ಬಾಲಸೋರ್‌ ದುರಂತ ಬೆನ್ನಲ್ಲೇ ಒಡಿಶಾದಲ್ಲಿ ಮತ್ತೆ ಹಳಿ ತಪ್ಪಿದ ರೈಲಿನ ನಾಲ್ಕು ಬೋಗಿ! – ಕರುನಾಡ ನ್ಯೂಸ್


ರಾಯಗಡ: ಒಡಿಶಾದ ಬಾಲಸೋರ್‌ ಜಿಲ್ಲೆಯ (Balasore Train Accident) ಬಹನಾಗಾ ನಿಲ್ದಾಣದ ಬಳಿ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಭೀಕರ ಅಪಘಾತಕ್ಕೆ ಗುರಿಯಾದ ಘಟನೆ ಮನಸ್ಸಿಂದ ಮಾಸುವ ಮುನ್ನವೇ ಅದೇ ರಾಜ್ಯದಲ್ಲಿ ಮತ್ತೊಂದು ರೈಲು ಅಪಘಾತ (Train Accident) ಸಂಭವಿಸಿದೆ.

ಒಡಿಶಾದ ರಾಯಗಢ ಜಿಲ್ಲೆಯ ಅಂಬೋಡಾಲ ಯಾರ್ಡ್‌ನಲ್ಲಿರುವ ವೇದಾಂತ ಲಿಮಿಟೆಡ್‌ನ ಘಟಕಕ್ಕೆ ತೆರಳುತ್ತಿದ್ದಾಗ ನಿನ್ನೆ (ಶನಿವಾರ) ಸರಕು ಸಾಗಣೆ ರೈಲಿನ ನಾಲ್ಕು ಬೋಗಿಗಳು ಹಳಿ ತಪ್ಪಿವೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿರುವ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಈ ಘಟನೆ ಬಗ್ಗೆ ಪೂರ್ವ ಕರಾವಳಿ ರೈಲ್ವೆಯಿಂದ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ತ್ರಿವಳಿ ರೈಲು ದುರಂತ ನಡೆದ ಕೆಲವೇ ದಿನಗಳ ಬಳಿಕ ಈ ಘಟನೆ ನಡೆದಿದ್ದು, ಜನರಲ್ಲಿ ಆತಂಕ ಸೃಷ್ಟಿಯಾಗುವಂತೆ ಮಾಡಿದೆ. ಈ ಮಧ್ಯೆ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಜೂನ್ 21ರಂದು ಒಡಿಶಾದ ಬಾಲಸೋರ್‌ಗೆ ಭೇಟಿ ನೀಡಲಿದ್ದು, ರೈಲು ಅಪಘಾತದ ಕಠಿಣ ಸಮಯದಲ್ಲಿ ರಕ್ಷಣೆಗೆ ಬಂದ ವೈದ್ಯರು, ದಾದಿಯರು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಭೇಟಿಯಾಗಿ ಧನ್ಯವಾದ ಹೇಳಲಿದ್ದಾರೆ ಎಂದು ತಿಳಿದು ಬಂದಿದೆ.





Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ