ಸುಳ್ಯ: ಭೀಕರ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು ಜನರು ತತ್ತರಿಸಿ ಹೋಗಿದ್ದಾರೆ. ಈ ನಡುವೆ ಹರಿಹರ ಎಂಬ ಪ್ರದೇಶದಲ್ಲಿ ಪ್ರವಾಹವಾಗಿದ್ದು ಆ ಸ್ಥಳದಲ್ಲಿ ಮರ ತೆರವು ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕ್ರೇನ್ ಆಪರೇಟರ್ ಶರೀಪ್ ಎಂಬವರು ನದಿಗೆ ಬಿದ್ದಿದ್ದಾರೆ.
ಅಪರೇಟರ್ ನೀರಿಗೆ ಬಿದ್ದ ತಕ್ಷಣವೇ, ತನ್ನ ಪ್ರಾಣದ ಹಂಗನ್ನು ತೊರೆದು ಸೋಮಶೇಖರ್ ಕಟ್ಟೆಮನೆ ಎಂಬವರು ಕ್ರೇನ್ ಆಪರೇಟರ್ ಜೀವ ಉಳಿಸಲು ನೀರಿಗೆ ಹಾರಿದ್ದಾರೆ. ಉಳಿದವರು ಹಗ್ಗ ಇಳಿಸಿ, ಅಲ್ಲೇ ಇದ್ದ ಜೆ ಸಿ ಬಿ ಬಳಸಿ ಅವರನ್ನು (ಕ್ರೇನ್ ಆಪರೇಟರ್) ರಕ್ಷಿಸಲಾಗಿದೆ. ಸೋಮಶೇಖರ್ ಕಟ್ಟೆಮನೆ ಅವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಕೋಮು ಸಾಮರಸ್ಯಕ್ಕೆ ಸಾಕ್ಷಿ ಎಂಬಂತೆ ಸಖತ್ ಸುದ್ದಿಯಾಗಿದ್ದಾರೆ.
