ಕರ್ನಾಟಕ ರಾಜ್ಯ ಎಸ್ ಕೆ ಎಸ್ ಎಸ್ ಎಫ್ ಇಸ್ತಿಖಾಮ ಮಾರ್ಚ್ 10 ರಂದು ಬಿ.ಸಿ ರೋಡ್ ಪೂಂಜಾ ಮೈದಾನದಲ್ಲಿ ನಡೆಯುವ ಸಮಸ್ತ ಆದರ್ಶ ಮಹಾ ಸಮ್ಮೇಳನದ ಪ್ರಚಾರ ಜಾಥಾ ವನ್ನು ಸುಳ್ಯ ಕೇಂದ್ರ ಜುಮ್ಮಾ ಮಸೀದಿ ಬಳಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಸಮಸ್ತ ನೇತಾರ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುಲ್ ಖಾದರ್ ಫೈಝಿ ಐವರ್ನಾಡು ಸುಳ್ಯ ತಾಲೂಕು ಎಸ್ ಎಮ್ ಎಫ್ ಅಧ್ಯಕ್ಷ ಹಮೀದ್ ಹಾಜಿ ಸುಳ್ಯ ,ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ಅಧ್ಯಕ್ಷ ಅಬ್ದುಲ್ಲಾ ಪೈಝಿ, ಇಬ್ರಾಹಿಂ ಹಾಜಿ ಕತ್ತಾರ್, ಎಸ್ ಕೆ ಎಸ್ ಎಸ್ ಎಫ್ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಕರಾವಳಿ,ಗಾಂಧಿನಗರ ಜುಮ್ಮಾ ಮಸೀದಿ ಅಡಳಿತ ಮಂಡಳಿ ಸದಸ್ಯ ಇಬ್ರಾಹಿಂ ಶಿಲ್ಪಾ, ಮದರಸ ಮ್ಯಾನೇಜ್‌ಮೆಂಟ್ ಕೋಶಾಧಿಕಾರಿ ಯು.ಪಿ.ಬಶೀರ್, ಎಸ್ ಕೆ ಎಸ್ ಎಸ್ ಎಫ್ ಸುಳ್ಯ ಕ್ಲಸ್ಟರ್ ಕಾರ್ಯದರ್ಶಿ ತಾಜುದ್ದೀನ್ ಅರಂತೋಡು, ರಜಾಕ್ ಹಾಜಿ ಕರಾವಳಿ, ಅಹಮದ್ ಸುಪ್ರೀಂ, ಬಾಬ ಹಾಜಿ ಅಜಾದ್, ಖಾದರ್ ಮೊಟ್ಟಂಗಾರ್, ಮುಝಮ್ಮಿಲ್ ಅರಂತೋಡು, ಸಂಸುದ್ದೀನ್ ಅರಂತೋಡು, ನಿಸಾರ್ ಒರ್ಕುಟ್, ಅಬ್ದುಲ್ ರಹೂಫ್ ಮುಂತಾದವರು ಉಪಸ್ಥಿತರಿದ್ದರು .
