ಆಮ್ ಆದ್ಮಿ ಪಾರ್ಟಿ ವತಿಯಿಂದ ಸಂಪಾಜೆ, ಅರಂತೋಡಿನಲ್ಲಿ ಕಾರ್ನರ್ ಸಭೆ, ಮನೆ- ಮನೆ ಭೇಟಿ ಪ್ರಚಾರ – ಕರುನಾಡ ನ್ಯೂಸ್

ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ ಇಂದು ಸುಳ್ಯ ವಿಧಾನಸಭಾ ಕ್ಷೇತ್ರದ ಸಂಪಾಜೆ, ಗೂನಡ್ಕ, ಅರಂತೋಡು ಗ್ರಾಮದ ವಿವಿಧ ಭಾಗಗಳಲ್ಲಿ ಬಿರುಸಿನ ಚುನಾವಣಾ ಪ್ರಚಾರ ಕೈಗೊಂಡರು. ಮನೆ ಮನೆ ಪ್ರಚಾರ ಮತ್ತು ಕಾರ್ನರ್ ಸಭೆಗಳು ಕೂಡಾ ನಡೆಯಿತು. ಸಂಪಾಜೆಯ ಚರ್ಚ್ ಬಳಿ ಹಾಗೂ ಕೂಲಿಶೆಡ್ಡ್ ಬಳಿ ‘ಕಾರ್ನರ್ ಮೀಟ್’ ನಡೆಸಿದರು. ಬಳಿಕ ಮನೆ-ಮನೆ ಭೇಟಿ ನೀಡಿ ಮತಯಾಚನೆ ನಡೆಸಿದರು‌. ಈ ಸಂಧರ್ಭದಲ್ಲಿ ವಿವೇಕಾನಂದ ಸಲಿನ್ಸ್ (ರಾಜ್ಯ ಉಪಾಧ್ಯಕ್ಷರು), ಅಶೋಕ್ ಎಡಮಲೆ (ಜಿಲ್ಲಾಧ್ಯಕ್ಷ) , ರಶೀದ್ ಜಟ್ಟಿಪಳ್ಳ , ಗುರುಪ್ರಸಾದ್ ಮೇರ್ಕಜೆ, ಖಲಂದರ್ ಏಲಿಮಲೆ, ಸುರೇಶ್ ಮುಂಡುಕಜೆ, ಅಬ್ದುಲ್ ಖಾದರ್, ಸಂಶುದ್ದೀನ್, ಹರೀಶ್, ಹಾಗೂ ಅಭ್ಯರ್ಥಿಯ ಸಹಪಾಠಿಗಳಾದ ವಿಜಯ್ ಭಗವಾನ್, ವೇದರಾಜ್, ಲೋಹಿತ್, ಪ್ರದೀಪ್, ಸತ್ತಾರ್ ಮತ್ತಿತ್ತರು ಉಪಸ್ಥಿತರಿದ್ದರು.

Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ