕ್ತಿಗಳು ಐಟಿಆರ್-1 ಫಾರ್ಮ್ ಅನ್ನು ಸಲ್ಲಿಸಲು ಸಾಧ್ಯವಿಲ್ಲ. 2022-23ರ ಹಣಕಾಸು ವರ್ಷದಲ್ಲಿ ಕೆಲವು ವಹಿವಾಟುಗಳನ್ನು ನಡೆಸಿದ್ದರೆ, ಅಂತಹ ವ್ಯಕ್ತಿಗಳು ಐಟಿಆರ್-1 ಅನ್ನು ಬಳಸಲು ಅನರ್ಹರಾಗಬಹುದು.

ಐಟಿಆರ್-1 ಫಾರ್ಮ್ ಸಲ್ಲಿಸಲು ಯಾರು ಅರ್ಹರು?

ಐಟಿಆರ್-1 ಫಾರ್ಮ್ ಅನ್ನು ಸಲ್ಲಿಸಲು, ಅವರು 50 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯವನ್ನು ಹೊಂದಿರಬೇಕು ಮತ್ತು ಸಂಬಳ, ಪಿಂಚಣಿ ಅಥವಾ ಕುಟುಂಬ ಪಿಂಚಣಿಯಿಂದ ಆದಾಯವನ್ನು ಹೊಂದಿರಬೇಕು, ಒಂದು ಮನೆಯ ಆಸ್ತಿಯಿಂದ ಆದಾಯವನ್ನು ಹೊಂದಿರಬೇಕು, 5,000 ರೂಪಾಯಿವರೆಗೂ ಕೃಷಿ ಆದಾಯವನ್ನು ಹೊಂದಿರಬೇಕು ಮತ್ತು ಬ್ಯಾಂಕ್, ಅಂಚೆ ಕಚೇರಿ, ಲಾಭಾಂಶ ಮತ್ತು ಇತರ ಮೂಲಗಳಿಂದ ಬರುವ ಆದಾಯವನ್ನು ಹೊಂದಿರಬೇಕು.

ಉದ್ಯಮದ ತಜ್ಞರ ಪ್ರಕಾರ, ಸಾಲದ ಮೇಲೆ ಖರೀದಿಸಿದ ಏಕೈಕ ಸ್ವಯಂ ಮಾಡಿಕೊಂಡ ಮನೆ ಆಸ್ತಿಯನ್ನು ಹೊಂದಿರುವ ವ್ಯಕ್ತಿಯು ಐಟಿಆರ್-1 ಅನ್ನು ಸಲ್ಲಿಸಬಹುದು, ಆದರೆ ಇತರ ಆದಾಯಗಳಿಂದ ಗರಿಷ್ಠ ಸೆಟ್-ಆಫ್ ಮೊತ್ತವು 2 ಲಕ್ಷ ರೂಪಾಯಿಗಳಾಗಿರುತ್ತದೆ.


ಉದ್ಯೋಗಿಯು ಬಂಡವಾಳ ಲಾಭಗಳು ಮತ್ತು ಊಹಾತ್ಮಕ ಲಾಭಗಳಿಂದ ಆದಾಯವನ್ನು ಹೊಂದಿದ್ದರೆ, ಒಂದಕ್ಕಿಂತ ಹೆಚ್ಚು ಮನೆ ಆಸ್ತಿಯಿಂದ ಆದಾಯವನ್ನು ಹೊಂದಿದ್ದರೆ, ನಿವಾಸಿಯಲ್ಲದ ಸಾಮಾನ್ಯ ನಿವಾಸಿ (ಆರ್‌ಎನ್ಒಆರ್) ಅಥವಾ ಅನಿವಾಸಿ ಭಾರತೀಯ (ಎನ್ಆರ್‌ಐ) ಅಥವಾ ತೆರಿಗೆದಾರನು ಪಟ್ಟಿ ಮಾಡದ ಈಕ್ವಿಟಿ ಷೇರುಗಳಲ್ಲಿ ಹೂಡಿಕೆ ಮಾಡಿದ್ದರೆ ಅಥವಾ ಕಂಪನಿಯಲ್ಲಿ ನಿರ್ದೇಶಕ ಸ್ಥಾನವನ್ನು ಹೊಂದಿದ್ದರೆ ಅಥವಾ ಆದಾಯ ತೆರಿಗೆ ಕಾನೂನುಗಳ ಅಡಿಯಲ್ಲಿ ಅರ್ಹ ಸ್ಟಾರ್ಟ್ ಅಪ್ ಆಗಿರುವುದರಿಂದ ಉದ್ಯೋಗದಾತನ ಮೇಲೆ ಆದಾಯ ತೆರಿಗೆ ಹೊಣೆಗಾರಿಕೆಯನ್ನು ಹೊಂದಿದ್ದರೆ ಇದು ಅನ್ವಯವಾಗುತ್ತದೆ.

ಇದಲ್ಲದೆ, ಬ್ಯಾಂಕಿನಿಂದ ಹಣವನ್ನು ನೀವು ಹಿಂಪಡೆಯುವಾಗ ಸೆಕ್ಷನ್ 194 ಎನ್ ಅಡಿಯಲ್ಲಿ ಟಿಡಿಎಸ್ ವಿಧಿಸಿದರೆ, ಅವನು ಅಥವಾ ಅವಳು ಐಟಿಆರ್-1 ಫಾರ್ಮ್ ಅನ್ನು ಬಳಸಲು ಅನರ್ಹರಾಗುತ್ತಾರೆ.


ಹೀಗೆ ನೀವು ಐಟಿಆರ್-1 ಫಾರ್ಮ್ ಅನ್ನು ಸಲ್ಲಿಸಲು ಸಹಜ್ ನ ನೆರವು ಪಡೆಯಬಹುದು. ಒಟ್ಟಿನಲ್ಲಿ ಹೇಳುವುದಾದರೆ, ಈ ಆದಾಯ ತೆರಿಗೆ ರಿಟರ್ನ್ ಅನ್ನು ಸಮಯಕ್ಕೆ ಸರಿಯಾಗಿ ಫೈಲ್ ಮಾಡುವುದು ತುಂಬಾನೇ ಅವಶ್ಯಕವಾಗುತ್ತದೆ.





Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ