ಕೆ.ವಿ.ಜಿ.ಪಾಲಿಟೆಕ್ನಿಕ್’ನ ವಿದ್ಯಾರ್ಥಿ ಸಂಘದ ಉದ್ಘಾಟನೆ.

ಸುಳ್ಯ: ಇಲ್ಲಿನ ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್‌ನ 2022-23 ನೇ ಸಾಲಿನ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಜಯಪ್ರಕಾಶ ಕೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಿಗೆ ಪ್ರಮಾಣ ವಚನ ಬೋಧಿಸಿ ಕೊಟ್ಟರು, ವಿದ್ಯಾರ್ಥಿ ಕ್ಷೇಮಾಧಿಕಾರಿ ಸುನಿಲ್‌ಕುಮಾರ್ ಎನ್.ಪಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಅಪೇಕ್ಷ್ ಎಂ.ಪಿ (ಅಂತಿಮ ಸಿವಿಲ್), ಉಪಾಧ್ಯಕ್ಷರಾಗಿ ಪುಷ್ಪರಾಜ್ (ಅಂತಿಮ ಮೆಕ್ಯಾನಿಕಲ್), ಕಾರ್ಯದರ್ಶಿಯಾಗಿ ರಾಜೇಶ್ ಪಿ.ಎಂ (ಪ್ರಥಮ ಸಿವಿಲ್), ಜೊತೆ …

ಕೆ.ವಿ.ಜಿ.ಪಾಲಿಟೆಕ್ನಿಕ್’ನ ವಿದ್ಯಾರ್ಥಿ ಸಂಘದ ಉದ್ಘಾಟನೆ. Read More »

ಅಸ್ಸಾಂ ರೈಫಲ್ಸ್ ಗೆ ‘ರಕ್ಷಿತಾ ಮಡ್ತಿಲ’ ಆಯ್ಕೆ.!

ಐವರ್ನಾಡು: ಇಲ್ಲಿನ ಮಡ್ತಿಲ ಕುಟುಂಬದವರಾಗಿದ್ದು, ಪ್ರಸ್ತುತ ಧರ್ಮಸ್ಥಳದಲ್ಲಿ ನೆಲೆಸಿರುವ ಭಾಸ್ಕರ ಗೌಡ ಮಡ್ತಿಲ ಹಾಗೂ ಮಮತಾ ದಂಪತಿಯ ಪುತ್ರಿಯಾದ ಕು.ರಕ್ಷಿತಾ ಎಂ.ಬಿ.ಯವರು ಪ್ಯಾರಾ ಮಿಲಿಟರಿ ಫೋರ್ಸ್, ಅಸ್ಸಾಂ ರೈಫಲ್ಸ್‌ಗೆ ಆಯ್ಕೆಯಾಗಿದ್ದಾರೆ. 5ನೇ ತರಗತಿವರೆಗೆ ಐವರ್ನಾಡಿನ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ವ್ಯಾಸಂಗ ನಡೆಸಿ ಬಳಿಕ ಕಾರ್ಕಳದ ಅತ್ತೂರು ಸೈಂಟ್ ಲಾರೆನ್ಸ್ ಹಿ.ಪ್ರಾ. ಶಾಲೆಯಲ್ಲಿ ಪ್ರೌಢಶಿಕ್ಷಣವನ್ನು, ನಿಟ್ಟೆ ಎನ್.ಎಸ್.ಎ.ಎಂ. ಪಿ.ಯು. ಕಾಲೇಜ್, ಪದವಿ ಶಿಕ್ಷಣವನ್ನು ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಪೂರೈಸಿದರು. ಮಿಲಿಟರಿಗೆ ಸೇರುವ ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಹಾಗೂ ವೈದ್ಯಕೀಯ …

ಅಸ್ಸಾಂ ರೈಫಲ್ಸ್ ಗೆ ‘ರಕ್ಷಿತಾ ಮಡ್ತಿಲ’ ಆಯ್ಕೆ.! Read More »

ಕಲ್ಲುಗುಂಡಿ: ಲಾರಿ – ಬಸ್ ಅಪಘಾತ; ಗಂಭೀರ ಗಾಯಗೊಂಡಿದ್ದ ಲಾರಿ ಚಾಲಕ ಮೃತ್ಯು.

ಕಲ್ಲುಗುಂಡಿ: ಇಲ್ಲಿನ ಕಡಪಾಲ ಸೇತುವೆ ಬಳಿ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಲಾರಿ ನಡುವೆ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಲಾರಿ ಚಾಲಕ ಕೊನೆಯುಸಿರೆಳೆದಿದ್ದಾರೆ ಮೈಸೂರಿನಿಂದ ಪುತ್ತೂರು ಕಡೆಗೆ ಬರುತ್ತಿದ್ದ ಸರಕಾರಿ ಬಸ್‌ಗೆ ಲಾರಿ ಡಿಕ್ಕಿ ಹೊಡೆದಿದ್ದು, ಹಲವು ಪ್ರಯಾಣಿಕರು ಗಾಯಗೊಂಡಿದ್ದರು. ಗಾಯಾಳುಗಳನ್ನು ಅಂಬ್ಯುಲೆನ್ಸ್‌ನಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು. ಬಸ್ ಗೆ ಲಾರಿ ಡಿಕ್ಕಿಯಾದ ವೇಳೆ ಮಧ್ಯದಲ್ಲಿ ಸಿಲುಕಿಕೊಂಡಿದ್ದ ಲಾರಿ ಚಾಲಕನನ್ನು ಸ್ಥಳೀಯರ ಪರಿಶ್ರಮದಿಂದ ಹೊರ ತೆಗೆದು ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದ ಚಾಲಕ ತನ್ನ …

ಕಲ್ಲುಗುಂಡಿ: ಲಾರಿ – ಬಸ್ ಅಪಘಾತ; ಗಂಭೀರ ಗಾಯಗೊಂಡಿದ್ದ ಲಾರಿ ಚಾಲಕ ಮೃತ್ಯು. Read More »

ಸೌಂದರ್ಯ ಸ್ಪರ್ಧೆ: ಹಿತಾ ಸುವರ್ಣ ‘ಮಿಸ್ ತುಳುನಾಡು’

ಉಡುಪಿ: ಇಲ್ಲಿನ ಮಣಿಪಾಲ್ ಇನ್ ನಲ್ಲಿ ನಡೆದ ಮಿಸ್ ತುಳುನಾಡು ಸೌಂದರ್ಯ ಸ್ಪರ್ಧೆಯಲ್ಲಿ ಉಡುಪಿಯ ಹಿತಾ ಸುವರ್ಣ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ. ಉಡುಪಿಯ ಪಿಪಿಸಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ  ಮಾಡುತ್ತಿರುವ ಹಿತಾ ಸುವರ್ಣ “2022 ಮಿಸ್ ತುಳುನಾಡು” ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾಳೆ.

ಕಲ್ಲುಗುಂಡಿ: ಬಸ್- ಲಾರಿ ಅಪಘಾತ; ಹಲವರಿಗೆ ಗಾಯ.!

ಕಲ್ಲುಗುಂಡಿ: ಇಲ್ಲಿನ ಕಡಪಾಲ ಸೇತುವೆಯ ಬಳಿ ಲಾರಿಯೊಂದು ಮೈಸೂರಿನಿಂದ ಪುತ್ತೂರು ಕಡೆಗೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ನಾಲ್ಕಾರು ಮಂದಿ ಜಖಂಗೊಂಡ ಘಟನೆ ಇಂದು ಸಂಜೆ ನಡೆದಿದೆ. ಗಾಯಾಳುಗಳನ್ನು ಅಂಬ್ಯುಲೆನ್ಸ್‌ ಮೂಲಕ ಸುಳ್ಯ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು. ಇನ್ನೋರ್ವ ಗಾಯಾಳು ಬಸ್ಸಿನ ಒಳಗೆ ಸಿಲುಕಿದ್ದು, ಬಸ್ಸಿನ ಸೀಟ್‌ನ ರಾಡ್ ಕಟ್ ಮಾಡಿ ಇದೀಗ ಅವರನ್ನು ಸರಕಾರಿ ಅಂಬ್ಯುಲೆನ್ಸ್‌ನಲ್ಲಿ ಸುಳ್ಯ ಕಡೆಗೆ ತರಲಾಯಿತೆಂದು ತಿಳಿದುಬಂದಿದೆ.

ನಂದಿನಿ ಹಾಲಿನ ದರ ₹3 ಏರಿಕೆ; ಮಧ್ಯರಾತ್ರಿಯಿಂದಲೇ ಹೊಸದರ ಜಾರಿ

ಬೆಂಗಳೂರು: ನಂದಿನಿ ಹಾಲಿನ ದರ ₹3 ಏರಿಕೆಯಾಗಿದೆ. ಇಂದು ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿಯಾಗಲಿದ್ದು, ನಾಳೆ ಬೆಳಗ್ಗೆಯಿಂದ ಪ್ರತಿ ಲೀಟರ್ ಹಾಲಿನ ಮೇಲೆ ₹3. ಏರಿಕೆಯಾಗಲಿದೆ. ನಂದಿನಿ ಹಾಲು, ಮೊಸರು ತಲಾ ₹3 ಹೆಚ್ಚಳವಾಗಿದ್ದು, KMF ಹಾಲಿನ ದರ ಪರಿಷ್ಕರಣೆ ಮಾಡಿದೆ.

ಒಂದೇ ದಿಕ್ಕಿನಲ್ಲಿ‌ ಚಲಿಸುತ್ತಿದ್ದ ಕಾರು-ರಿಕ್ಷಾ ನಡುವೆ ಅಪಘಾತ.

ಸುಳ್ಯ: ಸುಳ್ಯ ಭಾಗದಿಂದ ಹಳೆಗೇಟು ಕಡೆ ಹೋಗುತ್ತಿದ್ದ ರಿಕ್ಷಾ ಹಾಗೂ ನಿಸಾನ್ ಟೆರಾನೋ ನಡುವೆ ಜ್ಯೋತಿ ಆಸ್ಪತ್ರೆ ಬಳಿ ಅಪಘಾತ ಸಂಭವಿಸಿದೆ. ರಿಕ್ಷಾ ದಲ್ಲಿದ್ದವರಿಗೆ ಗಾಯಗಾಳಾಗಿದ್ದು, ಗಾಯಾಳುವನ್ನು ಸುಳ್ಯ ಆಸ್ಪತ್ರೆಗೆ ರವಾನಿಸಲಾಗಿದೆ.

ನಿತ್ಯಾನಂದ ಮುಂಡೋಡಿ ಇವರಿಗೆ ‘ಸಹಕಾರ ರತ್ನ’ ಪ್ರಶಸ್ತಿ

ಸುಳ್ಯ: ಹಿರಿಯ ಸಹಕಾರಿ ನಿತ್ಯಾನಂದ ಮುಂಡೋಡಿ ಇವರು, ಕರ್ನಾಟಕ ರಾಜ್ಯ ಸರಕಾರ ನೀಡಲ್ಪಡುವ ‘ಸಹಕಾರ ರತ್ನ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ವತಿಯಿಂದ ಮುಂಬರುವ ನ.18 ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುವ ರಾಜ್ಯ ಮಟ್ಟದ ಸಹಕಾರಿ ಸಪ್ತಾಹ ಕಾರ್ಯಕ್ರಮದಲ್ಲಿ ನಿತ್ಯಾನಂದ‌ ಮುಂಡೋಡಿ ಅವರಿಗೆ ಸಹಕಾರ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ. ಸಹಕಾರ ಚಳುವಳಿಯ ಬೆಳವಣಿಗೆಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದ್ದು,. ಕಳೆದ ಹಲವು ದಶಕಗಳಿಂದ ಸುಳ್ಯ …

ನಿತ್ಯಾನಂದ ಮುಂಡೋಡಿ ಇವರಿಗೆ ‘ಸಹಕಾರ ರತ್ನ’ ಪ್ರಶಸ್ತಿ Read More »

ಅರಂತೋಡು: ತೆಕ್ಕಿಲ್ ಸೋಕರ್ ಲೀಗ್ 2022 ಪುಟ್ಬಾಲ್ ಲೀಗ್ ಆವೃತ್ತಿ -4 ಉದ್ಘಾಟನಾ ಸಮಾರಂಭ.

ಬೆಟಾಲಿಯನ್ ಎಫ್.ಸಿ.ಅರಂತೋಡು ಇದರ ಅಶ್ರಯದಲ್ಲಿ ತೆಕ್ಕಿಲ್ ಸೋಕರ್ 7 ಜನರ ಪುಟ್ಬಾಲ್ ಲೀಗ್ ಮಾದರಿಯ ಪಂದ್ಯಾಟ ಅರಂತೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನ.13 ರಂದು ನಡೆಯಿತು. ಪಂದ್ಯಾಟದ ಉದ್ಘಾಟನೆಯನ್ನು ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ನೆರವೇರಿಸಿ ಮಾತನಾಡಿ ಹಿಂದೆ ನಾವು ಕ್ರಿಕೆಟ್ ಆಟವನ್ನು ಆಡುತ್ತಿದ್ದೆವು ಈಗ ಪುಟ್ಬಾಲ್ ಪಂದ್ಯಾಟಕ್ಕೆ ಯುವಕರು ಆಕರ್ಷಿತರಾಗಿದ್ದಾರೆ. ಯುವ ಮಿತ್ರರು ಆಯೋಜಿಸಿದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು …

ಅರಂತೋಡು: ತೆಕ್ಕಿಲ್ ಸೋಕರ್ ಲೀಗ್ 2022 ಪುಟ್ಬಾಲ್ ಲೀಗ್ ಆವೃತ್ತಿ -4 ಉದ್ಘಾಟನಾ ಸಮಾರಂಭ. Read More »

Scroll to Top
Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ