ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿಗಳ (Congress guarantee) ಪೈಕಿ ಒಂದಾದ 10 ಕೆಜಿ ಉಚಿತ ಅಕ್ಕಿ (10 KG Free Rice) ಕೊಡುವ ಅನ್ನಭಾಗ್ಯ ಯೋಜನೆಗೆ (Anna Bhagya Scheme) ಅಡ್ಡಿ ಎದುರಾಗಿದೆ. ರಾಜ್ಯದ ಬಳಿ ಇರುವ ಅಕ್ಕಿ ಸಾಲುತ್ತಿಲ್ಲ, ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಆದಿಯಾಗಿ ಎಲ್ಲಾ ಸಚಿವರು (Ministers) ಆರೋಪಿಸುತ್ತಿದ್ದಾರೆ. ಛತ್ತೀಸ್‌ಗಡ್ (Chhattisgarh) ಸೇರಿದಂತೆ ಬೇರೆ ರಾಜ್ಯಗಳಿಂದ ಅಕ್ಕಿ ತಂದು, 10 ಕೆಜಿ ಉಚಿತವಾಗಿ ನೀಡಲು ಪ್ಲಾನ್ ನಡೆಯುತ್ತಿದೆ. ಈ ನಡುವೆ ಅನ್ನ ಭಾಗ್ಯ ಯೋಜನೆಯಡಿ 10 ಕೆಜಿಯಲ್ಲ 15 ಕೆಜಿ ಅಕ್ಕಿ ಉಚಿತವಾಗಿ ನೀಡಿ ಅಂತ ರಾಜ್ಯ ಬಿಜೆಪಿ ನಾಯಕರು (BJP Leaders) ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಂಸದ ಪ್ರತಾಪ್ ಸಿಂಹ, ಮೋದಿ ಸರ್ಕಾರವೇ 5 ಕೆಜಿ ಉಚಿತ ಅಕ್ಕಿ ನೀಡುತ್ತಿದೆ ಎಂಬುದನ್ನು ಸಿದ್ದರಾಮಯ್ಯ ಮೊದಲ ಬಾರಿಗೆ ಒಪ್ಪಿಕೊಂಡಿದ್ದಾರೆ. ಗ್ಯಾರಂಟಿ ಘೋಷಿಸುವಾಗ ಅಕ್ಕಿ ಸಂಗ್ರಹದ ಮೂಲ ತಿಳಿದುಕೊಳ್ಳಬೇಕಿತ್ತು. ಮೋದಿ ಸರ್ಕಾರ ನೀಡುತ್ತಿರುವ 5 ಕೆಜಿ ಅಕ್ಕಿ ಜೊತೆಗೆ ನೀವು ಘೋಷಿಸಿರುವ 10 ಕೆಜಿ ಅಕ್ಕಿ ಸೇರಿಸಿ ಒಟ್ಟು 15 ಕೆಜಿ ಅಕ್ಕಿ ನೀಡಬೇಕು ಅಂತ ಆಗ್ರಹಿಸಿದ್ದಾರೆ.
ಸುಳ್ಳು ಹೇಳುವುದನ್ನು ಬಿಡಿ, ಫ್ರೀ ಅಕ್ಕಿ ಕೊಡಿ! ಇನ್ನು 15 ಕೆಜಿ ಅಕ್ಕಿ ಉಚಿತವಾಗಿ ಕೊಡುವಂತೆ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕೂಡ ಆಗ್ರಹಿಸಿದ್ದಾರೆ. ಮೋದಿ ಸರ್ಕಾರವು ಈ ಹಿಂದೆ ಸಿದ್ದರಾಮಯ್ಯ ಸರ್ಕಾರವಿದ್ದಾಗಲೂ ಅಕ್ಕಿಯನ್ನು ನೀಡುತ್ತಿತ್ತು. ಆದರೆ ಅದಕ್ಕೆ ಸಿದ್ದರಾಮಯ್ಯ ಲೇಬಲ್ ಅಂಟಿಸಿ ನೀಡುತ್ತಿದ್ದರು. ಕಾಂಗ್ರೆಸ್‌ನವರು ಸುಳ್ಳು ಹೇಳುವುದನ್ನು ಬಿಟ್ಟು ತಮ್ಮ ಗ್ಯಾರಂಟಿಯಲ್ಲಿ 10 ಕೆಜಿ ಅಕ್ಕಿ ಘೋಷಿಸಿದಂತೆ, ಈಗ ಕೇಂದ್ರ ಸರ್ಕಾರದ 5 ಕೆಜಿ ಅಕ್ಕಿ ಜೊತೆ ಹೆಚ್ಚುವರಿ ಆಗಿ 10 ಕೆಜಿ ಸೇರಿಸಿ…
