ಪ್ರವೀಣ್ ಹತ್ಯೆ ಪ್ರಕರಣ: ಬೆಂಗಳೂರಿನಲ್ಲಿ ಇಬ್ಬರ ಬಂಧನ.!

Uncategorized
Advertisement
Advertisement

ಬೆಂಗಳೂರು: ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಇಬ್ಬರು ಆರೋಪಗಳನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದ್ದಾರೆ.

ಪ್ರಕರಣದ ಸಂಬಂಧಿಸಿದಂತೆ ಈ ಮೊದಲೇ ಇಬ್ಬರನ್ನು ಬಂಧಿಸಿ ಹಲವರನ್ನು ವಿಚಾರಣೆ ನಡೆಸಲಾಗಿದೆ. ಪ್ರವೀಣ್ ಕೊಲೆಗೆ ಸಹಕರಿಸಿದ್ದ ಆರೋಪದಲ್ಲಿ ಇವರನ್ನು ವಶಕ್ಕೆ ಪಡೆಯಲಾಗಿದೆ. ಪ್ರವೀಣ್ ಹತ್ಯೆ ನಂತರ ನಗರಕ್ಕೆ ಬಂದು ಆರೋಪಿಗಳು ನೆಲೆಸಿದ್ದರು. ಈ ಬಗ್ಗೆ ಓರ್ವ ಹಿರಿಯ ಐಪಿಎಸ್ ಅಧಿಕಾರಿಗೆ ಮಾಹಿತಿ ನೀಡಲಾಗಿತ್ತು. ಯಾವುದೇ ಮಾಹಿತಿ ಸೋರಿಕೆಯಾಗದೇ ಖಾಕಿ ತಂಡ ಕಾರ್ಯಾಚರಣೆ ಕೈಗೊಂಡಿತ್ತು ಎನ್ನಲಾಗಿದೆ. ಸುಳ್ಯ ಪೊಲೀಸರ ಜೊತೆಗೆ ನಗರದ ಒಂದು ಪೊಲೀಸ್ ತಂಡವು ಆರೋಪಿಗಳ ಪತ್ತೆಗೆ ಸಾಥ್ ನೀಡಿದ್ದು ಇಬ್ಬರನ್ನು ವಶಕ್ಕೆ ಪಡೆದು ತನಿಖೆಯನ್ನು ಕೈಗೊಳ್ಳಲಾಗಿದೆ.

Advertisement

Leave a Reply

Your email address will not be published.