ಯುಕೆ ಇತ್ತೀಚೆಗೆ ಹೊಸ ಗರ್ಭಧಾರಣೆ ಪರೀಕ್ಷಾ ಕಿಟ್ನ್ನು (Pregnancy Kit) ಬಿಡುಗಡೆ ಮಾಡಿದೆ. ಇದು ಮಹಿಳೆಯ ಲಾಲಾರಸ (ಸಲೈವಾ) ಮಾತ್ರ ಉಪಯೋಗಿಸಿಕೊಂಡು ಗರ್ಭಧಾರಣೆಯನ್ನು ಖಚಿತ ಪಡಿಸುತ್ತದೆ ಎಂದು ವರದಿಗಳ ಮೂಲಕ ತಿಳಿದು ಬಂದಿದೆ. ಜೆರುಸಲೇಂ ಮೂಲದ ಸ್ಟಾರ್ಟ್ ಅಪ್ ಸ್ಯಾಲಿಗ್ನೋಸ್ಟಿಕ್ಸ್ ಅಭಿವೃದ್ಧಿ ಪಡಿಸಿದ ಈ ಕ್ರಾಂತಿಕಾರಿ ಉತ್ಪನ್ನವು ಕೇವಲ ‘ಲಾಲಾರಸ (ಉಗುಳು) ಪರೀಕ್ಷೆ’ಯೊಂದಿಗೆ ಗರ್ಭಧಾರಣೆಯನ್ನು ಪತ್ತೆ ಹಚ್ಚುವ ಮೊದಲ ಉತ್ಪನ್ನವಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಪರೀಕ್ಷಾ ಕಿಟ್ ದೇಶದ ಔಷಧ ಉದ್ಯಮಕ್ಕೆ ಹೊಡೆತ ನೀಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ದಿ ಸನ್ ವರದಿಯ ಪ್ರಕಾರ, ಗರ್ಭಧಾರಣೆಯನ್ನು ಕಂಡು ಹಿಡಿಯುವಲ್ಲಿ ಈ ಪರೀಕ್ಷಾ ಕಿಟ್ ಶೇಕಡಾ 97 ರಷ್ಟು ನಿಖರವಾಗಿದೆ. ತಂತ್ರಜ್ಞಾನವು ವರ್ಧಿತ ಬಳಕೆದಾರ ಅನುಭವವಾಗಿದೆ ಮತ್ತು ಎಲ್ಲಿಯಾದರೂ, ಯಾವುದೇ ಸಮಯದಲ್ಲಿ ಪರೀಕ್ಷಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿ ತಮ್ಮ ಹೇಳಿಕೆಯಲ್ಲಿ ತಿಳಿಸಿದೆ. ಜೊತೆಗೆ ಹೆಚ್ಚು ಸಮಯವನ್ನು ತೆಗೆದುಕೊಳ್ಳದೇ, ಪರೀಕ್ಷೆಯ ಫಲಿತಾಂಶಗಳು 15 ನಿಮಿಷಗಳಲ್ಲಿ ನೀಡುತ್ತವೆ ಎಂದು ಕಂಪೆನಿಗೆ ಸಂಬಂಧಪಟ್ಟವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಈ ಮೊದಲು ಬಳಸುತ್ತಿರುವ ಸಾಂಪ್ರದಾಯಿಕ ಮೂತ್ರ ಪರೀಕ್ಷೆಗಳಲ್ಲಿ ಫಲಿತಾಂಶಗಳನ್ನು ಮೂರು ನಿಮಿಷಗಳಲ್ಲಿ ದೃಢೀಕರಿಸಬಹುದಾಗಿದೆ ಎಂದು ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮನೆಯಲ್ಲಿಯೇ ಮಾಡಲಾಗುತ್ತಿದ್ದ ಕೋವಿಡ್ ಪರೀಕ್ಷಾ ಕಿಟ್ಗಳಿಂದ ಈ ಐಡಿಯಾ ಸ್ಫೂರ್ತಿ ಪಡೆದಿದೆ ಎಂದು ಕಂಪನಿಯು ಹೇಳಿಕೊಂಡಿದ್ದು. ಮೆಟ್ರೋದಲ್ಲಿನ ವರದಿ ಹೇಳುವ ಪ್ರಕಾರ, ನಾವು ಥರ್ಮಾಮೀಟರ್ ಅನ್ನು ಬಳಸುವಂತೆಯೇ, ಬಳಕೆದಾರರು ಕೆಲವು ಕ್ಷಣಗಳ ಕಾಲ ಈ ಕಿಟ್ ಬಾಯಿಯಲ್ಲಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದೆ. ಬಳಿಕ ಇದು ಗ್ರಾಹಕರ ಲಾಲಾರಸವನ್ನು ಸಂಗ್ರಹಿಸಲು ಕಿಟ್ ಗೆ ಸಹಾಯ ಮಾಡುತ್ತದೆ. ನಂತರ ಪರೀಕ್ಷಾ ಕಿಟ್ ಜೈವಿಕ ರಾಸಾಯನಿಕ ಕ್ರಿಯೆ ನಡೆಯುವ ಪ್ಲಾಸ್ಟಿಕ್ ಟ್ಯೂಬ್ ನಲ್ಲಿ ಇಟ್ಟ ಬಳಿಕ ಈ ಪರೀಕ್ಷೆಯು ಗರ್ಭಧಾರಣೆಗೆ ಅಗತ್ಯವಾಗಿರುವ ನಿರ್ದಿಷ್ಟವಾದ ಹಾರ್ಮೋನ್ ಅನ್ನು ಕಂಡುಹಿಡಿಯುತ್ತದೆ. ಲಾಲಾರಸದಲ್ಲಿರುವ ಭ್ರೂಣದ ಬೆಳವಣಿಗೆಯು ಗರ್ಭಾಶಯವನ್ನು ಸಿದ್ಧಪಡಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ಮಾಹಿತಿಯನ್ನು ಈ ಕಿಟ್ನ ಹಿಂಬದಿಯಲ್ಲಿ ನೀಡಲಾಗುತ್ತದೆ ಎಂದು ವರದಿ ತಿಳಿಸಿದೆ.
ಪರೀಕ್ಷಾ ಕಿಟ್ ಇನ್ನೂ ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಯುಎಸ್ ಎಫ್ಡಿಎ) ಮಾರುಕಟ್ಟೆ ಅನುಮೋದನೆಯನ್ನು ಪಡೆಯದಿದ್ದರೂ, ಕಳೆದ ವರ್ಷ ಯುರೋಪಿಯನ್ ಒಕ್ಕೂಟದಲ್ಲಿ ಮಾರಾಟ ಮಾಡಲು ಪ್ರಮಾಣೀಕರಣವನ್ನು ಪಡೆದಿದೆ ಎಂದು ಹಳೆಯ ಟೈಮ್ಸ್ ಆಫ್ ಇಸ್ರೇಲ್ ವರದಿ ತಿಳಿಸಿದೆ.