ಕಾಸರಗೋಡು: ಮಂಜೇಶ್ವರ ಠಾಣಾ ವ್ಯಾಪ್ತಿಯ ಕುಂಜತ್ತೂರು
ಮಾಡ ಪರಿಸರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ
ಭಂಡಾರಿ ಸ್ವಾಗತ್ ಆದೇಶ ನೀಡಿದ್ದಾರೆ.
ಮಾಡ ದೇವಸ್ಥಾನ ಸಮೀಪದ ಸ್ಮಶಾನ ಸ್ಥಳ ಹಾಗೂ ರಸ್ತೆಗೆ
ಸಂಬಂಧ ಪಟ್ಟಂತೆ ಅಹಿತಕರ ಘಟನೆಗೆ ಸಾಧ್ಯತೆ ಬಗ್ಗೆ ಲಭಿಸಿದ
ವರದಿಯಂತೆ ನಿಷೇಧಾಜ್ಞೆ ಹೊರಡಿಸಲಾಗಿದೆ.
ಮೇ 6 ಸಂಜೆ 7 ಗಂಟೆಯಿಂದ ಮೇ 8ರ ಸಂಜೆ 7 ಗಂಟೆ ತನಕ
ನಿಷೇಧಾಜ್ಞೆ ಜಾರಿಯಲ್ಲಿರಲಿದೆ.

ನಿಷೇಧಾಜ್ಞೆ ಹಿನ್ನಲೆಯಲ್ಲಿ ಕೋವಿ ಸೇರಿದಂತೆ ಮಾರಕಾಸ್ತ್ರ
ಯ್ಯುವುದು, ಬಹಿರಂಗ ಘೋಷಣೆ ಕೂಗುವುದು, ಧ್ವನಿ
ವರ್ಧಕ ಬಳಕೆ, ಐದಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವುದು,
ಪ್ರತಿಭಟನೆ, ಮೆರವಣಿಗೆ, ಸಮಾವೇಶ ಗಳನ್ನು ನಿಷೇಧಿಸಲಾಗಿದೆ.