ಗಾಂಧಿನಗರ ಮದರಸ ಶೈಕ್ಷಣಿಕ ವರ್ಷಾರಂಭ”ಫತಹೆ ಮುಬಾರಕ್ ” ಸಮಾರಂಭ

ಗಾಂಧಿನಗರ: ಮದರಸ ಶೈಕ್ಷಣಿಕ ವರ್ಷಾರಂಭ “ಫತಹೆ ಮುಬಾರಕ್ ” ಸಮಾರಂಭ- ಧಾರ್ಮಿಕ ಶಿಕ್ಷಣದಿಂದ ಜೀವನದಲ್ಲಿ ಸಂಸ್ಕಾರ : ಕೆ. ಎಂ. ಮುಸ್ತಫ
ಮುಹಿಯದ್ದೀನ್ ಜುಮ್ಮಾ ಮಸ್ಜಿದ್, ತರ್ಬಿಯತುಲ್ ಇಸ್ಲಾಂ ಜಮಾಆತ್ ಕಮಿಟಿ ಅಧೀನದ ಮುನವ್ವಿರುಲ್ ಇಸ್ಲಾಂ ಹೈಯರ್ ಸೆಕೆಂಡರಿ ಮದರಸ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಾರಂಭ ಮತ್ತು ನೂತನ ಪ್ರವೇಶಾರ್ಥಿ ಮಕ್ಕಳಿಗೆ ಸ್ವಾಗತ ಸಮಾರಂಭ ಗಾಂಧಿನಗರ ಮದರಸ ಸಭಾಂಗಣದಲ್ಲಿ ಜರಗಿತು
ಅಧ್ಯಕ್ಷತೆ ವಹಿಸಿದ್ದ ಜಮಾಆತ್ ಕಮಿಟಿ ಅಧ್ಯಕ್ಷ ಕೆ. ಎಂ. ಮುಸ್ತಾಫ ಮಾತನಾಡಿ ಲೌಕಿಕ ಶಿಕ್ಷಣ ಜೀವನ ಭದ್ರತೆ, ಭೌತಿಕ ಸ್ಥಾನ ಮಾನಕ್ಕೆ ಅವಶ್ಯವಾದರೆ, ಧಾರ್ಮಿಕ ಶಿಕ್ಷಣ ಆತ್ಮಸಂಸ್ಕರಣೆ ಮತ್ತು ಪಾರತ್ರಿಕ ಲೋಕದ ವಿಜಯಕ್ಜೆ ಅನಿವಾರ್ಯವಾಗಿದೆ ಎಂದುಹೇಳಿದರು. ಉದ್ಘಾಟನೆಯನ್ನು ಸುನ್ನಿಮ್ಯಾನೆಜ್ ಮೆoಟ್ ಅಸೋಸಿಯೇಷನ್ ಅಧ್ಯಕ್ಷ ನಿಜಾರ್ ಸಖಾಫಿ ಮುಡೂರ್ ನೆರವೇರಿಸಿದರು ಮುಖ್ಯಅತಿಥಿಗಳಾಗಿ ಮಾಪಲಡ್ಕ ಮುದರ್ರಿಸ್ ಹಾಫಿಳ್ ಅಬ್ದುಲ್ ಸಲಾಂ ನಿಜಾಮಿ ನೂತನ ಪ್ರವೇಶ ಪಡೆದ ಮಕ್ಕಳಿಗೆ ಅಕ್ಷರ ಅಭ್ಯಾಸ ನಡೆಸಿದರು
ಮದರಸ ಸದರ್ ಉಸ್ತಾದ್ ಇಬ್ರಾಹಿಂ ಸಖಾಫಿ ಪುಂಡೂರ್ ಸ್ವಾಗತಿಸಿ ಪ್ರಸ್ತಾವನೆ ಗೈದರು, ವೇದಿಕೆಯಲ್ಲಿ ಜಮಾಅತ್ ಕಮಿಟಿ ಉಪಾಧ್ಯಕ್ಷ ಹಾಜಿ ಕೆಎಂಎಸ್ ಮಹಮ್ಮದ್, ಪ್ರಧಾನಕಾರ್ಯದರ್ಶಿ ಕೆ. ಬಿ. ಅಬ್ದುಲ್ ಮಜೀದ್, ನಿರ್ದೇಶಕರುಗಳಾದ ಕೆ. ಎಸ್. ಉಮ್ಮರ್, ಇಸ್ಮಾಯಿಲ್ ಹಾಜಿ, ಮದರಸ ಉಸ್ತುವಾರಿ ಸಮಿತಿ ಸದಸ್ಯರುಗಳಾದ ಹಮೀದ್ ಬೀಜಕೊಚ್ಚಿ,ಇಬ್ರಾಹಿಂಶಿಲ್ಪ ಮೊದಲಾದವರು ಉಪಸ್ಥಿತರಿದ್ದರು, ಮದರಸ ಮುಅಲ್ಲಿo ಲತೀಫ್ ಸಖಾಫಿ ಗೂನಡ್ಕ ವಂದಿಸಿದರು, ಸಹಾಯಕ ಸದರ್ ಮುಅಲ್ಲಿo ಖಾದರ್ ಮುಸ್ಲಿಯಾರ್ ಎಡಪ್ಪಾಲo ನಿರೂಪಿಸಿದರು

Source link

Leave a Comment

Your email address will not be published. Required fields are marked *

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ