ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಕಾರು ಚಾಲಕರಾಗಿದ್ದ ಶತಾಯುಶಿ ಮೋನಪ್ಪ ಗೌಡ ಕೊರಂಬಡ್ಕ ನಿಧನ.!

ಮಾಜಿ ಪ್ರಧಾನಿ ದಿ. ಪಂಡಿತ್ ಜವಾಹರ್ ಲಾಲ್ ನೆಹರೂ ಅವರ ಕಾರು ಚಾಲಕರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ, ಶತಾಯುಶಿ ಕನಕಮಜಲು ಗ್ರಾಮದ ಮೋನಪ್ಪ ಗೌಡ ಕೊರಂಬಡ್ಕ (102 ವರ್ಷ ವಯಸ್ಸು) ಇವರು ಅ.5ರಂದು ಮುಂಜಾನೆ ಸ್ವಗೃಹದಲ್ಲಿ ವಯೋಸಹಜ ಅಸೌಖ್ಯದಿಂದಾಗಿ ನಿಧನರಾಗಿದ್ದಾರೆ.

ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿದ್ದ ಜವಾಹರ್ ಲಾಲ್ ನೆಹರೂ ಅವರೊಂದಿಗೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಗುರುತಿಸಿಕೊಂಡಿದ್ದರು, ನೆಹರೂ ಅವರ ಕಾರು ಚಾಲಕರಾಗಿ ಸೇವೆ ಸಲ್ಲಿಸಿದ್ದರು. ಕನಕಮಜಲು ಗ್ರಾಮದ ಹಿರಿಯರಾಗಿದ್ದ ಮೋನಪ್ಪ ಗೌಡರು ಪುತ್ರ ವೆಂಕಟ್ರಮಣ ಕೊರಂಬಡ್ಕ, ಪುತ್ರಿಯರಾದ ಕಮಲ,ವಿಮಲ, ಕುಸುಮ ಸೇರಿದಂತೆ ಅಪಾರ ಕುಟುಂಬಸ್ಥರನ್ನು ಅಗಲಿದ್ದಾರೆ.

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ