ಜೇನು ತೆಗಿಯಲೆಂದು ಮರ ಹತ್ತಿದ್ದ ಯುವಕನೋರ್ವ ಮರದಿಂದ ಬಿದ್ದು ಅಸುನೀಗಿರುವ ಘಟನೆ ಎ.18 ರ ಸಂಜೆ ಸಂಪಾಜೆ ಗ್ರಾಮ ವ್ಯಾಪ್ತಿಯಲ್ಲಿ ಸಂಭವಿಸಿದೆ. ಮೃತ ಯುವಕನನ್ನು ಕರಿಕೆ ಮೂಲದ ವಿಜಯ್ ಎಂದು ಗುರುತಿಸಲಾಗಿದೆ. ಕರಿಕೆಯಿಂದ ಮೂವರು ಜೇನು ತೆಗೆಯಲೆಂದು ಸಂಪಾಜೆಗೆ ಬಂದಿದದ್ದರು ಎಂದು ಹೇಳಲಾಗಿದ್ದು, ಈ ವೇಳೆ ವಿಜಯ್ ಜೇನು ತೆಗೆಯುತ್ತಿದ್ದ ಸಂದರ್ಭ ಆಯ ತಪ್ಪಿ ಕೆಳಗೆ ಬಿದ್ದು, ಗಂಭೀರ ಗಾಯಗೊಂಡಿದ್ದಾರೆ. ಕೂಡಲೆ ಜೊತೆಗಿದ್ದವರು ಆತನನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನದಲ್ಲೇ ಆತ ಮೃತಪ್ಪಟ್ಟಿದ್ದ ಎನ್ನಲಾಗಿದೆ.
The post ಸಂಪಾಜೆ: ಜೇನು ತೆಗೆಯುತ್ತಿದ್ದ ಸಂದರ್ಭ ಮರದಿಂದ ಬಿದ್ದು ಯುವಕ ಮೃತ್ಯು appeared first on ನಮ್ಮ ಸುಳ್ಯ.