ಐವರ್ನಾಡು ವಿದ್ಯುತ್ ಪ್ರವಹಿಸಿ ಬಾಲಕ ನ ದುರ್ಮರಣ ಮೆಸ್ಕಾಂ ನಿಂದ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಯವರಿಗೆ ಕೆ. ಎಂ ಮುಸ್ತಫ ಮನವಿ – ಕರುನಾಡ ನ್ಯೂಸ್


ಸುಳ್ಯ: ಕಳೆದ ವರ್ಷ ಜೂನ್ ತಿಂಗಳಲ್ಲಿ ಭಾರೀ ಮಳೆಯಲ್ಲಿ ಪ್ರಾಕ್ರತಿಕ ವಿಕೋಪದಿಂದ ವಿದ್ಯುತ್ ಲೈನ್ ಗೆ ಮರದ ಕೊಂಬೆ ಬಿದ್ದು ವಿದ್ಯುತ್ ಪ್ರವಹಿಸಿ ಐವರ್ನಾಡು ಸುತ್ತ ಮುತ್ತಲಿನ ಮನೆಗಳ ವಿದ್ಯುತ್ ಉಪಕರಣಗಳು ನಾಶ ಹೊಂದಿದ್ದು ಆ ಸಂದರ್ಭದಲ್ಲಿ ಮಹಮ್ಮದ್ ಆದಿಲ್ 7 ವರ್ಷದ ಬಾಲಕ ವಿದ್ಯುತ್ ಪ್ರವಹಿಸಿ ಮರಣ ಹೊಂದಿದ್ದು, ನಿರ್ಗತಿಕ ಕುಟುಂಬದ ಆದಂರವರ ಕುಟುಂಬಕ್ಕೆ ಪರಿಹಾರ ಒದಗಿಸುವ ಬಗ್ಗೆ ಮೆಸ್ಕಾಂ ಅಧಿಕಾರಿಗಳು ಭರವಸೆ ನೀಡಿದ್ದರೂ ಈವರೆಗೆ ಬೇಡಿಕೆ ಈಡೇರಿವುದಿಲ್ಲ ಆದ್ದರಿಂದ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಒದಗಿಸುವಂತೆ ಮೆಸ್ಕಾಂ ಗೆ ಆದೇಶ ನೀಡಬೇಕೆಂದು
ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗ ದ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ. ಎಂ. ಮುಸ್ತಾಫ ಮುಖ್ಯಮಂತ್ರಿಸಿದ್ದರಾಮಯ್ಯ ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುತ್ತಾರೆ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಯವರು ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯುವಂತೆ ಸೂಚಿಸದರು.

ಈ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸಿ. ಜಯರಾಮ್, ಮಾಜಿ ತಾಲೂಕು ಪಂಚಾಯತ್ ಸದಸ್ಯ ಅಬ್ದುಲ್ ಗಫೂರ್ ಕಲ್ಮಡ್ಕ, ಸುಳ್ಯ ಬ್ಲಾಕ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಇಸ್ಮಾಯಿಲ್ ಪಡಿಪಿ ನಂಗಡಿ ಮೊದಲಾದವರು ಉಪಸ್ಥಿತರಿದ್ದರು

Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ