ಮೈಸೂರು ನಂಜನಗೂಡು ತಾಲೂಕು, ಹುಲ್ಲಹಳ್ಳಿ ಹುರ ಮೂಲದ ಮಹಾದೇವಯ್ಯ ಅವರು ತನ್ನ ಐದು ಜನ ಸಹಚರರೊಂದಿಗೆ ಧರ್ಮಸ್ಥಳ, ಸುಬ್ರಹ್ಮಣ್ಯ ಪ್ರವಾಸಕ್ಕೆಂದು ಬಂದಿದ್ದರು, ಆದರೆ ಸುಬ್ರಹ್ಮಣ್ಯ ಬರುತ್ತಿದ್ದಂತೆ ಜೊತೆಗೆ ಬಂದವರು ತಪ್ಪಿಹೋಗಿ, ದಿಕ್ಕು ತೋಚದೆ ಗುತ್ತಿಗಾರುವರೆಗೂ ಈತ ಬಂದು ತನ್ನ ಬೈಕ್ ಗೆ ಪೆಟ್ರೋಲ್ ಕೂಡಾ ಖಾಲಿಯಾಗಿ, ಬಾಕಿ ಆದರೂ ತನ್ನ ಮೊಬೈಲ್ ಕೂಡ ಸ್ಥಿರತೆ ಕಳೆದುಕೊಂಡಿತು. ಹಲವರಲ್ಲಿ ಬೇಡಿಕೆ ಇಟ್ಟರು ಸಹಾಯ ಸಿಗದೆ, ಕೊನೆಗೆ ಟ್ರಸ್ಟ್ ವತಿಯಿಂದ ಚಂದ್ರಶೇಖರ ಕಡೋಡಿ ಅವರು ಠಾಣಾಧಿಕಾರಿ ಮಂಜುನಾಥ್ ಅವರ ಗಮನಕ್ಕೆ ತಂದರು. ತಕ್ಷಣವೇ ಎಲ್ಲಾ ವಿಚಾರಣೆ ಮುಗಿಸಿದ ಎಸ್. ಐ. ಅವರು ವ್ಯಕ್ತಿಯನ್ನು ಅವರಿಗೆ ಊರಿಗೆ ತಲುಪುವಷ್ಟು ಇಂಧನ ಕಲ್ಪಿಸಿ, ಅವರನ್ನು ಊರಿಗೆ ತಲುಪುವ ವ್ಯವಸ್ಥೆ ಮಾಡಿದ್ದರು. ಎಸ್. ಐ. ಅವರ ಮಾದರಿ ಕಾರ್ಯಕ್ಕೆ, ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ರಿ ಗುತ್ತಿಗಾರು ಅಭಿನಂದನೆಳನ್ನು ವ್ಯಕ್ತಪಡಿಸಿದ್ದಾರೆ.
