ಬಾಡಿಗೆದಾರರ ಕಿರುಕುಳಕ್ಕೆ ಮಹಿಳೆ ಆತ್ಮಹತ್ಯೆ; ಮಗಳ ಸಾವಿನ ಆಘಾತದಿಂದ ತಾಯಿಯೂ ಸಾವು! – ಕರುನಾಡ ನ್ಯೂಸ್


ಹಾಸನ: ಬಾಡಿಗೆದಾರರು ಮನೆ ಮಾಲೀಕರಿಗೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದ್ದು, ಬಾಡಿಗೆದಾರರ ಕಿರುಕುಳದಿಂದ ಬೇಸತ್ತು ಮನೆ ಮಾಲಕಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಹಾಸನ (Hassan) ಹೊರವಲಯದ ದಾಸರಕೊಪ್ಪಲಿನಲ್ಲಿ ನಡೆದಿದೆ. ಲಲಿತಾ ಆತ್ಮಹತ್ಯೆಗೆ ಶರಣಾದ ಮಹಿಳೆಯಾಗಿದ್ದು (Women), ಇತ್ತ ಮಗಳ ಸಾವಿನ ಸುದ್ದಿ ಕೇಳಿದ ಲಲಿತಾ ಅವರ ತಾಯಿಯೂ (Mother) ಸಾವನ್ನಪ್ಪಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಮನೆಯ ಒಡತಿ ಲಲಿತಾ (55) ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಸಾವನ್ನಪ್ಪಿದ್ದರು. ಮಗಳ ಸಾವಿನ ಸುದ್ದಿ ಕೇಳಿ ನಿನ್ನೆ ಅಘಾತದಿಂದ ತಾಯಿ ಲಕ್ಣ್ಮಮ್ಮ (75) ಸಾವನ್ನಪ್ಪಿದ್ದಾರೆ. ಹಾಸನ ದಾಸರಕೊಪ್ಪಲಿನಲ್ಲಿ ಲಲಿತಮ್ಮ ಹಾಗೂ ಪತಿ ನಾಗರಾಜ್ ಬಾಡಿಗೆ ಮನೆ ಹೊಂದಿದ್ದರು. ಲಲಿತಾ ಅವರು ತಮ್ಮ ಮನೆಯ ಮೇಲ್ಭಾಗದ ಮನೆಗಳನ್ನು ಬಾಡಿಗೆ ಮತ್ತು ಭೋಗ್ಯಕ್ಕೆ ನೀಡಿದ್ದರು. ಎರಡು ವರ್ಷದ ಹಿಂದೆ ಉದ್ದೂರು ಕೊಪ್ಪಲು ಗ್ರಾಮದ ಸುಧಾರಾಣಿ-ನಟರಾಜ ದಂಪತಿ ಐದು ಲಕ್ಷ ರೂಪಾಯಿಗೆ ಮೂರು ವರ್ಷದ ಅವಧಿಗೆ ಭೋಗ್ಯಕ್ಕೆ ಪಡೆದುಕೊಂಡಿದ್ದರು.





Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ