ಬೆಳಗಾವಿ: ಬಹು ನಿರೀಕ್ಷಿತ 10 ಕೆಜಿ ಅಕ್ಕಿ ಉಚಿತವಾಗಿ ನೀಡುವ ಅನ್ನಭಾಗ್ಯ ಯೋಜನೆಗೆ (Annabhagya scheme) ಭಾರೀ ಹಿನ್ನಡೆ ಉಂಟಾಗಿದೆ. ಕೇಂದ್ರ ಸರ್ಕಾರ (central government) ಅಕ್ಕಿ ಕೊಡುತ್ತಿಲ್ಲ ಅಂತ ರಾಜ್ಯ ಸರ್ಕಾರ (state government) ಆರೋಪಿಸಿದ್ರೆ, ಅಕ್ಕಿ ಕೊರತೆ (shortage of rice) ಇದೆ ಅಂತ ಕೇಂದ್ರ ಸರ್ಕಾರ ಹೇಳುತ್ತಿದೆ. ಈ ನಡುವೆ ಕಾಂಗ್ರೆಸ್ (Congress) ಹಾಗೂ ಬಿಜೆಪಿ ನಾಯಕರು (BJP Leaders) ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಪರಸ್ಪರ ಪ್ರತಿಭಟನೆ ನಡೆಸಿದ್ದಾರೆ. ಇದೀಗ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೊಸದೊಂದು ಬಾಂಬ್ ಸಿಡಿಸಿದ್ದಾರೆ. ಬೆಳಗಾವಿಯಲ್ಲಿ (Belagavi) ಮಾತನಾಡಿದ ಅವರು, ರಾಜ್ಯ ಸರ್ಕಾರದ ಸರ್ವರ್ ಅನ್ನು ಕೇಂದ್ರ ಸರ್ಕಾರ ಹ್ಯಾಕ್ (server hack) ಮಾಡಿದೆ. ಅದೇ ಕಾರಣಕ್ಕೆ ರಾಜ್ಯಾದ್ಯಂತ ಉಚಿತ ಯೋಜನೆಗಳ ಅರ್ಜಿ ಹಾಕುವಾಗ ಸರ್ವರ್ ಸಮಸ್ಯೆ ಉಂಟಾಗುತ್ತಿದೆ ಎಂದಿದ್ದಾರೆ. ಆನ್ ಲೈನ್ ನಲ್ಲಿ ಸಮಸ್ಯೆ ಆದ್ರೆ ಕೈಯಿಂದ ಅರ್ಜಿ ಸ್ವೀಕಾರ ಮಾಡುತ್ತೇವೆ ಅಂತ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಒಂದು ತಿಂಗಳು ತಡ ಆಗಬಹುದು ಅದಕ್ಕಿಂತ ಹೆಚ್ಚು ಆಗಲ್ಲಾ ಅಂತ ಹೇಳಿದ್ದಾರೆ. ಪ್ಲ್ಯಾನ್ ಮಾಡದೇ ಯೋಜನಗಳನ್ನ ಜಾರಿಗೆ ತರ್ತಿದ್ದಾರೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪ್ಲ್ಯಾನ್ ಮಾಡಿದ್ದೇವೆ, ನಮ್ಮ ಮಷಿನ್ ಹ್ಯಾಕ್ ಮಾಡಿ ಕೇಂದ್ರದವರು ಸ್ಟಾಪ್ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ. ಇವಿಎಂ ರೀತಿಯಲ್ಲಿ ಹ್ಯಾಕ್ ಮಾಡಲಾಗಿದೆ. ಹೆಬ್ಬಾಳ್ಕರ್ ಮೇಡಂ ಡಿಪಾರ್ಟ್‌ಮೆಂಟ್ ಕೂಡ ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ. ಹಾಗಾಗಿ ತಡವಾಗುತ್ತಿದೆ ಅಂತ ಸತೀಶ್ ಜಾರಕಿಹೊಳಿ ಬಾಂಬ್ ಸಿಡಿಸಿದ್ದಾರೆ.