ಅಪಘಾತದಲ್ಲಿ ಗಾಯಗೊಂಡ ಕೆ.ವಿ.ಜಿ ಐ.ಟಿ.ಐ ವಿದ್ಯಾರ್ಥಿಗೆ, ಆರ್ಥಿಕ ಸಹಾಯ ನೀಡಿದ ಡಾ. ರೇಣುಕಾ ಪ್ರಸಾದ್ ಕೆ.ವಿ.

ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರು, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಇದರ ಪ್ರಧಾನ ಕಾರ್ಯದರ್ಶಿಗಳು ಡಾ. ರೇಣುಕಾ ಪ್ರಸಾದ್ ಕೆ.ವಿಯವರು ಆರ್ಥಿಕ ಸಹಾಯ ನೀಡಿದ್ದಾರೆ. ಇತ್ತೀಚಿಗೆ ಅರಂಬೂರಿನಲ್ಲಿ ಬೈಕ್ ಅಪಘಾತವಾಗಿ ತೀವ್ರ ತರದ ಗಾಯದಿಂದ ಕಾಲು ಮುರಿತಕ್ಕೊಳಾಗಾಗಿ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಳ್ಯ ಕೆ.ವಿ.ಜಿ, ಐ.ಟಿ.ಐನ ತೇಜಸ್ ಎಂಬ ವಿದ್ಯಾರ್ಥಿಗೆ ತುರ್ತು ಆರ್ಥಿಕ ಸಹಾಯವಾಗಿ ₹10,000 ವನ್ನು ನೀಡಿದ್ದಾರೆ. ತಂದೆ ತಾಯಿ ಇಬ್ಬರು ಇಲ್ಲದೇ ತಬ್ಬಲಿಯಾಗಿರುವ ಕಾರಣ ಕಲ್ಲುಗುಂಡಿಯ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತ, ಸುಳ್ಯ ಕೆ.ವಿ.ಜಿ ಐ.ಟಿ.ಐ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ತೇಜಸ್‌ನ ಕಷ್ಟಕ್ಕೆ ಡಾ. ರೇಣುಕಾ ಪ್ರಸಾದ್ ಕೆ.ವಿಯವರು ಸ್ಪಂದಿಸಿದ್ದಾರೆ. ಈ ಸಂಧರ್ಭದಲ್ಲಿ ಕೆ.ವಿ.ಜಿ ಐ.ಟಿ.ಐಯ ಕಛೇರಿ ಅಧೀಕ್ಷರಾದ ಭವಾನಿಶಂಕರ ಅಡ್ತಲೆ ಮತ್ತು ಕೆ.ವಿ.ಜಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಹಿರಿಯ ಪ್ರಬಂಧಕರಾದ ಅಂಕುಶ್. ಕೆಯವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ