ಸುಳ್ಯ:ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ಅವರು ಮೇ.3 ರಂದು ಸುಳ್ಯ ವಿಧಾನಸಭಾ ಕ್ಷೇತ್ರದ ವಿವಿಧ ಭಾಗದಲ್ಲಿ ಚುನಾವಣಾ ಪ್ರಚಾರ ಕೈಗೊಂಡರು. ಮನೆ ಮನೆ ಭೇಟಿ ಮಾಡಿ ಮತ ಯಾಚನೆ ನಡೆಸಿದರು. ಕಾರ್ನರ್ ಮೀಟಿಂಗ್‌ಗಳನ್ನು ನಡೆಸಿದರು. ಸುಳ್ಯ ನಗರದ ಹಳೆಗೇಟು, ಬೆಟ್ಟಂಪ್ಪಾಡಿ, ಗುಂಡ್ಯಡ್ಕ ಎಂಬಲ್ಲಿ ಮನೆ ಮನೆ ಪ್ರಚಾರ ಹಾಗೂ ಮರ್ಕಂಜ, ಎಲಿಮಲೆ, ದುಗ್ಗಲಡ್ಕ, ಪೈಚಾರ್‌ಗಳಲ್ಲಿ ಕಾರ್ನರ್ ಸಭೆ ನಡೆಸಲಾಯಿತು. ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್, ಆಪ್ ಜಿಲ್ಲಾಧ್ಯಕ್ಷ ಅಶೋಕ್ ಎಡಮಲೆ, ಮುಖಂಡರಾದ ರಶೀದ್ ಜಟ್ಟಿಪಳ್ಳ, ಗುರು ಪ್ರಸಾದ್ ಮೇರ್ಕಜೆ, ಸಂಶುದ್ದೀನ್ ಕೆ.ಎಂ,ಸುರೇಶ್ ಮುಂಡಕಜೆ ಮತ್ತಿತರರು ಭಾಗವಹಿಸಿದ್ದರು.
ಕಾರ್ನರ್ ಮಿ: ಸುಳ್ಯ ವಿಧಾನಸಭಾ ಕ್ಷೇತ್ರದ ಪಾಲ್ತಾಡು ಸಮೀಪ ಚೆನ್ನಾರು ಎಂಬಲ್ಲಿ ಸುಮಾರು 40 ಕ್ಕೂ ಹೆಚ್ಚು ಮಂದಿ ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಗೊಂಡರು. ಶಾಫಿ ಎಂಬವರ ನೇತೃತ್ವದಲ್ಲಿ ಪಕ್ಷಕ್ಕೆ ಎಲ್ಲಾ 40 ಜನರು ಸೇರ್ಪಡೆಗೊಂಡರು. ಆಮ್ ಆದ್ಮಿ ಪಾರ್ಟಿ ಮುಖಂಡ ಖಲಂದರ್ ಎಲಿಮಲೆ ನೇತೃತ್ವದಲ್ಲಿ ಸಂಶುದ್ದೀನ್, ಮನ್ಸೂರ್, ಸತ್ತಾರ್ ಹಾಗೂ ಮತ್ತಿತರರು ಆಪ್ ಪ್ರಮುಖರು ಮಾತುಕತೆ ನಡೆಸಿ, ಯುವಕರನ್ನು ಪಕ್ಷಕ್ಕೆ ಭರಮಾಡಿಕೊಂಡರು. ಎಂದು ಆಮ್ ಆದ್ಮಿ ಪಕ್ಷದ ಮೂಲಗಳು ತಿಳಿಸಿದ್ದಾರೆ.

ಈಗಾಗಲೇ ಒಂದೆಡೆ ಸುಳ್ಯ ತಾಲೂಕಿನಲ್ಲಿ ಆಪ್ ಪಾರ್ಟಿಯು ಸದ್ದು ಮಾಡುತ್ತಿದೆ, ಚುನವಾಣ ಪೈಪೋಟಿ ತಾಕಕ್ಕೇರಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಪ್ ಪಕ್ಷಕ್ಕೆ ಸಾರ್ವಜನಿಕರ ಒಲವು ಹೆಚ್ಚಾಗಿದ್ದು, ಹಲವು ಬಗೆಯ ಲೇಖನಗಳು, ಕಾಮೆಂಟ್ಗಳು ಕಂಡುಬರುತ್ತಿದೆ. ಒಟ್ಟಿನಲ್ಲಿ ಈ ವರ್ಷದ ಚುನಾವಣೆ ರಂಗೇರಿದೆ.